ಪಂಚರಾಜ್ಯಗಳ ಫಲಿತಾಂಶ: ಬಿಜೆಪಿ ನಾಲ್ಕು ರಾಜ್ಯದಲ್ಲಿ ಜಯಭೇರಿ ಹಿನ್ನೆಲೆ ‘ಕೈ’ ಹಿಡಿಯಲು ಸಜ್ಜಾದವರಿಗೆ ಶಾಕ್
ಮೈಸೂರು

ಪಂಚರಾಜ್ಯಗಳ ಫಲಿತಾಂಶ: ಬಿಜೆಪಿ ನಾಲ್ಕು ರಾಜ್ಯದಲ್ಲಿ ಜಯಭೇರಿ ಹಿನ್ನೆಲೆ ‘ಕೈ’ ಹಿಡಿಯಲು ಸಜ್ಜಾದವರಿಗೆ ಶಾಕ್

March 12, 2022

 ದಿಗ್ಮೂಢರಾಗಿರುವ ಬಿಜೆಪಿ ತೊರೆಯಲು ಮುಂದಾಗಿದ್ದ ಸಚಿವರು, ಶಾಸಕರು!
 ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದವರಲ್ಲೂ ಈಗ ದಿಗಿಲು

ಬೆಂಗಳೂರು, ಮಾ.೧೧(ಕೆಎಂಶಿ)- ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದ ಉಮೇಶ್ ಕತ್ತಿ, ಕೆ.ಗೋಪಾಲಯ್ಯ, ನಾರಾಯಣಗೌಡ, ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಏಳು ಮಂದಿ ಸಚಿವರು, ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ದಂಡು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ದಿಂದ ದಿಗ್ಮೂಢರಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಸದಾ ಅಧಿಕಾರಕ್ಕೆ ಅಂಟಿಕೊAಡಿರಲು ತವಕಿಸುವ ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಮುಖಂಡರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿ ಕಾರಕ್ಕೆ ಬರಲಿದೆ ಎಂಬ ಆಶಾಭಾವನೆ ಯೊಂದಿಗೆ ತಾವಿರುವ ಪಕ್ಷಗಳನ್ನು ತೊರೆದು, ‘ಕೈ’ ಹಿಡಿಯಲು ಮುಂದಾಗಿದ್ದರು.

ಬಹುತೇಕ ಈ ಎಲ್ಲ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಒಂದೆರಡು ಸುತ್ತಿನ ಮಾತುಕತೆಯನ್ನೂ ನಡೆಸಿದ್ದರು.

ತಮ್ಮ ಪಕ್ಷಕ್ಕೆ ನೆಲೆಯಿಲ್ಲದ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್‌ನಲ್ಲಿನ ವರ್ಚಸ್ಸುಳ್ಳ ಮುಖಂಡರು ಮತ್ತು ಶಾಸಕರನ್ನು ಸೆಳೆ ಯಲು ಕಾಂಗ್ರೆಸ್ ನಾಯಕರು ಸಹ ಕಳೆದ ಒಂದು ವರ್ಷದಿಂದ ನಿರಂತರ ಪ್ರಯತ್ನ ಮಾಡಿ, ಬಹುತೇಕ ಯಶಸ್ಸನ್ನೂ ಕಂಡಿದ್ದರು.

