ಬಹುರೂಪಿ ರಂಗೋತ್ಸವಕ್ಕೆ ಇಂದು ಚಾಲನೆ
ಮೈಸೂರು

ಬಹುರೂಪಿ ರಂಗೋತ್ಸವಕ್ಕೆ ಇಂದು ಚಾಲನೆ

March 12, 2022

 ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ತುಳಸೀಗೌಡರಿಂದ ಉದ್ಘಾಟನೆ

 ೩೫ ನಾಟಕ, ೨೪ ಚಲನಚಿತ್ರ ಪ್ರದರ್ಶನ, ಕರಕುಶಲ ಮೇಳ

ಮೈಸೂರು, ಮಾ.೧೧(ಎಸ್‌ಬಿಡಿ)- ಮೈಸೂರು ರಂಗಾಯಣ ದಲ್ಲಿ `ತಾಯಿ’ ಧ್ಯೇಯ ವಾಕ್ಯದ, ಹೃದಯ ಸ್ಪರ್ಶಿ `ಬಹು ರೂಪಿ’ ರಾಷ್ಟಿçÃಯ ರಂಗೋತ್ಸವಕ್ಕೆ ನಾಳೆ (ಮಾ.೧೨) ಚಾಲನೆ ದೊರಕಲಿದ್ದು, ಮುನ್ನಾ ದಿನವಾದ ಇಂದು ಬಹು ರೂಪಿ ಭಾಗವಾದ `ಜನಪದೋತ್ಸವ’ ಆರಂಭಗೊAಡಿದೆ.

`ತಾಯಿ’ ಶೀರ್ಷಿಕೆಯೊಂದಿಗೆ ಆಯೋಜಿಸಲಾಗಿರುವ `ಬಹುರೂಪಿ’ ರಾಷ್ಟಿçÃಯ ರಂಗೋತ್ಸವಕ್ಕೆ ಉತ್ತರ ಕನ್ನಡದ ಹೊನ್ನಳ್ಳಿಯ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತರಾದ ತುಳಸೀಗೌಡ ಅವರು ರಂಗಾಯಣದ ವನರಂಗದಲ್ಲಿ ಶನಿವಾರ ಸಂಜೆ ೪.೩೦ಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕರಕುಶಲ ಮೇಳ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ರಂಗೋತ್ಸವ ಪುಸ್ತಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಎಲ್. ನಾಗೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ರಾಜೀವ್ ಮತ್ತಿತರರ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ನಟಿ ಮತ್ತು ನ್ಯಾಯವಾದಿ ಮಾಳವಿಕ ಅವಿನಾಶ್ ಆಶಯ ನುಡಿಗಳನ್ನಾಡಲಿದ್ದಾರೆ.

