೨೦೨೪ರಲ್ಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ
ಮೈಸೂರು

೨೦೨೪ರಲ್ಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ

March 11, 2022

ಪ್ರಧಾನಿ ನರೇಂದ್ರ ಮೋದಿ ಭವಿಷ್ಯ
ಈ ಫಲಿತಾಂಶ ಲೋಕಸಭೆÀ ಚುನಾವಣೆ ದಿಕ್ಸೂಚಿ

ಮಹಿಳೆಯರಿಂದ ಬಿಜೆಪಿಗೆ ಹೆಚ್ಚಿನ ಬೆಂಬಲ

ಬಿಜೆಪಿ ಬೆಂಬಲಿಸಿದವರಿಗೆ ಪ್ರಧಾನಿ ಕೃತಜ್ಞತೆ

ನವದೆಹಲಿ, ಮಾ.೧೦- ಇಂದು ಪ್ರಕಟವಾಗಿರುವ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ೨೦೨೪ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೪ರಲ್ಲಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣ ಹಿಡಿಯಲಿದೆ ಎಂದರು.

ಉತ್ತರ ಪ್ರದೇಶ, ಗೋವಾ, ಮಣ ಪುರ ಮತ್ತು ಉತ್ತರಾಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಬಾರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನೆರೆದಿದ್ದ ಭಾರೀ ಸಂಖ್ಯೆಯ ಕಾರ್ಯಕರ್ತರನ್ನುದ್ದೇಶಿಸಿ ಮಾತ ನಾಡಿದ ಮೋದಿ, ಉತ್ತರ ಪ್ರದೇಶದಲ್ಲಿ ೨೦೧೭ರಲ್ಲಿ ಗೆಲುವು ಸಾಧಿಸಿದ್ದರಿಂದ ೨೦೧೯ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಯಿತು ಎಂದು ತಜ್ಞರು ಹೇಳಿದ್ದರು. ೨೦೨೨ರ ಚುನಾವಣೆ ೨೦೨೪ರ ಲೋಕಸಭಾ ಚುನಾವಣೆಯನ್ನು ನಿರ್ಧರಿಸಲಿದೆ ಎಂದು ಅದೇ ತಜ್ಞರು ಹೇಳುವ ವಿಶ್ವಾಸವಿದೆ ಎಂದರು. ಪಂಜಾಬಿನಲ್ಲಿಯೂ ಪಕ್ಷ ಬೆಳವಣ ಗೆಯಾಗುತ್ತಿರು ವುದನ್ನು ನೋಡುತ್ತಿದ್ದೇನೆ. ಅಲ್ಲಿನ ಎಲ್ಲಾ ಬಿಜೆಪಿ ಕಾರ್ಯಕರ್ತ ರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪಂಜಾಬಿನಲ್ಲಿ ಈ ರೀತಿಯಲ್ಲಿ ಬಿಜೆಪಿಯನ್ನು ಮುಂದಕ್ಕೆ ತಂದಿರುವುದು ಶ್ಲಾಘನೀಯವಾಗಿದೆ. ಮುಂಬರುವ ವರ್ಷಗಳಲ್ಲಿ ಬಿಜೆಪಿ ಬೆಳವಣ ಗೆಯನ್ನು ಅಲ್ಲಿಯೂ ನೋಡುವುದಾಗಿ ಹೇಳಿದರು. ಪಂಜಾಬಿನಲ್ಲಿ ತಳಮಟ್ಟಕ್ಕೂ ನಮ್ಮ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ತಲುಪಿಸಲಾಗುವುದು. ಬಡವರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವವರೆಗೂ ವಿರಮಿಸುವುದಿಲ್ಲ ಎಂದು ಮೋದಿ ತಿಳಿಸಿದರು. ರಷ್ಯಾ-ಉಕ್ರೇನ್ ಯುದ್ಧದ ನಂತರ ನಾವು ಆಮದು ಮಾಡಿಕೊಳ್ಳುತ್ತಿದ್ದ ಸೂರ್ಯಕಾಂತಿ ಅಡುಗೆ ಎಣ್ಣೆ, ಕಲ್ಲಿದ್ದಲು, ಗ್ಯಾಸ್, ರಸಗೊಬ್ಬರ ದರದಲ್ಲಿ ಏರಿಕೆಯಾಗಿದೆ. ಭಾರತ ಶಾಂತಿಯನ್ನು ಬಯಸುತ್ತದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ನರೇಂದ್ರ ಮೋದಿ ಹೇಳಿದರು. ಬಿಜೆಪಿಯ ಬಡವರ ಪರ ಮತ್ತು ಸಕ್ರಿಯ ಆಡಳಿತಕ್ಕೆ ಜನರ ಬೆಂಬಲ ಎಂಬುದನ್ನು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ ಎಂದು ಬಣ ್ಣಸಿದರು. ಮಾ.೧೦ರಿಂದ ಹೋಳಿ ಆರಂಭವಾಗಲಿದೆ ಎಂದು ನಾವು ಮೊದಲೇ ಹೇಳಿದ್ದೆವು. ಇದು ನಮ್ಮ ಎನ್‌ಡಿಎ ಕಾರ್ಯಕರ್ತರ ‘ವಿಜಯ-೪’ ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದ್ದಕ್ಕಾಗಿ, ಬಿಜೆಪಿಗೆ ವಿಜಯವನ್ನು ಖಚಿತಪಡಿಸಿದ್ದಕ್ಕಾಗಿ ನಾನು ಎಲ್ಲಾ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದೇ ಮೊದಲ ಬಾರಿಗೆ ೨ನೇ ಅವಧಿಗೆ ಸಿಎಂ ಆಯ್ಕೆಯಾಗಿದ್ದಾರೆ (ಯೋಗಿ ಆದಿತ್ಯನಾಥ್) ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಈ ಚುನಾವಣೆಗಳಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರು ನಮಗೆ ಆಶೀರ್ವಾದ ಮಾಡಿದ್ದಾರೆ. ಮಹಿಳಾ ಮತದಾರರು ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿ ನಾವು ಅದ್ಭುತವಾಗಿ ಗೆದ್ದಿದ್ದೇವೆ. ಈ ವಿಜಯದಲ್ಲಿ ನಮ್ಮ ನಾರಿ ಶಕ್ತಿ ನಮ್ಮ ಪಾಲುದಾರರಾಗಿದ್ದಾರೆ ಎಂದು ಸ್ಮರಿಸಿದ್ದಾರೆ. ಗೋವಾದಲ್ಲಿ ಎಲ್ಲಾ ಎಕ್ಸಿಟ್ ಪೋಲ್‌ಗಳು ತಪುö್ಪ ಎಂಬುದು ಸಾಬೀತಾಗಿದೆ. ಉತ್ತರಾಖಂಡದಲ್ಲಿ ಬಿಜೆಪಿ ಹೊಸ ಇತಿಹಾಸ ಬರೆದಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಪಕ್ಷವೊಂದು ಸತತ ೨ನೇ ಅವಧಿಗೆ ಅಧಿಕಾರಕ್ಕೆ ಬಂದಿದೆ ಎಂದು ೪ ರಾಜ್ಯಗಳ ಚುನಾವಣಾ ಫಲಿತಾಂಶ ಕುರಿತು ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.

Translate »