ಇದು ಸಾಲದೆಂಬAತೆ ಮತ್ತಷ್ಟು ಮಂದಿ ಪ್ರಭಾವಿ ಹಾಗೂ ವರ್ಚಸ್ಸಿನ ನಾಯಕ ರನ್ನು ಸೆಳೆದು ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ತಂದುಕೊಳ್ಳುವ ಕಸರತ್ತು ನಡೆಸಿದ್ದರು. ಒಂದೆಡೆ ಪಕ್ಷವನ್ನು ಸಂಘಟಿಸುವುದು ಮತ್ತೊಂದೆಡೆ ಮುಖಂಡ ರನ್ನು ಸೆಳೆಯುವ ನಿರಂತರ ಪ್ರಯತ್ನ ನಡೆದಿತ್ತು.
ಜೆಡಿಎಸ್ ಮತ್ತು ಬಿಜೆಪಿ ಶಾಸಕರನ್ನು ಮತ್ತು ಮುಖಂಡರನ್ನು ಸೆಳೆಯುವ ವಿಷಯ ದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಪೈಪೋಟಿಗಿಳಿದಿದ್ದರು. ತಾವು ಕರೆ ತರುವ ವ್ಯಕ್ತಿಗಳು ವಿಧಾನಸಭೆಗೆ ಆಯ್ಕೆ ಗೊಂಡರೆ ಮುಖ್ಯಮಂತ್ರಿ ಹುದ್ದೆಯ ರೇಸಿ ನಲ್ಲಿ ತಮ್ಮೊಂದಿಗೆ ಇರುತ್ತಾರೆ ಎಂಬ ದೂರ ದೃಷ್ಟಿಯಿಂದ ಅನ್ಯ ಪಕ್ಷದವರ ಸೆಳೆಯುವ ಹಠಕ್ಕೆ ಬಿದ್ದಿದ್ದರು. ಅದರಲ್ಲೂ ಜೆಡಿಎಸ್‌ನ ಜಿ.ಟಿ.ದೇವೇಗೌಡ, ಶ್ರೀನಿವಾಸ್, ಎ.ಟಿ. ರಾಮಸ್ವಾಮಿ, ಶಿವಲಿಂಗೇಗೌಡ ಸೇರಿದಂತೆ ೧೧ ಶಾಸಕರು ಹಾಗೂ ಮುಖಂಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮಾತುಕತೆ ಗಳೂ ನಡೆದಿದ್ದವು.

ಅದರಲ್ಲಿ ಕೆಲವರು ಜೆಡಿಎಸ್ ತೊರೆಯುವುದಾಗಿಯೂ ಹೇಳಿಕೆ ನೀಡಿದ್ದರು, ಆದರೆ, ಬಿಜೆಪಿಯಿಂದ ಕಾಂಗ್ರೆಸ್ ಸೇರಲು ಮುಂದಾಗಿದ್ದವರು, ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ನೀಡಿರಲಿಲ್ಲ, ತೋರಿಸಿಕೊಂಡಿಯೂ ಇರಲಿಲ್ಲ. ಚುನಾವಣಾ ವೇಳೆಗೆ ತಾವು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದಾಗಿ ಸಚಿವರು, ಶಾಸಕರು, ಸಿದ್ದರಾಮಯ್ಯ ಮತ್ತು ಶಿವಕುಮಾರ್‌ಗೆ ಭರವಸೆಯನ್ನೂ ನೀಡಿದ್ದರು. ಅಲ್ಲದೆ, ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಮುಖಂಡರು ಚುನಾವಣೆಗೆ ತಯಾರಿ ನಡೆಸದಂತೆ ಮತ್ತು ಯಾರಿಗೂ ಟಿಕೆಟ್‌ನ ಭರವಸೆ ನೀಡಬಾರದೆಂದು ಸೂಚಿಸಿದ್ದರು.

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ನಂತರ, ವಲಸೆಗೆ ಮುಂದಾಗಿದ್ದವರು ಮತ್ತೆ ಮರುಚಿಂತನೆಯಲ್ಲಿ ತೊಡಗಿದ್ದಾರೆ. ಇವರಲ್ಲಿ ಕೆಲವರಂತೂ ತಾವು ಈಗಿರುವ ಪಕ್ಷದಲ್ಲೇ ಉಳಿದುಕೊಳ್ಳುವ ತೀರ್ಮಾನಕ್ಕೇ ಬಂದಿದ್ದಾರೆ. ಈ ಫಲಿತಾಂಶದಿAದ ರಾಜ್ಯ ಕಾಂಗ್ರೆಸ್‌ಗೆ ಸ್ವಲ್ಪ ಹಿನ್ನಡೆಯಾದಂತೆ ಕಂಡುಬರುತ್ತಿದೆ. ನಾಯಕರಲ್ಲೂ ಉತ್ಸಾಹ ಸ್ವಲ್ಪ ಕಡಿಮೆಯಾಗಿದೆ. ಬಿಜೆಪಿ ವಿಜಯೋತ್ಸವ ಜೆಡಿಎಸ್‌ಗೆ ಸ್ವಲ್ಪ ಉಸಿರು ಬಂದAತಾಗಿದೆ. ಪಕ್ಷ ತೊರೆಯುತ್ತಿದ್ದವರಲ್ಲಿ ಕೆಲವರು ತಮ್ಮ ನಿರ್ಧಾರ ಬದಲಿಸಿ, ಪಕ್ಷದಲ್ಲಿಯೇ ಉಳಿಯುವರೆಂಬ ಭಾವನೆ ಈ ಪಕ್ಷದ ನಾಯಕರಲ್ಲಿ ಮೂಡಿದೆ.