ಚಲನಚಿತ್ರೋತ್ಸವ: ಇದಕ್ಕೂ ಮುನ್ನ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಬೆಳಗ್ಗೆ ೧೧ಕ್ಕೆ ಕೊಡವ ಭಾಷೆಯ `ದ ಸ್ಟೋರಿ ಆಫ್ ಕಾವೇರಿ’ ಕಿರುಚಿತ್ರ ಪ್ರದರ್ಶನದ ಮೂಲಕ ಚಲನಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ. ನಟಿ ತಾರಾ ಅನುರಾಧ ಚಲನಚಿತ್ರೋತ್ಸವ ಉದ್ಘಾಟಿಸ ಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣ ಕ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಿರುಚಿತ್ರಗಳು ಸೇರಿದಂತೆ ೨೪ ಚಲನಚಿತ್ರಗಳ ಪ್ರದರ್ಶನ ಇರಲಿದೆ. ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ `ರಾಜ ಕುಮಾರ’ ಮತ್ತು ಡಾ.ರಾಜ್‌ಕುಮಾರ್ ಅಭಿನಯದ `ಬಬ್ರುವಾಹನ’ ಚಿತ್ರಗಳೂ ಪ್ರದರ್ಶನಗೊಳ್ಳಲಿವೆ.
ಹಲವು ಭಾಷೆಯ ೩೫ ನಾಟಕ: ಮಾ.೨೦ರವರೆಗೆ ನಡೆಯುವ ರಂಗಾಯಣದ `ಬಹುರೂಪಿ ರಾಷ್ಟಿçÃಯ ರಂಗೋತ್ಸವ’ದಲ್ಲಿ ಕನ್ನಡದ
೨೪ ನಾಟಕಗಳು ಸೇರಿದಂತೆ ವಿವಿಧ ಭಾಷೆಗಳ ಒಟ್ಟು ೩೫ ನಾಟಕಗಳು ಪ್ರದರ್ಶನಗೊಳ್ಳ ಲಿವೆ. ರಂಗಾಯಣದ ಭೂಮಿಗೀತ, ವನರಂಗ, ಬಿ.ವಿ.ಕಾರಂತ ರಂಗಚಾವಡಿ, ಸಂಪತ್ ರಂಗಮAದಿರ (ಕಿರುರಂಗ ಮಂದಿರ) ಮತ್ತು ಕಲಾಮಂದಿರ ಸೇರಿ ಐದು ವೇದಿಕೆಗಳಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಪ್ರತಿ ನಾಟಕಕ್ಕೆ ತಲಾ ೧೦೦ ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ರಾಷ್ಟçದಲ್ಲಿ ಹೆಸರು ಮಾಡಿರುವ ಮಂಗಳಮುಖಿಯರ ತಮಿಳಿನ `ನೂರಮ್ಮ-ಬಿರಿಯಾನಿ ದರ್ಬಾರ್’ ನಾಟಕವು ರಂಗೋತ್ಸವದ ವಿಶಿಷ್ಟವಾಗಿದ್ದು, ಹೆಸರಾಂತ ಹಿರಿಯ ನಟ ಎಸ್.ಎನ್.ಸೇತೂರಾಂ ಮತ್ತು ಮುಖ್ಯಮಂತ್ರಿ ಚಂದ್ರು ಅವರ ಅಭಿನಯದ ನಾಟಕಗಳೂ ಪ್ರದರ್ಶನಗೊಳ್ಳಲಿವೆ. ನಾಟಕ ಹೊರತುಪಡಿಸಿ ರಂಗೋತ್ಸವದ ಉಳಿದೆಲ್ಲಾ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಕರಕುಶಲ-ಆಹಾರ ಮೇಳ: ಎಂದಿನAತೆ ಬಹುರೂಪಿ ಭಾಗವಾದ ಕರಕುಶಲ ಮೇಳ, ಪುಸ್ತಕ ಮೇಳದ ಜೊತೆಗೆ ಆಹಾರ ಮೇಳವೂ ಇರಲಿದೆ. ಈ ಬಾರಿ ರಂಗಾಯಣದ ಮುಖ್ಯ ಗೇಟ್ ಹೊರಭಾಗದಲ್ಲಿರುವ ಮಳಿಗೆಗಳಲ್ಲಿ ಆಹಾರ ಮೇಳಕ್ಕೆ ಅವಕಾಶ ಕಲ್ಪಿಸಲಾಗಿದೆ. ೬೦ಕ್ಕೂ ಹೆಚ್ಚು ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ.
ವಿಚಾರ ಸಂಕಿರಣ: `ತಾಯಿ’ ಶೀರ್ಷಿಕೆಯಡಿ ರಾಷ್ಟಿçÃಯ ವಿಚಾರ ಸಂಕಿರಣ ರಂಗಾಯಣದ ವನರಂಗದಲ್ಲಿ ಮಾ.೧೯ರಂದು ಸಂಜೆ ೪.೩೦ಕ್ಕೆ ಹಿರಿಯ ಸಾಹಿತಿ ನಾ. ಡಿಸೋಜ ಅವರಿಂದ ಉದ್ಘಾಟನೆಗೊಳ್ಳಲಿದ್ದು, ಅತಿಥಿಯಾಗಿ ಚಿಂತಕಿ ಡಾ.ವಿಜಯಲಕ್ಷಿö್ಮ ಬಾಳೆಕುಂದ್ರಿ ಪಾಲ್ಗೊಳ್ಳಲಿದ್ದಾರೆ. ಬಳಿಕ `ಸೃಜನಶೀಲತೆ ಮತ್ತು ತಾಯ್ತನ’ ಮತ್ತು `ರೈತ ಮತ್ತು ತಾಯ್ತನ’ ಕುರಿತಂತೆ ವಿಚಾರ ಮಂಡನೆ ನಡೆಯಲಿದೆ.

