ಏ.೨೬ರಿAದ ಸಿಬಿಎಸ್‌ಇ ೧೦, ೧೨ನೇ ತರಗತಿ ಪರೀಕ್ಷೆ
ಮೈಸೂರು

ಏ.೨೬ರಿAದ ಸಿಬಿಎಸ್‌ಇ ೧೦, ೧೨ನೇ ತರಗತಿ ಪರೀಕ್ಷೆ

March 12, 2022

ನವದೆಹಲಿ, ಮಾ.೧೧- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ೧೦ ಮತ್ತು ೧೨ನೇ ತರಗತಿಯ ಎರಡನೇ ಅವಧಿಯ ಬೋರ್ಡ್ ಪರೀಕ್ಷೆಗಳು ಏಪ್ರಿಲ್ ೨೬ ರಿಂದ ಪ್ರಾರಂಭವಾಗಲಿವೆ.

ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ೨೦೨೧-೨೨ನೇ ಶೈಕ್ಷಣ ಕ ವರ್ಷದಲ್ಲಿ ೧೦ ಮತ್ತು ೧೨ನೇ ತರ ಗತಿಯ ಪಠ್ಯಕ್ರಮವನ್ನು ಬದಲಾ ಯಿಸಿ ಎರಡು ಅವಧಿಗಳಿಗೆ ವಿಂಗಡಿಸ ಲಾಗಿದ್ದು, ಪ್ರತಿ ಅವಧಿಯ ಕೊನೆ ಯಲ್ಲಿ ಸಿಬಿಎಸ್‌ಇ ಪರೀಕ್ಷೆಗಳನ್ನು ನಡೆಸುತ್ತಿದೆ. ಟರ್ಮ್ I ಪರೀಕ್ಷೆಗಳು ಈಗಾಗಲೇ ಮುಗಿದಿದ್ದು, ೧೦ ಮತ್ತು ೧೨ ಎರಡೂ ತರಗತಿಗಳಿಗೆ ಟರ್ಮ್- II ಪರೀಕ್ಷೆಗಳು ಏಪ್ರಿಲ್ ೨೬ ರಿಂದ ಪ್ರಾರಂಭವಾಗುತ್ತವೆ. ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳು ಬಂದ್ ಆಗಿದ್ದನ್ನು ಗಮನದಲ್ಲಿಟ್ಟುಕೊಂಡು ೨ ಪರೀಕ್ಷೆಗಳ ನಡುವೆ ಸಾಕಷ್ಟು ಅಂತರವನ್ನು ನೀಡಲಾಗಿದೆ ಎಂದು ಸಿಬಿಎಸ್‌ಇ ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Translate »