ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾಗಿ ಬಿಜೆಪಿಯ ಹೊರೆಯಾಲ ಮಹೇಶ್ ಆಯ್ಕೆ
ಚಾಮರಾಜನಗರ

ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾಗಿ ಬಿಜೆಪಿಯ ಹೊರೆಯಾಲ ಮಹೇಶ್ ಆಯ್ಕೆ

September 5, 2018

ಗುಂಡ್ಲುಪೇಟೆ: ತಾಲೂಕಿನ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಹೊರೆಯಾಲ ಮಹೇಶ್ ಚುನಾಯಿತರಾಗಿದ್ದಾರೆ.

ಕಳೆದ ಬಾರಿ ಅಧ್ಯಕ್ಷರಾಗಿದ್ದ ಎಸ್.ಎಂ. ಮಲ್ಲಿಕಾರ್ಜುನ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾ ವಣೆ ನಡೆಯಿತು. ಆಡಳಿತ ಮಂಡಳಿಯಲ್ಲಿ ಬಿಜೆಪಿಯ 7, ಕಾಂಗ್ರೆಸ್ 5 ಮತ್ತು 1 ನಾಮ ನಿರ್ದೇಶಿತ ನಿರ್ದೇಶಕರಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಹೊರೆಯಾಲ ಮಹೇಶ್ ಮತ್ತು ಕಾಂಗ್ರೆಸ್‍ನಿಂದ ಪಿ.ಬಿ.ರಾಜಶೇಖರ್ ನಾಮಪತ್ರ ಸಲ್ಲಿಸಿದ್ದರು.

ನಂತರ ನಡೆದ ಚುನಾವಣೆಯಲ್ಲಿ ಹೊರೆ ಯಾಲಮಹೇಶ 7 ಮತ ಪಡೆದು ಜಯ ಗಳಿಸಿದರು ಎಂದು ಚುನಾವಣಾಧಿಕಾರಿ ಯಾಗಿ ಕಾರ್ಯನಿರ್ವಹಿಸಿದ್ದ ಸಹಕಾರ ಇಲಾಖೆಯ ಸಹಾಯಕ ರಿಜಿಸ್ಟ್ರಾರ್ ರಮೇಶ್ ಪ್ರಕಟಿಸಿದರು.ಸಂಭ್ರಮಾಚರಣೆ: ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ಕಾರ್ಯ ಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಮುಖ್ಯ ರಸ್ತೆಯಿಂದ ಪ್ರವಾಸಿಮಂದಿರದವ ರೆಗೆ ಮೆರವಣಿಗೆಯಲ್ಲಿ ಸಾಗಿದರು.

ನೂತನ ಅಧ್ಯಕ್ಷರನ್ನು ಶಾಸಕ ಸಿ.ಎಸ್. ನಿರಂಜನಕುಮಾರ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಮೈಸೂರು ಬ್ಯಾಂಕ್ ನಿರ್ದೇಶಕ ಎಂ.ಪಿ.ಸುನಿಲ್, ಮಂಡಲಾಧ್ಯಕ್ಷ ಎನ್. ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಶಿವ ಪ್ರಕಾಶ್, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರಣಯ್, ನಿರ್ಗಮಿತ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನ, ಮುಖಂಡರಾದ ಸಿ.ಹುಚ್ಚೇ ಗೌಡ, ಆಲತ್ತೂರು ಕೆ.ರಾಜೇಶ್, ಎಸ್.ಸಿ. ಮಂಜುನಾಥ್, ಮಹಾದೇವಪ್ರಸಾದ್ ಅಭಿನಂದಿಸಿದರು.

Translate »