ಬಹುರೂಪಿ ಸಮಾರೋಪ: ಮಾ.೨೦ರಂದು ಸಂಜೆ ೪.೩೦ಕ್ಕೆ ವನರಂಗದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, `ಕನ್ನಡ ಕಾವ್ಯಗಳಲ್ಲಿ ತಾಯಿ’ ಕುರಿತು ವಾಗ್ಮಿ ಹಿರೇಮಗಳೂರು ಕಣ್ಣನ್, `ಜಗತ್ತೆಂದರೆ ತಾಯಿ’ ಕುರಿತು ಚಿಂತಕ ಚಕ್ರವರ್ತಿ ಸೂಲಿಬೆಲೆ ಸಮಾರೋಪ ನುಡಿಗಳನ್ನಾಡಲಿದ್ದಾರೆ.

ಜನಪದ ಉತ್ಸವ ಆರಂಭ

ಮೈಸೂರು, ಮಾ.೧೧(ಎಸ್‌ಪಿಎನ್)- ಬಹು ರೂಪಿ ರಾಷ್ಟಿçÃಯ ರಂಗೋತ್ಸವ-೨೦೨೨ರ ಭಾಗವಾದ ಜನಪದೋತ್ಸವಕ್ಕೆ ಶುಕ್ರವಾರ ಕಲಾಮಂದಿರ ಆವರಣದ ಕಿಂದರಿಜೋಗಿ ಜನಪದ ರಂಗಮAದಿರದಲ್ಲಿ ಚಾಲನೆ ದೊರಯಿತು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ ಹಾಗೂ ಮೈಸೂರು ಮಹಾ ರಾಜ ಕಾಲೇಜು ಜಾನಪದ ವಿಭಾಗದ ಸಹ ಪ್ರಾಧ್ಯಾ ಪಕಿ ಡಾ.ವಿಜಯಲಕ್ಷಿö್ಮÃ ಮನಾಪುರ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ನಂತರ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ ಮಾತನಾಡಿ, ಯಕ್ಷ ಗಾನ ಗಂಡು ಕಲೆ ಎಂದು ಎಲ್ಲರೂ ಕರೆಯು ತ್ತಾರೆ. ಆದರೆ, ನನ್ನ ಪ್ರಕಾರ ಯಕ್ಷಗಾನದಲ್ಲಿ ರುವ ಹಾಡು,ಇತರೆ ತಾಳ-ಪಟ್ಟುಗಳೆಲ್ಲಾ ಮಹಿಳೆಯಿಂದಲೇ ರೂಪಿತವಾಗಿದೆ. ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ನಾಣ್ಣುಡಿಯಿದೆ. ಅದರಂತೆ ತಾಯಿ ಎಲ್ಲದ್ದಕ್ಕೂ ಪ್ರಥಮ ವಾಗಿರುತ್ತಾಳೆ ಎಂದು ಅಭಿಪ್ರಾಯಪಟ್ಟರು.

