ಇಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನಾ ಸಮಾವೇಶ
News

ಇಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನಾ ಸಮಾವೇಶ

September 10, 2022

ಬೆಂಗಳೂರು, ಸೆ.9(ಕೆಎಂಶಿ)-ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ (ಸೆ.10) ದೊಡ್ಡ ಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಜನಸ್ಪಂದನಾ ಕಾರ್ಯಕ್ರಮದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ದೂರ ಉಳಿದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರನ್ನು ಕರೆತರಲು ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ನಾಯಕರು ಕಡೆಗಳಿಗೆಯವರೆಗೂ ನಡೆಸಿದ ಯತ್ನ ಫಲಪ್ರದವಾಗಲಿಲ್ಲ. ನಡ್ಡಾ ಬದಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗವಹಿಸಲಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ಪೂರ್ವ ತಯಾರಿ ಸಮಾವೇಶವೆಂದೇ ಇದನ್ನು ಬಿಂಬಿಸಲಾಗಿದೆ. ಸಮಾವೇಶ ಯಶಸ್ಸಿಗಾಗಿ ಮುಖ್ಯಮಂತ್ರಿಯವರು ತಮ್ಮ ಸಂಪುಟದ ಸಹೋ ದ್ಯೋಗಿಗಳ ದಂಡನ್ನೇ ನಿಯೋಜಿಸಿದ್ದಾರೆ. ಸತತ ಮೂರು ಬಾರಿ ಜನೋತ್ಸವ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಇದಕ್ಕೆ ಅಂಟಿದ್ದ ಕಳಂಕಗಳನ್ನು ಹೋಗಲಾಡಿಸಲು ಸಚಿವ ಡಾ. ಕೆ. ಸುಧಾಕರ್ ಸಮಾವೇಶ ನಡೆಯುವ ವೇದಿಕೆಯಲ್ಲಿ ಹೋಮ ಹವನ ನಡೆಸಿದ್ದರು. ಈ ಹಿಂದೆ ಕಾರಣಾಂತರ ಗಳಿಂದ ಸಮಾವೇಶ ಮುಂದೂಡಲ್ಪಟ್ಟಿತ್ತು. ಜನೋತ್ಸವ ಎಂಬ ಹೆಸರನ್ನು ಬದಲಿಸಿ, ಜನಸ್ಪಂದನಾ ಎಂಬ ಹೊಸ ಹೆಸರು ಇಟ್ಟು, ಪೂಜೆ ಪುನಸ್ಕಾರ ಮಾಡಿ, ಸಮಾವೇಶದ ಯಶಸ್ಸಿಗೆ ತಯಾರಿ ನಡೆದಿದೆ. ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಕರೆತರುವ ಪ್ರಯತ್ನ ಫಲಪ್ರದವಾಗಲಿಲ್ಲ. ಈ ಸಮಾವೇಶ ಮುಂದಿನ ವಿಧಾನಸಭಾ ಚುನಾವಣೆಗೆ ಕಹಳೆ ಊದುವ ವೇದಿಕೆಯಾಗಲಿದೆ. ಸಮಾವೇಶಕ್ಕೆ ಎರಡರಿಂದ ಐದು ಲಕ್ಷ ಕಾರ್ಯಕರ್ತರನ್ನು ಕರೆತರುವ ಯತ್ನ ನಡೆದಿದೆ.

Translate »