ಮಂಡ್ಯದಲ್ಲಿ ಬಿಜೆಪಿ ಮೌನ ಪ್ರತಿಭಟನೆ
ಮಂಡ್ಯ

ಮಂಡ್ಯದಲ್ಲಿ ಬಿಜೆಪಿ ಮೌನ ಪ್ರತಿಭಟನೆ

May 6, 2021

ಮಂಡ್ಯ, ಮೇ 5(ಮೋಹನ್‍ರಾಜ್)- ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣಾ ಫಲಿತಾಂಶದ ವೇಳೆ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಹತ್ಯೆಗೈ ದಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾ ಯಿಸಿದ ಕಾರ್ಯಕರ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯ ಕುಮಾರ್ ಮಾತನಾಡಿ, ಪಶ್ಚಿಮ ಬಂಗಾಳ ದಲ್ಲಿ ನಡೆದ ವಿಧಾನ ಸಭಾ ಚುನಾವಣೆ ವೇಳೆ ಬಿಜೆಪಿ ಪಕ್ಷದ ಆರು ಮಂದಿ ಕಾರ್ಯಕರ್ತರ ಹತ್ಯೆ ನಡೆದಿದೆ. ನೂರಾರು ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಲವು ಕಡೆ ಬಿಜೆಪಿ ಮಹಿಳಾ ಕಾರ್ಯಕರ್ತರ ಮಾನಭಂಗ ಮಾಡುವ ಪ್ರಯತ್ನಗಳೂ ನಡೆದಿವೆ. ರಾಜ್ಯದೆಲ್ಲೆಡೆ ಭಯಭೀತ ವಾತಾವರಣವನ್ನು ಸೃಷ್ಠಿ ಮಾಡಲಾಗಿದೆ ಎಂದು ಆರೋಪಿಸಿದರು.

ಕಳೆದ ಐದು ವರ್ಷಗಳಲ್ಲಿ 140ಕ್ಕಿಂತಲೂ ಹೆಚ್ಚು ಮಂದಿ ಬಿಜೆಪಿ ಕಾರ್ಯಕರ್ತರು ತೃಣಮೂಲ ಕಾಂಗ್ರೆಸ್‍ನ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. ಫಲಿತಾಂಶ ಬಂದು ಇನ್ನೂ ಎರಡು ದಿನ ಕಳೆದಿಲ್ಲ. ಆಗಲೇ ಹತ್ತಾರು ಕಡೆಗಳಲ್ಲಿ ದೌರ್ಜನ್ಯ, ಆಕ್ರಮಣ, ಮನೆಗೆ ದಾಳಿ ಮಾಡುವ ಘಟನೆಗಳು ನಡೆಯುತ್ತಿವೆ. ಬಿಜೆಪಿ ಕಾರ್ಯಕರ್ತರ ಜೊತೆಗೆ ಬಿಜೆಪಿ ಮತದಾರರ ಮೇಲೂ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಘಟನೆಗಳಿಂದಾಗಿ ಬಿಜೆಪಿ ಕಾರ್ಯಕರ್ತರು ಆತಂಕದಲ್ಲಿದ್ದಾರೆ. ಕಾರ್ಯ ಕರ್ತರನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಮಾಡಬೇಕಾಗಿದೆ. ತಕ್ಷಣ ನಮ್ಮ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ನಾವೂ ನಿಮ್ಮೊಡನೆ ಇz್ದÉೀವೆ ಎಂದು ಇಡೀ ರಾಷ್ಟ್ರದಾದ್ಯಂತ ಬಿಜೆಪಿ ಕಾರ್ಯಕರ್ತರು ಇಂದು ಮೌನ ಪ್ರತಿಭಟನೆ ನಡೆಸುವ ಮೂಲಕ ಬೆಂಬಲಕ್ಕೆ ನಿಂತಿz್ದÉೀವೆ. ಯಾರೂ ಎದೆಗುಂದುವ ಅಗತ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತರಿಗೆ ಧೈರ್ಯ ಹೇಳಿದರು.

