ಕೆಲ ಸಚಿವರೇ ನಿಮ್ಮ ಹಿತಶತ್ರುಗಳು, ನಿಮ್ಮ ವಿರುದ್ಧ ಶಾಸಕರ ಎತ್ತಿ ಕಟ್ಟುತ್ತಾರೆ
ಮೈಸೂರು

ಕೆಲ ಸಚಿವರೇ ನಿಮ್ಮ ಹಿತಶತ್ರುಗಳು, ನಿಮ್ಮ ವಿರುದ್ಧ ಶಾಸಕರ ಎತ್ತಿ ಕಟ್ಟುತ್ತಾರೆ

January 6, 2021

ಬೆಂಗಳೂರು, ಜ.5(ಕೆಎಂಶಿ)- ಮುಖ್ಯಮಂತ್ರಿ ಯಡಿ ಯೂರಪ್ಪ ನಾಯಕತ್ವದ ವಿರುದ್ಧ ಸಂಪುಟದಲ್ಲಿನ ಕೆಲವು ಸಹೋದ್ಯೋಗಿಗಳೇ ಪಕ್ಷದ ಶಾಸಕರನ್ನು ಎತ್ತಿ ಕಟ್ಟುತ್ತಿ ದ್ದಾರೆ. ಇದು ಎರಡನೇ ದಿನದ ಬಿಜೆಪಿ ಶಾಸಕ ರೊಂದಿಗಿನ ಸಭೆಯಲ್ಲಿ ವ್ಯಕ್ತವಾದ ಗಂಭೀರ ವಿಚಾರ. ಹಳೇ ಮೈಸೂರು, ಮಧ್ಯ ಕರ್ನಾಟಕ, ಮಲೆನಾಡು ಮತ್ತು ಕರಾವಳಿಯ ಕೆಲವು ಶಾಸಕರೊಂದಿಗೆ ಯಡಿ ಯೂರಪ್ಪ ನಡೆಸಿದ ಸಮಾಲೋಚನೆ ವೇಳೆ ಕೆಲವು ಶಾಸಕರು ತಮ್ಮ ಅಳಲು ತೋಡಿಕೊಂಡರು.

ಕೆಲವು ಸಚಿವರು ನಿಮ್ಮ ವಿರುದ್ಧವೇ ಕುತಂತ್ರ ನಡೆ ಸುತ್ತಿದ್ದಾರೆ. ಇವರಿಗೆ ಪಕ್ಷ ಮತ್ತು ಸರ್ಕಾರದ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲವಾಗಿದೆ. ಕೆಲವು ಸಚಿವರಂತೂ ನಿಮ್ಮ ಆಡಳಿತಾವಧಿ ಮುಗಿದ ನಂತರ ಯಾವ ಸರ್ಕಾರ ಬರುತ್ತದೆ, ಯಾರ ಜೊತೆ ಹೋಗಬೇಕೆಂಬ ಆಲೋ ಚನೆಯಲ್ಲೇ ನಿರತರಾಗಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವವರೂ ನಿಮ್ಮ ವಿರುದ್ಧ ತೆರೆ ಮರೆಯಲ್ಲಿ ಕತ್ತಿ ಮಸೆಯುತ್ತಿದ್ದಾರೆ. ಇವರುಗಳಿಗೆ ಪೂರ್ಣ ಅಧಿಕಾರ ನೀಡಿದ್ದೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ ವಾಗಿದೆ. ಈ ಸಚಿವರುಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿ ಸುತ್ತಿಲ್ಲ, ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುತ್ತಿಲ್ಲ ಎಂದು ದೂರಿದ್ದಾರೆ. ವಿಧಾನಸೌಧದಲ್ಲಿ ಕುಳಿತು ಈ ಸಚಿವರು ನಾಯಕತ್ವದ ವಿರುದ್ಧ ಮಸ ಲತ್ತು ನಡೆಸಿದ್ದು, ಇವರನ್ನು ಮಟ್ಟ ಹಾಕದಿದ್ದರೆ, ಮುಂದೆ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ತೊಂದರೆ ಎದುರಾಗಲಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಅವರ ಕುಟುಂಬ ಸದಸ್ಯರು ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಅಪಪ್ರಚಾರವನ್ನೂ ಈ ಸಚಿವರು ಮಾಡುತ್ತಿದ್ದಾರೆ. ನೀವು ಆರಂಭದಲ್ಲಿಯೇ ಈ ಸಚಿವರುಗಳ ವಿರುದ್ಧ ಕ್ರಮಕೈಗೊಂಡಿದ್ದರೆ, ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈಗಲಾದರೂ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಕೆಲವು ಭಾಗಗಳಲ್ಲಿ ಈಗಾಗಲೇ ಕುಡಿ ಯುವ ನೀರಿಗೆ ತೊಂದರೆ ಎದುರಾಗಿದೆ. ಜೊತೆಗೆ ಇತರ ಆಡಳಿತ ಸಮಸ್ಯೆಗಳೂ ಕಾಣಿಸಿಕೊಂಡಿವೆ, ಇವಾವುದಕ್ಕೂ ನಿಮ್ಮ ವಿರೋಧಿ ಸಚಿವರು ಗಮನ ಹರಿಸದೆ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕಾರ್ಯ ದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು. ಈ ಸಚಿವರ ಇಲಾಖಾ ಕಾರ್ಯ ಪ್ರಗತಿ ಪರಿಶೀಲನೆ ಮಾಡ ಬೇಕು, ಇವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಕೆಲವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕೋವಿಡ್ ಪರಿಸ್ಥಿತಿಯ ಅರಿವು ನಮಗೂ ಇದೆ. ಈ ಸಂದರ್ಭದಲ್ಲಿ ಹಣವನ್ನು ಅಗತ್ಯಕ್ಕೆ ತಕ್ಕಂತೆ ಸದ್ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು. ಎಲ್ಲವನ್ನೂ ಸಮಾಧಾನದಿಂದ ಆಲಿಸಿದ ಯಡಿ ಯೂರಪ್ಪ, ಎಲ್ಲ ವಿಚಾರವೂ ತಮಗೆ ತಿಳಿದಿದೆ. ಸಚಿವರ ವಿರುದ್ಧ ತಕ್ಷಣಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ನಿಮಗೆ ಆಗಿರುವ ತೊಂದರೆ ಎಲ್ಲವನ್ನೂ ಪರಿಹರಿಸುತ್ತೇನೆ. ನೀವು ಸರ್ಕಾರ ಮತ್ತು ಪಕ್ಷದ ವಿರುದ್ಧ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಬೇಡಿ. ನಿಮ್ಮ ಕ್ಷೇತ್ರಗಳ ಅಭಿವೃದ್ಧಿ ಜವಾಬ್ದಾರಿ ನನ್ನದು, ಸಂಪನ್ಮೂಲ ಕ್ರೋಢೀಕರಣ ಆಧಾ ರದ ಮೇಲೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳು ತ್ತೇನೆ ಎಂದು ಹೇಳುವ ಮೂಲಕ ಸಮಾಧಾನಪಡಿಸಿದ್ದಾರೆ.

Translate »