5 ಹಾಲಿ ಸದಸ್ಯರಿಗೆ ಗೆಲುವು, ಪತ್ನಿಗೆ ಗೆಲುವು, ಗೆದ್ದ-ಸೋತ ಪ್ರಮುಖರು
ಚಾಮರಾಜನಗರ

5 ಹಾಲಿ ಸದಸ್ಯರಿಗೆ ಗೆಲುವು, ಪತ್ನಿಗೆ ಗೆಲುವು, ಗೆದ್ದ-ಸೋತ ಪ್ರಮುಖರು

September 5, 2018

ಚಾಮರಾಜನಗರ:  ಚಾಮರಾಜನಗರ ನಗರಸಭೆಯ ಹಾಲಿ 11 ಮಂದಿ ಸದಸ್ಯರು ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದರು. ಇವರ ಪೈಕಿ ಐವರು ಜಯ ಗಳಿಸಿ ದ್ದಾರೆ. ಉಳಿದ 6 ಮಂದಿ ಸೋಲಿನ ರುಚಿ ಕಂಡಿದ್ದಾರೆ.

ಆರ್.ಎಂ.ರಾಜಪ್ಪ, ಎಂ.ಕಲಾವತಿ. ಆರ್.ಪಿ.ನಂಜುಂಡಸ್ವಾಮಿ, ಎಂ.ಮಹೇಶ್, ಮಹದೇವಯ್ಯ, ಗೆಲುವು ಸಾಧಿಸಿದ ಹಾಲಿ ಸದಸ್ಯರು, ಶೋಭಾ ಪುಟ್ಟಸ್ವಾಮಿ, ಎಸ್.ನಂಜುಂಡಸ್ವಾಮಿ, ಪಿ.ಚಿನ್ನಸ್ವಾಮಿ, ಶ್ರೀಕಾಂತ್, ಚಂಗುಮಣಿ, ನಾರಾಯಣಸ್ವಾಮಿ ಸೋಲುಂಡ ಹಾಲಿ ಸದಸ್ಯರು.

ಒಬ್ಬರಿಗೆ ಮಾತ್ರ ಗೆಲುವು: ಆಯ್ಕೆ ಬಯಸಿ ಮೂವರು ನಗರ ಸಭೆಯ ಮಾಜಿ ಅಧ್ಯಕ್ಷರಾದ ಎಸ್.ನಂಜುಂಡಸ್ವಾಮಿ, ಶೋಭಾ ಪುಟ್ಟಸ್ವಾಮಿ, ಚಿನ್ನಮ್ಮ ಸ್ಪರ್ಧಿಸಿದ್ದರು. ಈ ಪೈಕಿ ಚಿನ್ನಮ್ಮ ಮಾತ್ರ ಗೆಲುವು ಸಾಧಿಸಿದ್ದಾರೆ.

ಗೆದ್ದ ಮಾಜಿ ಸದಸ್ಯರು: ಈ ಬಾರಿಯ ಚುನಾವಣೆಯಲ್ಲಿ ನಾಲ್ವರು ಮಾಜಿ ಸದಸ್ಯರು ಗೆಲುವು ಸಾಧಿಸಿದ್ದಾರೆ. ಸುದರ್ಶನಗೌಡ, ಪಿ.ಸುಧಾ, ನೀಲಮ್ಮ, ಚಿನ್ನಮ್ಮ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ನಗರಸಭಾ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.
ಪತ್ನಿಗೆ ಗೆಲುವು: ಕಳೆದ ಬಾರಿ 10ನೇ ವಾರ್ಡ್‍ನಿಂದ ಕೇಶವ ಮೂರ್ತಿ ಗೆಲುವು ಸಾಧಿಸಿದ್ದರು. ಈ ಬಾರಿ ಅವರ ಪತ್ನಿ ಎಂ.ಎಸ್. ಕುಮುದ, 26ನೇ ವಾರ್ಡ್‍ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಪತಿ ಬದಲು ಪತ್ನಿ ನಗರಸಭೆ ಪ್ರವೇಶಿಸುವ ಮೂಲಕ ಗಮನ ಸೆಳೆದಿದ್ದಾರೆ.