 

ಸಿದ್ದರಾಮಯ್ಯ ಏನೇ ಹೇಳಿದರೂ ಅದಕ್ಕೆ ತದ್ವಿರುದ್ಧವಾದ ಫಲಿತಾಂಶವೇ ಬರುತ್ತದೆ!
ಅವರಪ್ಪನಾಣೆ ಯಡಿಯೂರಪ್ಪ,ಕುಮಾರಸ್ವಾಮಿ ಸಿಎಂ ಆಗಲ್ಲ ಅಂದ್ರು; ಅವರು ಸಿಎಂ ಆದ್ರು!!
ಬೆಂಗಳೂರು, ಮಾ.೧೧(ಕೆಎಂಶಿ)-ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏನು ಹೇಳುತ್ತಾರೋ ಅದಕ್ಕೆ ವಿರುದ್ಧ ಫಲಿತಾಂಶ ಚುನಾವಣೆ ಯಲ್ಲಿ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದರು.

ಆಯವ್ಯಯ ಅಂದಾಜು ಮೇಲಿನ ಚರ್ಚೆ ಸಮಯದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ೨೦೧೮ರ ಚುನಾವಣೆ ಸಂದರ್ಭದಲ್ಲಿ ‘ಅವರಪ್ಪನಾಣೆ ಯಡಿಯೂರಪ್ಪ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ’ ಎಂದಿದ್ದರು, ಅವರಿಬ್ಬರೂ ಮುಖ್ಯಮಂತ್ರಿ ಯಾದರು, ನಾವು ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು, ಅವರು ಅಧಿಕಾರಕ್ಕೆ ಬರಲಿಲ್ಲ ಎಂದು ನೆನಪಿಸಿದರು. ಪಂಚರಾಜ್ಯ ಚುನಾವಣೆಯಲ್ಲಿ ಅಧಿ ಕಾರದಲ್ಲಿದ್ದ ೪ ರಾಜ್ಯಗಳಲ್ಲಿ ಗೆದ್ದಿದ್ದೀರಿ ಎಂದಿದ್ದಾರೆ, ಇತ್ತೀಚಿನ ದಿನಗಳಲ್ಲಿ ಅಧಿಕಾರವಿದ್ದ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿರುವುದು ಬಿಜೆಪಿ ಮಾತ್ರ, ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದಿರಲ್ಲ ಅಲ್ಲೂ ನೀವೇ ಗೆಲ್ಲಬೇಕಿತ್ತು, ಜನರ ನಾಡಿಮಿಡಿತ
ಇವರೊಬ್ಬರಿಗೇ ಗೊತ್ತಿದೆಯೇ ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಗೆದ್ದೆವು ಎಂದು ಹೇಳಿದವರು ಸೋತಿದ್ದಾರೆ, ನಮ್ಮ ಬಜೆಟ್ ಇಟ್ಟುಕೊಂಡು ಜನರ ಬಳಿಗೆ ಹೋಗಿ ಜನರ ವಿಶ್ವಾಸಗಳಿಸಿ ಅಧಿಕಾರಕ್ಕೆ ಬರುತ್ತೇವೆ ಎಂದು ನಮ್ಮ ನಾಯಕರಾದ ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಅವರಿಗೆ ರಾಜ್ಯದಲ್ಲಿ ವಿಶಿಷ್ಟ ಸ್ಥಾನವಿದೆ, ಅಧಿಕಾರವಿರಲಿ, ಇಲ್ಲದಿರಲಿ, ಜನರ ಹೃದಯದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಎಲ್ಲವನ್ನೂ ಸಮಚಿತ್ತದಿಂದ ತೆಗೆದುಕೊಳ್ಳುವ ಶಕ್ತಿಯಿದೆ. ಎಷ್ಟೇ ನೋವಿದ್ದರೂ ಎಲ್ಲರಿಗಾಗಿ ಒಪ್ಪಿಕೊಂಡಿದ್ದಾರೆ.
ರಾಜಕೀಯ ಪಕ್ಷಗಳು ಇರುವುದೇ ರಾಜಕಾರಣ ಮಾಡಲು, ಚುನಾವಣೆಯಲ್ಲಿ ಗೆಲ್ಲುವುದಾಗಿಯೇ ಹೇಳುತ್ತೇವೆ. ಫಲಿತಾಂಶ ಬಂದಾಗ ಸತ್ಯ ಗೊತ್ತಾಗುತ್ತದೆ. ನಾವೇ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ, ಎಲ್ಲ ರಾಜಕೀಯ ಪಕ್ಷವನ್ನೂ ಜನರು ನೋಡಿದ್ದಾರೆ. ಯಾರು ಏನು ಮಾತನಾಡುತ್ತಾರೆ ಎಂಬುದು ಮುಖ್ಯ.

