ಯುಪಿಯಲ್ಲಿ ಯೋಗಿಗೆ ಮತ್ತೆ ಅಧಿಕಾರ ಯೋಗ
ಮೈಸೂರು

ಯುಪಿಯಲ್ಲಿ ಯೋಗಿಗೆ ಮತ್ತೆ ಅಧಿಕಾರ ಯೋಗ

March 11, 2022

ಉತ್ತರಾಖಂಡದಲ್ಲೂ ಮತ್ತೆ ಬಿಜೆಪಿಗೆ ಅಧಿಕಾರ, ಮಣ ಪುರ, ಗೋವಾದಲ್ಲೂ ಅರಳಿದ ಕಮಲ

ಪಂಜಾಬ್‌ನಲ್ಲಿ ಮೊದಲ ಬಾರಿಗೆ ಆಮ್ ಆದ್ಮಿ ಕಮಾಲ್

ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಉತ್ತರಪ್ರದೇಶ, ಉತ್ತರಾಖಂಡ್, ಮಣ ಪುರ, ಗೋವಾ ದಲ್ಲೂ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣ ಹಿಡಿಯಲು ಸಜ್ಜಾಗಿದ್ದು, ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ ಅಧಿಕಾರ ಗದ್ದುಗೆ ಏರಲಿದೆ. ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ಪಂಜಾಬ್ ಅನ್ನು ಕಳೆದುಕೊಂಡು ಹೀನಾಯವಾಗಿ ಸೋಲ ನನುಭವಿಸಿದೆ. ಗೋರಖ್‌ಪುರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ಷ ಮತಗಳ ಅಂತರದಿAದ ಜಯಗಳಿಸಿದ್ದಾರೆ.
ಉತ್ತರಪ್ರದೇಶ: ಉತ್ತರಪ್ರದೇಶದ ಒಟ್ಟು ೪೦೩ ಕ್ಷೇತ್ರಗಳ ಪೈಕಿ ಬಿಜೆಪಿ ೨೭೪ ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣ ಹಿಡಿದಿದೆ. ಕಳೆದ ಚುನಾವಣೆಯಲ್ಲಿ ೭೪ ಸ್ಥಾನ ಪಡೆದಿದ್ದ ಸಮಾಜವಾದಿ ಪಾರ್ಟಿ, ಈಗ ೧೨೪ ಸ್ಥಾನಗಳನ್ನು ಪಡೆದು ಚೇತರಿಸಿಕೊಂಡಿದ್ದರೆ, ಕಳೆದ ಬಾರಿ ೧೯ ಸ್ಥಾನ ಪಡೆದಿದ್ದ ಬಿಎಸ್‌ಪಿ ಈ ಚುನಾ ವಣೆಯಲ್ಲಿ ಕೇವಲ ಒಂದು ಸ್ಥಾನವನ್ನು ಪಡೆದು ಹೀನಾಯ ಸ್ಥಿತಿಗೆ ಕುಸಿದಿದೆ. ಕಳೆದ ಚುನಾವಣೆಯಲ್ಲಿ ೭ ಸ್ಥಾನದಲ್ಲಿ ಗೆಲುವು ಸಾಧಿ ಸಿದ್ದ ಕಾಂಗ್ರೆಸ್ ಈ ಬಾರಿ ಕೇವಲ ೨ ಸ್ಥಾನ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಇತ ರರು ೨ ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಉತ್ತರಪ್ರದೇಶದಲ್ಲಿ ಆಡಳಿತ ಪಕ್ಷವೇ ಚುನಾವಣೆಯಲ್ಲಿ ಗೆದ್ದು ಎರಡನೇ ಬಾರಿಗೆ ಅಧಿಕಾರ ಗಿಟ್ಟಿಸಿಕೊಂಡು ೩೭ ವರ್ಷವಾಗಿತ್ತು. ೧೯೮೫ ರಂದು ಆಡಳಿತ ಪಕ್ಷ ೨ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದನ್ನು ಹೊರತುಪಡಿಸಿದರೆ, ಈಗ ಬಿಜೆಪಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. ೧೯೫೫ರಿಂದ ೬೧ರವರೆಗಿನ ಎರಡು ಅವಧಿಗೆ ಸತತವಾಗಿ ಗೋವಿಂದ ವಲ್ಲಭ ಪಂತ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಆನಂತರ ಈವರೆವಿಗೂ ಯಾರೂ ಸತತ ೨ನೇ ಬಾರಿ ಮುಖ್ಯಮಂತ್ರಿಯಾಗಿಲ್ಲ. ಈ ಚುನಾ ವಣೆಯಲ್ಲಿ ಬಿಜೆಪಿ ಸತತ ೨ನೇ ಬಾರಿ ಅಧಿಕಾರದ ಗದ್ದುಗೆ ಏರುತ್ತಿದ್ದು, ಯೋಗಿ ಆದಿತ್ಯ ನಾಥ್ ಅವರೇ ಮತ್ತೆ ಮುಖ್ಯಮಂತ್ರಿ ಆದಲ್ಲಿ ಅವರು ೫೧ ವರ್ಷದ
ಬಳಿಕ ಸತತ ೨ನೇ ಬಾರಿ ಮುಖ್ಯಮಂತ್ರಿ ಆದ ಮತ್ತೊಂದು ಸಾಧನೆಗೆ ಭಾಜನರಾಗುತ್ತಾರೆ.

