ಉಕ್ರೇನ್‌ನಲ್ಲಿ ಭಾರೀ ಹಿಮಪಾತ: ಕಂಗೆಟ್ಟ ರಷ್ಯಾ ಸೇನೆ
ಮೈಸೂರು

ಉಕ್ರೇನ್‌ನಲ್ಲಿ ಭಾರೀ ಹಿಮಪಾತ: ಕಂಗೆಟ್ಟ ರಷ್ಯಾ ಸೇನೆ

March 12, 2022

ಕೀವ್, ಮಾ.೧೧- ಉಕ್ರೇನ್ ಸೈನಿಕರು ಹಾಗೂ ನಾಗರಿಕರ ವೀರಾವೇಶದ ಹೋರಾಟದ ನಡುವೆ ಉಕೇನ್ ರಾಜಧಾನಿ ಕೀವ್ ನಗರದಲ್ಲಿ ರಷ್ಯಾ ಸೈನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಲ್ಲಿ-೨೦ ಡಿಗ್ರಿ ತಾಪಮಾನದಲ್ಲಿ ರಷ್ಯಾ ಟ್ಯಾಂಕರ್‌ಗಳು ಐಸ್ ಗೆಡ್ಡೆಗಳಂತಾಗಿದ್ದು, ಅದರಲ್ಲಿ ಕುಳಿತು ಯುದ್ದ ಮುಂದುವರೆ ಸಲು ಅಸಾಧ್ಯವಾದ ಪರಿಸ್ಥಿತಿಯಲ್ಲಿ ರಷ್ಯಾ ಸೈನಿಕರು ಕಂಗೆಟ್ಟಿದ್ದಾರೆ. ಉಕ್ರೇನ್ ಸೈನಿಕರು ಹಾಗೂ ನಾಗರಿಕರು ನಡೆಸುತ್ತಿರುವ ದಾಳಿ ಎದುರಿಸಲಾಗದೇ ರಷ್ಯಾ ಯೋಧರು ಟ್ಯಾಂಕರ್‌ಗಳಿAದ ಇಳಿದು ದಿಕ್ಕಾ ಪಾಲಾಗಿ ಓಡುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಪುಷ್ಟೀಕರಿಸುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸಿ÷್ಕ ಅವರು ನಮ್ಮ ಸೇನೆ ವಿಜಯದತ್ತ ದಾಪುಗಾಲು ಹಾಕುತ್ತಿದೆ. ನಮಗೆ ಯಾವಾಗ ಜಯ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಯುದ್ಧದಲ್ಲಿ ಗೆಲ್ಲುವುದೇ ನಮ್ಮ ಪ್ರಮುಖ ಗುರಿ ಎಂದು ಘೋಷಿಸಿರುವುದು ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗುತ್ತಿದೆ. ಉಕ್ರೇನ್‌ನಲ್ಲಿ ರಾಸಾ ಯನಿಕ ಮತ್ತು ಜೈವಿಕ ಆಯುಧಗಳಿಗೆ ಸಂಬAಧಿಸಿದ ಪ್ರಯೋಗಗಳು ನಡೆಯುತ್ತಿವೆ. ಚೆರ್ನೋಬಿಲ್ ಅಣು ಸ್ಥಾವರದಲ್ಲಿ ಅಣು ಆಯುಧಗಳನ್ನು ತಯಾರಿಸಲಾಗುತ್ತಿದೆ ಎಂಬ ರಷ್ಯಾ ಆರೋಪವನ್ನು ತಿರಸ್ಕರಿಸಿರುವ ಝೆಲೆನ್ಸಿ÷್ಕ, ನಾನು ಒಂದು ದೇಶದ ಅಧ್ಯಕ್ಷ ಜೊತೆಗೆ ಇಬ್ಬರು ಮಕ್ಕಳ ತಂದೆ. ಸಾಮೂಹಿಕ ನರಮೇಧಕ್ಕೆ ಸಂಬAಧಿಸಿದ ಯಾವುದೇ ಶಸ್ತಾçಸ್ತçಗಳನ್ನು ನಮ್ಮ ದೇಶದಲ್ಲಿ ತಯಾರಿಸುವುದಿಲ್ಲ. ಅಂತಹ ಆಯುಧ ಗಳನ್ನು ರಷ್ಯಾದಲ್ಲಿ ಮಾತ್ರ ತಯಾರಿಸಲಾ ಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಮತ್ತೊಂದೆಡೆ ಪುಟ್ಟ ರಾಷ್ಟç ಉಕ್ರೇನ್ ಮೇಲಿನ ಯುದ್ಧದಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದ ರಷ್ಯಾ ಅಧ್ಯಕ್ಷ ಪುಟಿನ್ ತನ್ನ ಸೇನೆಯ ೮ ಕಮಾಂಡರ್‌ಗಳನ್ನು ಅಮಾನತು ಮಾಡಿದ್ದಾರೆ. ಬೆಲಾರಸ್‌ನಿಂದ ಕಾರ್ಯಾ ಚರಣೆಗೆ ಇಳಿದ ರಷ್ಯಾ ಸೇನೆ ಅಲ್ಲಿಂದ ಕೇವಲ ೩೨ ಕಿಮೀ ಅಂತರದಲ್ಲಿರುವ ಕೀವ್ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ೧೬ ದಿನಗಳಿಂದಲೂ ಹೆಣಗಾಡುವಂತಾಗಿದೆ. ಬೆಲಾರಸ್ ಮತ್ತು ಕೀವ್ ನಡುವೆ ಇರುವ ಮರಿಯಾಪೋಲ್ ನಗರದಲ್ಲಿ ಮಾತ್ರ ರಷ್ಯಾ ಸೇನೆಯ ಆರ್ಭಟ ನಡೆಯುತ್ತಿದೆಯಾದರೂ ಕೀವ್ ನಗರವನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಕೀವ್ ಪ್ರವೇಶಿಸುತ್ತಿರುವ ಹಾಗೂ ಈಗಾಗಲೇ ನಗರದೊಳಗೆ ನುಸುಳಿರುವ ರಷ್ಯಾ ಟ್ಯಾಂಕರ್‌ಗಳ ಮೇಲೆ ಉಕ್ರೇನ್ ಸೈನಿಕರು ಭೀಕರ ದಾಳಿ ನಡೆಸಿ ಹಿಮ್ಮೆಟ್ಟಿ ಸುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಮತ್ತೊಂದೆಡೆ ಮರಿಯಾಪೋಲ್ ನಗರದ ರಸ್ತೆಗಳಲ್ಲಿ ಉಕ್ರೇನ್ ಸೈನಿಕರು ಹಾಗೂ ನಾಗರಿಕರ ಶವಗಳು ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿದ್ದು, ಇಂದು ಈ ಮೃತದೇಹಗಳ ಸಾಮೂಹಿಕ ಅಂತ್ಯಕ್ರಿಯೆಯನ್ನು ಮರಿಯಾಪೋಲ್ ನಗರಾಡಳಿತ ನೆರವೇರಿಸಿದೆ. ದೊಡ್ಡ ಗುಂಡಿಯಲ್ಲಿ ಪ್ರತ್ಯೇಕವಾಗಿ ಪ್ಯಾಕ್ ಮಾಡಿದ ಶವಗಳನ್ನು ಹಾಕಿ ಮುಚ್ಚಿದ ನಂತರ ಅದರ ಮೇಲೆ ಕ್ರಾಸ್ ಗುರುತು ಹಾಕಲಾಗುತ್ತಿದೆ.

