ಮರಕ್ಕೆ ಬೈಕ್ ಡಿಕ್ಕಿ; ಸವಾರ ಸಾವು
ಕೊಡಗು

ಮರಕ್ಕೆ ಬೈಕ್ ಡಿಕ್ಕಿ; ಸವಾರ ಸಾವು

September 6, 2018

ಗೋಣಿಕೊಪ್ಪಲು: ಸವಾರನೊಬ್ಬ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ನಡೆದಿದೆ. ಹುದಿಕೇರಿ ಏಳನೇ ಮೈಲಿನ ನಿವಾಸಿ ದಿ.ನಾಚಪ್ಪನವರ ಮಗ ನೆಲ್ಲಮಾಡ ಚೇತನ್ ರಾಯ್ (31). ಮಂಗಳ ವಾರ ಮಧ್ಯಾಹ್ನ 1.30ರ ಸುಮಾರಿಗೆ ತನ್ನ ಕೆಲಸ ಮುಗಿಸಿ ಬಾಳೆಲೆಯಿಂದ ಹುದಿಕೇರಿಯ ತನ್ನ ಮನೆಗೆ ಬೈಕ್‍ನಲ್ಲಿ ಬರುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಬೈಕ್ ಮರಕ್ಕೆ ಡಿಕ್ಕಿಯಾದ ರಭಸಕ್ಕೆ ಸಮೀಪದ ಕಾಫಿ ತೋಟದ ಒಳಗೆ ನುಗ್ಗಿ ಬಿದ್ದಿದೆ. ನರಳಾಳುತ್ತಿದ್ದ ಈತನನ್ನು ಗ್ರಾಮಸ್ಥರು ಗಮನಿಸಿ ಕೂಡಲೇ ಮೈಸೂರಿನ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಚೇತನ್ ಮೃತಪಟ್ಟಿದ್ದಾರೆ. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೊತ್ತರ ಪರೀಕ್ಷೆ ನಡೆಸಲಾಗಿದ್ದು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ವ್ಯಕ್ತಿ ಚೇತನ್ ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

Translate »