ಪುತ್ರನಿಗೆ ಸೋಲು: ಕಳೆದ ಚುನಾವಣೆಯಲ್ಲಿ 26ನೇ ವಾರ್ಡ್‍ನಿಂದ ವಿಜಯಕುಮಾರಿ ಸ್ಪರ್ಧಿಸಿ ಗೆದ್ದರು. ಈ ಬಾರಿ ಅವರ ಪುತ್ರ ವಿ.ಶ್ರೀನಿವಾಸ ಪ್ರಸಾದ್ 20ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದಾರೆ.

ಬಂಡಾಯದಲ್ಲಿ ಒಬ್ಬರಿಗೆ ಗೆಲುವು: ಬಿಜೆಪಿಗೆ 5 ವಾರ್ಡ್‍ನಲ್ಲಿ ಹಾಗೂ ಕಾಂಗ್ರೆಸ್‍ಗೆ 3 ವಾರ್ಡ್‍ನಲ್ಲಿ ಬಂಡಾಯ ಎದು ರಾಗಿತ್ತು. ಈ ಪೈಕಿ ಬಿಜೆಪಿ ಬಂಡಾಯ ಅಭ್ಯರ್ಥಿ 17ನೇ ವಾರ್ಡ್ ನಿಂದ ಪಕ್ಷೇತರ ವಾಗಿ ಸ್ಪರ್ಧಿಸಿದ್ದ ಸಿ.ಎ.ಬಸವಣ್ಣ ಒಬ್ಬರು ಮಾತ್ರ ಗೆಲುವು ಸಾಧಿಸಿ ತಮ್ಮ ‘ಶಕ್ತಿ’ ತೋರ್ಪಡಿಸಿದ್ದಾರೆ. ಉಳಿದಂತೆ ಕಲ್ಯಾಣಿ, ಎನ್.ಮಂಜುಳ, ಬೇಬಿ, ಎಂ.ಬಸವ ರಾಜು, ರೂಪಾ ಬಂಡಾಯವಾಗಿ ಕಣಕ್ಕೆ ಇಳಿದು ಸೋತಿ ದ್ದಾರೆ. ಕಾಂಗ್ರೆಸ್‍ನಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ಪಿ.ಚಿನ್ನ ಸ್ವಾಮಿ, ಲಕ್ಷ್ಮೀ, ಮೋಹನಾಂಬ ಸೋಲುಂಡಿದ್ದಾರೆ.

ಗೆದ್ದ-ಸೋತ ಪ್ರಮುಖರು: ಆರ್.ಎಂ.ರಾಜಪ್ಪ, ಚಿನ್ನಮ್ಮ, ಎಂ.ಮಹೇಶ್, ಅಬ್ರಾರ್ ಅಹಮದ್, ಕಲಾವತಿ, ಆರ್.ಪಿ.ನಂಜುಂಡ ಸ್ವಾಮಿ, ಮಹದೇವಯ್ಯ, ಸುದರ್ಶನಗೌಡ ಗೆಲುವು ಸಾಧಿಸಿದ ಪ್ರಮುಖರಾಗಿದ್ದಾರೆ. ಎಸ್.ನಂಜುಂಡಸ್ವಾಮಿ, ಶೋಭಾ ಪುಟ್ಟ ಸ್ವಾಮಿ, ಶ್ರೀಕಾಂತ್, ಚಂಗುಮಣಿ, ಪಿ.ಚಿನ್ನಸ್ವಾಮಿ, ನಾರಾಯಣ ಸ್ವಾಮಿ ಸೋತವರಲ್ಲಿ ಪ್ರಮುಖರಾಗಿದ್ದಾರೆ.

Translate »