ಮತ್ತೊಂದೆಡೆ ಖಾರ್ಕಿವ್ ವಸತಿ ಪ್ರದೇಶದಲ್ಲಿ ರಷ್ಯಾ ಪಡೆಗಳ ಆರ್ಭಟ ಹೆಚ್ಚಾಗಿದೆ. ಇಝಿಯಮ್ ಪಟ್ಟಣದ ಬಳಿ ಇರುವ ಹಲವು ವೈದ್ಯಕೀಯ ಆಸ್ಪತ್ರೆ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸಿರುವುದಾಗಿ ಉಕ್ರೇನ್ ಆರೋಪಿಸಿದೆ. ಈ ದಾಳಿ ಯುದ್ಧ ಅಪರಾಧ ಎಂದು ಉಕ್ರೇನ್ ಹೇಳಿದೆ. ಖಾರ್ಕಿವ್ ವಸತಿ ಪ್ರದೇಶದಲ್ಲಿ ಒಂದೇ ದಿನ ೮೯ ಶೆಲ್ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಹೇಳಿದೆ.

ಯುರೋಪ್ ಒಕ್ಕೂಟಕ್ಕೆ ಉಕ್ರೇನ್ ಸೇರ್ಪಡೆ
ಕೀವ್, ಮಾ.೧೧-ತನ್ನ ಮೇಲೆ ಯುದ್ಧ ಸಾರಿರುವ ಬಲಿಷ್ಠ ರಾಷ್ಟç ರಷ್ಯಾಗೆ ಸೆಡ್ಡು ಹೊಡೆದು ವೀರಾವೇಶದಿಂದ ಹೋರಾಡುತ್ತಿರುವ ಉಕ್ರೇನ್‌ಗೆ ಇದೀಗ ಯುರೋಪ್ ಒಕ್ಕೂಟದ ಸದಸ್ಯತ್ವ ದೊರೆತಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸಿ÷್ಕ ಅವರು ನ್ಯಾಟೋ ಮತ್ತು ಯುರೋಪ್ ಒಕ್ಕೂಟದ ಸದಸ್ಯತ್ವವನ್ನು ಕೋರಿದ್ದರು. ಈ ಉಕ್ರೇನ್‌ಗೆ ಸದಸ್ಯತ್ವ ನೀಡಲು ಯುರೋಪ್ ಒಕ್ಕೂಟ ಒಪ್ಪಿಗೆ ಸೂಚಿಸಿದ್ದು ಆನೆಬಲ ಬಂದAತಾಗಿದೆ. ಯುರೋಪ್ ಒಕ್ಕೂಟವು ಯುದ್ಧದ ಸಂದರ್ಭದಲ್ಲಿ ತನ್ನ ಸದಸ್ಯ ರಾಷ್ಟçಗಳಿಗೆ ಬೆಂಬಲ ಸೂಚಿಸುತ್ತದೆ. ಈಗಾಗಲೇ ಪಾಶ್ಚಿಮಾತ್ಯ ರಾಷ್ಟçಗಳಿಂದ ಉಕ್ರೇನ್‌ಗೆ ಶಸ್ತಾçಸ್ತçಗಳು ಸರಬರಾಜಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪುಟ್ಟ ರಾಷ್ಟç ಉಕ್ರೇನ್ ಎದುರು ಯುದ್ಧ ಸಾರಿರುವ ರಷ್ಯಾ ಗೆಲುವು ಸಾಧಿಸಲಾಗದೇ ಕಂಗಾಲಾಗಿದೆ. ಈ ನಡುವೆ ಉಕ್ರೇನ್‌ಗೆ ಯುರೋಪ್ ಒಕ್ಕೂಟದ ಸದಸ್ಯತ್ವವೂ ದೊರೆತಿರುವುದು ರಷ್ಯಾಗೆ ಮತ್ತೊಂದು ತಲೆನೋವಾಗಿ ಪರಿಗಣ ಸಿದೆ.

Translate »