ಮನೆ ಮುಂದೆ ಕೊಳೆತ ಟೊಮೆಟೋ ಬಿಸಾಡಿದ ಮಹಿಳೆ ಹತ್ಯೆ: ತಂದೆ-ಮಗನ ಸೆರೆ
ಮೈಸೂರು

ಮನೆ ಮುಂದೆ ಕೊಳೆತ ಟೊಮೆಟೋ ಬಿಸಾಡಿದ ಮಹಿಳೆ ಹತ್ಯೆ: ತಂದೆ-ಮಗನ ಸೆರೆ

March 12, 2022

ಮೈಸೂರು, ಮಾ.೧೧(ಆರ್‌ಕೆ)-ಕೊಳೆತ ಟೊಮೆಟೋ ಹಣ್ಣುಗಳನ್ನು ಮನೆ ಮುಂದೆ ಬಿಸಾಡಿದರೆಂಬ ಕ್ಷÄಲ್ಲಕ ಕಾರಣಕ್ಕೆ ಮಹಿಳೆ ಹತ್ಯೆಗೈದು ಮತ್ತೋರ್ವ ರಿಗೆ ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ತಂದೆ ಮತ್ತು ಮಗನನ್ನು ತಿಂಗಳ ನಂತರ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಕ್ಯಾತಮಾರನಹಳ್ಳಿ ಕೆ.ಎನ್. ಪುರ ೬ನೇ ಕ್ರಾಸ್ ನಿವಾಸಿ ಸಿದ್ದೇಗೌಡರ ಮಗ ಶಿವರಾಜು(೫೭) ಹಾಗೂ ಪುತ್ರ ಗಿರೀಶ ಅಲಿಯಾಸ್ ಗಿರಿ(೨೯) ಬಂಧಿತ ಆರೋಪಿಗಳು. ಕೊಲೆ ಮಾಡಿದ ದಿನ ದಿಂದ ತಮಿಳುನಾಡು, ಕೇರಳ, ಬೆಂಗ ಳೂರು, ಚಾಮರಾಜನಗರದಲ್ಲಿ ತಲೆಮರೆಸಿ ಕೊಂಡಿದ್ದ ಇಬ್ಬರನ್ನೂ ಈಗ ತಮಿಳು ನಾಡಿನ ಧರ್ಮಪುರಿಯಲ್ಲಿ ಬಂಧಿಸು ವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಫೆಬ್ರವರಿ ೨ರಂದು ಬೆಳಗ್ಗೆ ಕೆ.ಎನ್. ಪುರದ ವಿನಾಯಕ ರಸ್ತೆ, ೬ನೇ ಕ್ರಾಸ್ ನಿವಾಸಿ ಸುನೀತಾರನ್ನು ಲಾಂಗ್ ಮತ್ತು ಮಚ್ಚಿನಿಂದ ಕೊಚ್ಚಿ ಹತ್ಯೆಗೈದು ಅವರ ತಾಯಿ ಭಾರತಿ ಮೇಲೂ ಮಾರಣಾಂತಿಕ ಹಲ್ಲೆ ಮಾಡಿ ಆರೋಪಿಗಳು ಅಂದಿ ನಿಂದ ತಲೆಮರೆಸಿಕೊಂಡಿದ್ದರು.

ಭಾರತಿ ಅವರು ಟೊಮೆಟೋ ಹಣ್ಣು ಗಳನ್ನು ತಳ್ಳುವ ಗಾಡಿಗೆ ಹಾಕುತ್ತಿದ್ದಾಗ ಕೊಳೆತ ಹಣ್ಣುಗಳನ್ನು ಮನೆ ಎದುರಿನ ಕಸದ ಬುಟ್ಟಿಗೆ ಎಸೆಯುತ್ತಿದ್ದ ವೇಳೆ ಕೆಲವು ಪಕ್ಕಕ್ಕೆ ಬಿದ್ದಿದ್ದವು. ಅದರಿಂದ ಜಗಳ ತೆಗೆ ದಿದ್ದ ಎದುರು ಮನೆ ನಿವಾಸಿ ಶಿವರಾಜು, ತಮ್ಮ ಪುತ್ರ ಗಿರೀಶನಿಗೆ ಈ ವಿಷಯ ತಿಳಿಸಿದ್ದ.

ಅದೇ ದಿನ ಸಂಜೆ ೬ ಗಂಟೆ ವೇಳೆಗೆ ಭಾರತಿ ಮತ್ತು ಪುತ್ರಿ ಸುನೀತಾ ವಾಸವಿದ್ದ ಮನೆಗೆ ಬಂದ ತಂದೆ ಮತ್ತು ಮಗ ಲಾಂಗ್ ಮತ್ತು ಮಚ್ಚಿನಿಂದ ಹಲ್ಲೆ ಮಾಡಿ, ಸುನೀತಾರನ್ನು ಹತ್ಯೆಗೈದು, ಭಾರತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿ ಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಉದಯಗಿರಿ ಠಾಣೆ ಇನ್ಸ್ಪೆಕ್ಟರ್ ಪಿ.ಕೆ.ರಾಜು ಹಾಗೂ ಸಿಬ್ಬಂದಿ, ತನಿಖೆ ನಡೆಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದರು. ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರ ನಿರ್ದೇಶನದಂತೆ, ಡಿಸಿಪಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ ದೇವ ರಾಜ ಉಪ ವಿಭಾಗದ ಎಸಿಪಿ ಎಂ.ಎಸ್. ಶಶಿಧರ್ ಉಸ್ತುವಾರಿಯಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಉದಯಗಿರಿ ಠಾಣೆ ಇನ್ಸ್ಪೆಕ್ಟರ್ ಪಿ.ಕೆ.ರಾಜು, ಸಬ್ ಇನ್ಸ್ಪೆಕ್ಟರ್‌ಗಳಾದ ಸುನಿಲ್, ನಾಗರಾಜ ನಾಯಕ, ಸಿಬ್ಬಂದಿಗಳಾದ ಶಂಕರ್, ಸಿದ್ದಿಕ ಅಹಮದ್, ಸೋಮಶೇಖರ್, ಪುಟ್ಟರಾಜು, ಗೋಪಾಲ್, ಆನಂದ್, ರಾಥೋಡ್, ಮೋಹನ ಕುಮಾರ್, ಶಿವರಾಜಪ್ಪ, ಸಮೀರ ಪಾಲ್ಗೊಂಡಿದ್ದರು.

Translate »