ವಿರಾಜಪೇಟೆಯಲ್ಲಿ ಶಿಕ್ಷಕರ ದಿನಾಚರಣೆ
ಕೊಡಗು

ವಿರಾಜಪೇಟೆಯಲ್ಲಿ ಶಿಕ್ಷಕರ ದಿನಾಚರಣೆ

September 6, 2018

ವೀರಾಜಪೇಟೆ:  ವಿದ್ಯಾರ್ಥಿಗಳ ಜೀವನದ ಕನಸನ್ನು ಶಿಕ್ಷಕರುಗಳು ಸಾರ್ಥಕ ಪಡಿಸುವ ಮೂಲಕ ಶಿಸ್ತು ಮತ್ತು ಉತ್ತಮ ನಡತೆಯನ್ನು ನೀಡುವಂತಾಗಬೇಕು ಎಂದು ಜಿಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧಕ್ಷ ಕಿರಣ್ ಕಾರ್ಯಪ್ಪ ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ವಿರಾಜ ಪೇಟೆ ತಾಲೂಕು ಶಿಕ್ಷಕರುಗಳಿಗೆ ಪಟ್ಟಣದ ಸಂತ ಅನ್ನಮ್ಮ ಪ್ರೌಢ ಶಾಲಾ ಸಭಾಂ ಗಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಾ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನ ರೂಪಿಸುವಂತ ಮಹತ್ವವಾದ ಕಾರ್ಯ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳು ಗುರುಹಿರಿಯರಿಗೆ ಗೌರವ ನೀಡುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂತ ಅನ್ನಮ್ಮ ದೇವಾಲಯದ ಧರ್ಮ ಗುರು ಮದುಲೈ ಮುತ್ತು ಅವರು ತಮ್ಮ ಹಿತವಚನದಲ್ಲಿ ಉತ್ತಮ ಸಮಾಜವನ್ನು ಕಟ್ಟಲು ಹಾಗೂ ಮಕ್ಕಳನ್ನು ಸರಿದಾರಿಗೆ ತರುವುದು ಶಿಕ್ಷಕರಾದವರ ಜವಾಬ್ದಾರಿ. ಭ್ರಷ್ಟಚಾರವನ್ನು ಹೋಗಲಾಡಿಸಿ ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹಾತ್ವವಾದದ್ದು ಎಂದರು. ತಾಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಯಲ್ಲಿ ತಾಪಂ ಸದಸ್ಯರಾದ ಆಶಾ ಜೇಮ್ಸ್, ಸೀತಮ್ಮ, ಕಾವೇರಮ್ಮ, ಕದನೂರು ಗ್ರಾಪಂ ಅಧ್ಯಕ್ಷೆ ಶೋಭ, ಶಿಕ್ಷಣ ಇಲಾಖೆಯ ಪಿ.ಡಿ. ರತಿ, ಉತ್ತಪ್ಪ, ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ಮುಖ್ಯಾಸ್ಥರಾದ ಮಾರ್ಗರೆಟ್ ಲಸ್ರಾಧೊ, ಮುಂತಾದವರು ಉಪಸ್ಥಿತರಿ ದ್ದರು. ತಾಲೂಕಿನಲ್ಲಿ ನಿವೃತ್ತಿ ಹೊಂದಿದ 22 ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶಿಕ್ಷಣಾಧಿಕಾರಿ ಜಿ.ವಿ.ಲೋಕೇಶ್ ಸ್ವಾಗ ತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕೃತಿ ವಿಕೋಪದಲ್ಲಿ ಕೊಡಗಿನ ಸಂತ್ರಸ್ತ ರಿಗೆ ಸಭೆಯಲ್ಲಿ ಮೌನ ಆಚರಿಸಲಾ ಯಿತು, ಮೊದಲಿಗೆ ಶಿಕ್ಷಕ ಲಾಲ್ ಕುಮಾರ್ ಅವರ ಗಾನದೊಂದಿಗೆ ಕಲಾ ಶಿಕ್ಷಕ ಸತೀಶ್ ಅವರು ಚಿತ್ರ ಬಿಡಿಸಿದರು. ಹೆಚ್ಚು ಅಂಕಗಳಿ ಸಿದ ತಾಲೂಕಿನ ವಿದ್ಯಾರ್ಥಿಗಳಿಗೆ ವೇದಿಕೆ ಯಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸ ಲಾಯಿತು. ಶಿಕ್ಷಕರಾದ ಟಿ.ಕೆ.ವಾಮನ, ವರದ ರಾಜು, ಡಿ.ಚಂದನ ನಿರೂಪಿಸಿದರು. ತಾಲೂಕಿ ನದ್ಯಾಂತ ಶಿಕ್ಷಕರುಗಳು ಭಾಗವಹಿಸಿದ್ದರು.

Translate »