ಪಶ್ಚಿಮ ಬಂಗಾಳದ ನಂದಿಗ್ರಾಮ, ಅರಂಬಾಗ ಸೇರಿದಂತೆ ಇತರೆ ಕಡೆಗಳಲ್ಲಿ ಬಿಜೆಪಿ ಪಕ್ಷದ ಕಚೇರಿಗಳನ್ನು ಧ್ವಂಸಗೊಳಿಸ ಲಾಗಿದೆ. ಎಬಿವಿಪಿ ಕೋಲ್ಕತ್ತಾ ಕಚೇರಿಯನ್ನು ಧ್ವಂಸ ಮಾಡಲಾಗಿದೆ. ಎಬಿವಿಪಿ ಕಾರ್ಯ ಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿಗಳ ಮನೆಗಳ ಮೇಲೂ ದಾಳಿ ನಡೆಸಿ ಅವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಟಿಎಂಸಿ ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಶ್ಚಿಮ ಬಂಗಾಳ ದಲ್ಲೇ ಬೀಡು ಬಿಟ್ದಿದ್ದಾರೆ. ಹಲ್ಲೆಗೊಳ ಗಾದ ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ಹೇಳುವ ಕೆಲಸ ಮಾಡುವುದರ ಜೊತೆಗೆ ಪರಿಸ್ಥಿತಿಯನ್ನೂ ಅವಲೋಕನ ಮಾಡುತ್ತಿದ್ದಾರೆ. ಇಂತಹ ಘಟನೆಗಳು ಮುಂದುವರಿದಲ್ಲಿ ಮುಂದೆ ರಾಷ್ಟ್ರಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಟಿ.ಎಂ.ಸಿ. ನಾಯಕರು, ಕಾರ್ಯ ಕರ್ತರಿಗೆ ಎಚ್ಚರಿಕೆ ನೀಡಿದರು.
ಪಶ್ಚಿಮ ಬಂಗಾಳದಲ್ಲಿ ಯಾವುದೇ ಹಿಂಸಾಚಾರ ನಡೆಯುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಮತ್ತು ಇತರೆ ಟಿಎಂಸಿ ನಾಯಕರು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ವೀಡಿಯೋಗಳು ನಕಲಿ ಎಂದು ಹೇಳು ತ್ತಾರೆ. ಈ ದಾಳಿಗಳನ್ನು ಅವರು ಖಂಡಿಸಿಲ್ಲ. ಈ ದಾಳಿಯ ಹಿಂದೆ ಮಮತಾ ಬ್ಯಾನರ್ಜಿ ಅವರ ಕೈವಾಡವಿದ್ದು, ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತರ ಹತ್ಯಾಕಾಂಡದ ಹಿಂದೆ ಅವರು ಇರುವುದನ್ನು ದೃಢಪಡಿಸಿದೆ ಎಂದು ದೂರಿದರು.

ಪೆÇಲೀಸರು ಮತ್ತು ಸರ್ಕಾರಿ ಅಧಿಕಾರಿ ಗಳು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿ ಸಿಕೊಂಡು ಟಿಎಂಸಿ ಕಾರ್ಯಕರ್ತರು ನಡೆಸಿದ ಹತ್ಯೆಯ ವಿಷಯದಲ್ಲಿ ಮೂಕಪ್ರೇಕ್ಷಕರಾಗಿದ್ದಾರೆ. ಈ ಬಗ್ಗೆ ತಕ್ಷಣ ಕೇಂದ್ರದಿಂದ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದರು.

ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಬಿಜೆಪಿ ಮಾಜಿ ಅಧ್ಯಕ್ಷರಾದ ನಾಗಣ್ಣಗೌಡ, ಕೆ.ಎಸ್.ದೊರೆ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜು, ಮಾಧ್ಯಮ ಪ್ರಮುಖ್ ನಾಗಾನಂದ್, ಸಹ ವಕ್ತಾರ ಚಿಕ್ಕಣ್ಣ, ಜಿಲ್ಲಾ ಕಾರ್ಯದರ್ಶಿಗಳಾದ ಎಂ.ಪಿ.ಅರುಣ್ ಕುಮಾರ್, ಕೃಷ್ಣ ಅಂಕಪ್ಪ, ಬಿ.ಕೃಷ್ಣ, ನಗರಾಧ್ಯಕ್ಷ ವಿವೇಕ್, ಜಲೇಂದ್ರ, ಬಾಣಸ ವಾಡಿ ಕೃಷ್ಣೇಗೌಡ, ಅಲ್ಪಸಂಖ್ಯಾತ ಅಧ್ಯಕ್ಷ ನಯಾಜ್‍ಪಾಷ, ಪ್ರಕೋಷ್ಠಗಳ ಸಂಚಾ ಲಕರಾದ ಜಗನ್ನಾಥಶೆಟ್ಟಿ, ರಾಘವೇಂದ್ರ, ನಾಗರಾಜು, ಚಂದ್ರಶೇಖರ್, ಹರ್ಷ ಸೇರಿ ದಂತೆ ಹಲವರು ಸರ್ಕಾರದ ಮಾರ್ಗ ಸೂಚಿಯ ನುಸಾರ ಧರಣಿಯಲ್ಲಿ ಭಾಗವಹಿಸಿದ್ದರು.

Translate »