ಉತ್ತರಾಖಂಡ: ಉತ್ತರಾಖಂಡದಲ್ಲೂ ಮತ್ತೆ ಬಿಜೆಪಿ ಗೆಲುವಿನ ನಗೆ ಬೀರಿದೆ. ಒಟ್ಟು ೭೦ ಸ್ಥಾನಗಳ ಪೈಕಿ ೪೮ ಸ್ಥಾನಗಳನ್ನು ಪಡೆದು ಬಿಜೆಪಿ ಭರ್ಜರಿ ಜಯ ಗಳಿಸಿದೆ. ಕಾಂಗ್ರೆಸ್ ೧೮ ಸ್ಥಾನ ಪಡೆದರೆ ಬಿಎಸ್‌ಪಿ ೨ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಇಬ್ಬರು ಇತರರು ಗೆಲುವು ಸಾಧಿಸಿದ್ದು, ಈ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
ಮಣ ಪುರ: ಮಣ ಪುರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಒಟ್ಟು ೬೦ ಕ್ಷೇತ್ರಗಳ ಪೈಕಿ ೩೦ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಮಣ ಪುರ ಪೀಪಲ್ ಪಾರ್ಟಿ (ಎಂಪಿಪಿ) ೮ ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅನ್ನು ಹಿಂದಿಕ್ಕಿದೆ. ಜೆಡಿಯು ೬ ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ ಕೇವಲ ೪ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಬಿಜೆಪಿ ಹೊರತುಪಡಿಸಿ ೨ನೇ ಸ್ಥಾನವನ್ನು ಇತರರೇ ಗಳಿಸಿರುವುದು ವಿಶೇಷವಾಗಿದ್ದು, ೧೦ ಮಂದಿ ಇತರರು ಗೆಲುವಿನ ನಗೆ ಬೀರಿದ್ದಾರೆ.

