ಗುಂಡ್ಲುಪೇಟೆ ಗುಡ್ಡ ಕುಸಿತ ಪ್ರಕರಣ ಕ್ವಾರಿ ಗುತ್ತಿಗೆದಾರನ ಬಂಧನ
ಮೈಸೂರು

ಗುಂಡ್ಲುಪೇಟೆ ಗುಡ್ಡ ಕುಸಿತ ಪ್ರಕರಣ ಕ್ವಾರಿ ಗುತ್ತಿಗೆದಾರನ ಬಂಧನ

March 12, 2022

ಚಾಮರಾಜನಗರ, ಮಾ.೧೧(ಎಸ್‌ಎಸ್)-ಗುಂಡ್ಲುಪೇಟೆ ತಾಲೂಕಿನ ಮಡ ಹಳ್ಳಿ ಗ್ರಾಮದ ಬಳಿ ಕಲ್ಲುಗಣ ಗಾರಿಕೆ ನಡೆಯುತ್ತಿದ್ದ ಕ್ವಾರಿ ಗುಡ್ಡ ಕುಸಿತ ಪ್ರಕ ರಣಕ್ಕೆ ಸಂಬAಧಿಸಿದAತೆ ಕ್ವಾರಿ ಗುತ್ತಿಗೆ ಪಡೆದಿದ್ದ ಮಹೇಂದ್ರಪ್ಪ ಅವರನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.

ಮಡಹಳ್ಳಿ ಬಳಿ ನಡೆಯುತ್ತಿದ್ದ ಬಿಳಿ ಕಲ್ಲು ಕ್ವಾರಿಯಲ್ಲಿ ಮಾ.೪ರಂದು ಗುಡ್ಡ ಕುಸಿತಗೊಂಡು ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದರು. ಪ್ರಕರಣದ ಸಂಬAಧ ಗುಂಡ್ಲುಪೇಟೆ ಪೊಲೀಸ್ ಠಾಣೆ ಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ದುರಂತ ನಡೆದ ದಿನವೇ (ಮಾ.೪) ಕ್ವಾರಿ ಮ್ಯಾನೇಜರ್ ನವೀದ್ ನನ್ನು ಪೊಲೀಸರು ಬಂಧಿಸಿದ್ದರು. ತಲೆ ಮರೆಸಿಕೊಂಡಿದ್ದ ಮೊದಲ ಆರೋಪಿ ಮಹೇಂದ್ರಪ್ಪ ಹಾಗೂ ಎರಡನೇ ಆರೋಪಿ ಕ್ವಾರಿಯನ್ನು ಉಪಗುತ್ತಿಗೆ ಪಡೆದಿದ್ದಾನೆ ಎನ್ನ ಲಾದ ಹಕೀಬ್ ತಲೆಮರೆಸಿಕೊಂಡಿದ್ದರು.

Translate »