ತಾಯಿ ಎಂಬುದೇ ಬಹುರೂಪವಿದ್ಧಂತೆ. ಎಲ್ಲಾ ಕ್ಷೇತ್ರದಲ್ಲೂ ತಾಯಿಯ ಸ್ವರೂಪ ಕಾಣಬಹುದು. ಕುಟುಂಬ, ಪ್ರಕೃತಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ತಾಯಿ ಸ್ವರೂಪ ಕಾಣ ಬಹುದು. ಹಾಗಾಗಿ ಈ ಬಾರಿಯ ಜನಪದೋ ತ್ಸವದಲ್ಲಿ `ತಾಯಿ’ಶೀರ್ಷಿಕೆಯಡಿ ಬಹು ರೂಪಿ ರಂಗೋತ್ಸವ ಎಂದು ಕರೆದಿರುವುದು ಔಚಿತ್ಯಪೂರ್ಣ ಎಂದರು. ಇತ್ತೀಚೆಗೆ ನಗರÀದಲ್ಲಿ ವೃದ್ಧಾಶ್ರಮಗಳುಅಣಬೆಗಳಂತೆ ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ಇಂದಿನ ಯುವ ಪೀಳಿಗೆಯಲ್ಲಿ `ತಾಯಿ’ ತ್ಯಾಗಮಯಿ ಎಂದು ತಿಳಿಯದಿರುವುದೇ ಕಾರಣ. `ತಾಯಿ’ ಎಂಬ ಪದವೇ ವಿಸ್ಮಯ. ತಾಯಿ ಮೂಲ ಸ್ವರೂಪವನ್ನು ಯಾರೂ ಗೌರವಿಸುತ್ತಾರೋ, ಅವಳ ತ್ಯಾಗವನ್ನು ವೃದ್ಧಾಪ್ಯದಲ್ಲಿ ಯಾರು ಗುರುತಿಸುತ್ತಾರೋ ಅಂದು `ತಾಯಿ’ ಎಂಬ ಪದಕ್ಕೆ ಗೌರವ ಬರುತ್ತದೆ ಎಂದರು.ಇAದಿಗೂ ಗ್ರಾಮೀಣ ಪ್ರದೇಶಗಳಲ್ಲಿ ವೃದ್ಧಾಶ್ರಮಗಳಿಲ್ಲ. ಏಕೆಂದರೆ, ಹಳ್ಳಿಗಳಲ್ಲಿ ತಂದೆ-ತಾಯಿಯನ್ನು ಪೂಜ್ಯರು ಎಂದು ತಿಳಿದು ಗೌರವಿಸುತ್ತಾರೆ. ಹಾಗಾಗಿ ತಂದೆ-ತಾಯಿಗಳು ಮಕ್ಕಳೊಂದಿಗೆ ಅವಿನಾಭಾವವಾಗಿ ಜೀವನ ನಡೆಸುತ್ತ, ತಮ್ಮ ಕೊನೆಗಾಲ ಕಳೆಯುತ್ತಾರೆ. ಆದರೆ, ಆ ಸನ್ನಿವೇಶ ನಗರ ಪ್ರದೇಶಗಳಲ್ಲಿ