ಗೋವಾ: ಪುಟ್ಟ ರಾಜ್ಯ ಗೋವಾದಲ್ಲಿ ಸ್ಪಷ್ಟ ಬಹುಮತ ಪಡೆಯಲು ಬಿಜೆಪಿಗೆ ಕೇವಲ ಒಂದು ಸ್ಥಾನ ಮಾತ್ರ ಕೊರತೆಯಾಗಿದ್ದು, ಈಗಾಗಲೇ ಮೂವರು ಪಕ್ಷೇತರರು ಬಿಜೆಪಿ ಬೆಂಬಲಿಸುವುದಾಗಿ ಘೋಷಿಸಿರುವುದರಿಂದ ಈ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣ ಹಿಡಿಯಲಿದೆ. ಒಟ್ಟು ೪೦ ಸ್ಥಾನಗಳ ಪೈಕಿ ಬಿಜೆಪಿ ೨೦ ಸ್ಥಾನ ಪಡೆದಿದ್ದು, ಈ ರಾಜ್ಯದಲ್ಲಿ ಅಧಿಕಾರವನ್ನು ಹಿಡಿದೇ ತೀರುತ್ತೇವೆ ಎಂದು ಹೇಳುತ್ತಿದ್ದ ಕಾಂಗ್ರೆಸ್ ೧೨ ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಯಿತು. ಆಮ್ ಆದ್ಮಿ ಪಕ್ಷ ೩ ಸ್ಥಾನಗಳೊಂದಿಗೆ ಗೋವಾದಲ್ಲಿ ತನ್ನ ಖಾತೆ ತೆರೆದಿದೆ. ಟಿಎಂಸಿ ೨ ಸ್ಥಾನಗಳನ್ನು ಪಡೆದರೆ, ಮೂವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಪಂಜಾಬ್: ದೆಹಲಿಯಲ್ಲಿ ಸತತ ೨ ಬಾರಿ ಅಧಿಕಾರದ ಚುಕ್ಕಾಣ ಹಿಡಿದಿದ್ದ ಆಮ್ ಆದ್ಮಿ ಪಕ್ಷ ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣ ಹಿಡಿದಿದೆ. ಈ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲನನುಭವಿಸಿದೆ. ಒಟ್ಟು ೧೭೭ ಸ್ಥಾನಗಳಿರುವ ಪಂಜಾಬ್ ವಿಧಾನಸಭೆಯಲ್ಲಿ ಬಹುಮತಕ್ಕೆ ೫೯ ಸ್ಥಾನ ಬೇಕಾಗಿತ್ತು. ಆದರೆ ಆಮ್ ಆದ್ಮಿ ಪಕ್ಷ ೯೨ ಸ್ಥಾನಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ೧೮ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಅಕಾಲಿ ದಳ ೪ ಸ್ಥಾನಗಳನ್ನು ಪಡೆದರೆ, ಬಿಜೆಪಿ ಕೇವಲ ೨ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಓರ್ವ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಪಂಜಾಬ್‌ನಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯ ತಂತ್ರ ರೂಪಿಸಿ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಕೆಳಗಿಳಿಸಿ ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಈ ಬದಲಾವಣೆ ಬಗ್ಗೆ ಅಸಮಾಧಾನ ಹೊಂದಿದ್ದ ಪಕ್ಷದ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿದ್ದು ಚುನಾವಣೆ ವೇಳೆ ಹಲವು ಕ್ಷೇತ್ರಗಳಿಗೆ ಭೇಟಿ ನೀಡದೆ ತಮ್ಮದೇ ಆದ ಕಾರ್ಯತಂತ್ರ ರೂಪಿಸಿದ್ದರು. ಕಾಂಗ್ರೆಸ್ಸಿಗರ ಈ ಗುಂಪುಗಾರಿಕೆಯಿAದಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಚನ್ನಿ ಮತ್ತು ನವಜೋತ್ ಸಿಂಗ್ ಸಿದ್ದು ಕೂಡ ಪರಾಭವಗೊಂಡು ಮುಖಭಂಗ ಅನುಭವಿಸಬೇಕಾಯಿತು. ಮತ್ತೊಂದೆಡೆ ಪಂಜಾಬ್‌ನಲ್ಲಿ ಅಧಿಕಾರ ಹಿಡಿಯಬೇಕು ಎಂದು ಕಾರ್ಯತಂತ್ರ ರೂಪಿಸಿದ್ದ ಆ್ಯಮ್ ಆದ್ಮಿ ಪಕ್ಷ ಚುನಾವಣೆ ಪೂರ್ವದಲ್ಲೇ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದು, ಆ ಪಕ್ಷಕ್ಕೆ ಅನುಕೂಲವಾಯಿತು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಅಲ್ಲದೆ ಆ್ಯಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ನೀಡಿದಂತಹ ಅತ್ಯುತ್ತಮ ಆಡಳಿತವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದರು. ದೆಹಲಿಯ ನಂತರ ಎರಡನೇ ರಾಜ್ಯವಾಗಿ ಪಂಜಾಬ್‌ನಲ್ಲಿ ಆ್ಯಮ್ ಆದ್ಮಿ ಪಕ್ಷ ಆಡಳಿತದ ಚುಕ್ಕಾಣ ಹಿಡಿದು ಅಚ್ಚರಿ ಮೂಡಿಸಿತು.

Translate »