ಕಡಿಮೆಯಾಗುತ್ತಿರುವುದರಿಂದ ವೃದ್ಧಾಶ್ರಮ ಗಳಿಂದ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರು ಮಹಾರಾಜ ಕಾಲೇಜು ಜಾನಪದ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ವಿಜಯಲಕ್ಷಿö್ಮÃ ಮನಾಪುರ ಮಾತನಾಡಿ, ಮೈಸೂರಿಗೆ ರಂಗಾಯಣ ಸಂಸ್ಥೆ ಸಾಂಸ್ಕೃತಿಕ ಕಳಸವಿದ್ದಂತೆ. ಇಲ್ಲಿನ ಸಾಂಸ್ಕೃತಿಕ ಶಿಕ್ಷಣ ದೇಶಕ್ಕೆ ಮಾದರಿಯಾಗಿವೆ. ಎರಡು ವರ್ಷಗಳ ಕೊರೊನಾ ತಲ್ಲಣದ ನಂತರದ ರಂಗಾಯಣದಲ್ಲಿ ಬಹುರೂಪಿ ರಂಗೋತ್ಸವ ಆಯೋಜನೆ ಮಾಡಿರುವುದು ಸಂತೋಷದ ವಿಚಾರ. ಪ್ರತಿಯೊಬ್ಬರ ಜೀವನದಲ್ಲಿ ಜೀವ ಒಡನಾಡಿ `ತಾಯಿ’. ಈ ಬಾರಿಯ ಬಹುರೂಪಿಯಲ್ಲಿ `ತಾಯಿ’ ಶೀರ್ಷಿಕೆಯು ಜನರನ್ನು ಆಕರ್ಷಿಸುತ್ತಿದೆ. ಅಲ್ಲದೆ, ತಾಯಿ, ತಾಯ್ತನ ಎಂಬ ತತ್ವ ಮಾತ್ರ ಒಂದೇನೆ. ತಾಯಿ ಕುರಿತು ಜಾನಪದದಲ್ಲಿ ಸಾಕಷ್ಟು ಉಲ್ಲೇಖಗಳಿವೆ. ತಾಯಿ ಎಂದರೆ, ಬರೀ ಹೆತ್ತವ್ವ ಮಾತ್ರ ಅಲ್ಲ. ಅದು ಪ್ರಕೃತಿಯಲ್ಲಿರುವ ದನ, ಕುರಿ, ಮೇಕೆ ಸೇರಿದಂತೆ ಎಲ್ಲಾ ಸ್ವರೂಪದ ಜೀವಗಳಿಗೆ ಜನ್ಮ ನೀಡುವ ಜೀವಿ. ಅದರಲ್ಲಿ `ತಾಯಿ’ ಸ್ವರೂಪ ಕಾಣಬಹುದು. ಜಾನಪದ ಹಾಡುಗಳನ್ನು ಹಾಡಿ, ತಾಯ್ತನದ ಮಹತ್ವ ವಿವರಿಸಿದರಲ್ಲದೆ, ಹಳ್ಳಿಗಾಡಿನ ಜನರು ಈ ಹಿಂದೆ ಫೋಟೋಗಳನ್ನಿಟ್ಟು ಕೊಂಡು ಕೈ ಮುಗಿಯುತ್ತಿರಲಿಲ್ಲ. ಬದಲಾಗಿ ಬೆಳಗ್ಗೆ ಎದ್ದ ತಕ್ಷಣ ಸೂರ್ಯನಿಗೆ ಕೈ ಮುಗಿಯು ತ್ತಿದ್ದರು. ಹಾಲು ಕೊಡುವ ಹಸುಗಳಿಗೆ ನಮಸ್ಕಾರ ಮಾಡಿ, ಗೌರವ ಕೊಡುತ್ತಿದ್ದರು. ನಗರೀಕರಣದಲ್ಲಿ ಇದೆಲ್ಲಾ ಸಾಧ್ಯವೇ ಎಂದು ಪ್ರಶ್ನಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಬಳ್ಳಾರಿಯ ಅಂಜನಮ್ಮ ಜೋಗತಿ ಮತ್ತು ತಂಡದಿAದ ಜೋಗತಿ ನೃತ್ಯ, ಮಂಡ್ಯದ ಚಿನ್ನಕುನ್ನಯ್ಯ ತಂಡದಿAದ ಪೂಜಾಕುಣ ತ, ಮೈಸೂರಿನ ಸಿ.ಮಂಜುನಾಥ್ ತಂಡದಿAದ ನಗಾರಿ ಪ್ರದರ್ಶನ ರಂಗಪ್ರಿಯರ ಮನಗೆದ್ದವು. ಈ ವೇದಿಕೆಯಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ಹಿರಿಯ ಕಲಾವಿದೆ ಗೀತಾ ಮೋಂಟಡ್ಕ, ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಸೇರಿದಂತೆ ಇತರರಿದ್ದರು.

Translate »