ಸಿದ್ದರಾಮಯ್ಯ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಅವರಿಗೆ ಸತ್ಯ ಗೊತ್ತಿದ್ದರೂ ಸತ್ಯದ ವಿರುದ್ಧ ಜೋರಾಗಿ ಹೇಳುತ್ತಾರೆ. ಬಜೆಟ್ ಕಾರ್ಯಕ್ರಮ ಹಾಗೂ ನಮ್ಮ ಕಾರ್ಯಕ್ರಮ ಗಳ ಮೇಲೆ ಜನರ ವಿಶ್ವಾಸ ಗಳಿಸಿ, ಯಡಿಯೂರಪ್ಪ ನಾಯಕತ್ವದಲ್ಲಿ ೨೦೨೩ರ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಸಮರ್ಥಿಸಿಕೊಂಡರು.

 

ನಾನು ಮತ್ತೆ ಮುಖ್ಯಮಂತ್ರಿ ಆಕಾಂಕ್ಷಿ ಅಲ್ಲ ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಬೆಂಗಳೂರು, ಮಾ.೧೧(ಕೆಎಂಶಿ)-ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲು ನಿರಂತರ ಪ್ರಯತ್ನ ನಡೆಸಿದ್ದರೆ, ಬಿ.ಎಸ್. ಯಡಿಯೂರಪ್ಪ ಮಾತ್ರ ನಾನು ಮತ್ತೆ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಅಲ್ಲ÷ಎಂದು ವಿಧಾನಸಭೆಯಲ್ಲೇ ಇಂದು ಸ್ಪಷ್ಟಪಡಿಸಿ ದ್ದಾರೆ. ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಸ್ವಾರಸ್ಯಕರವಾಗಿ ಪ್ರಸಕ್ತ ರಾಜಕೀಯ ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಮಧ್ಯೆಯೇ ತಮ್ಮ ಅಚಲ ನಿರ್ಧಾರವನ್ನು ಪ್ರಕಟಿಸಿದರು.

ಈ ಹೇಳಿಕೆ ಮೂಲಕ ಮುಂಬರುವ ಸಂಭಾವ್ಯ ಬಿಜೆಪಿ ಆಡಳಿತದಲ್ಲಿ ತಮ್ಮ ಪಾಲು ಏನೂ ಇರುವುದಿಲ್ಲ ಎಂಬ ಸಂದೇಶವನ್ನು ನೀಡಿದರು. ಬಸವರಾಜ ಬೊಮ್ಮಾಯಿ ನಾಯಕತ್ವ ದಲ್ಲೇ ಮುಂಬರುವ ವಿಧಾನಸಭಾ ಚುನಾವಣೆ ಎದುರಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಲಾಗುವುದೆAದು ಇದೇ ಸಂದರ್ಭದಲ್ಲಿ ಘೋಷಿಸಿದರು. ಬೊಮ್ಮಾಯಿ ಅವರು ಮಂಡಿಸಿದ ಬಜೆಟ್, ಪಕ್ಷದ ಕಾರ್ಯಕ್ರಮಗಳನ್ನು ಇಟ್ಟುಕೊಂಡು, ಎಲ್ಲ ಮುಖಂಡರೊAದಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೆ ಬಿಜೆಪಿ ಯನ್ನು ಅಧಿಕಾರಕ್ಕೆ ತರುತ್ತೇವೆ. ನೀವು ನಿಮ್ಮ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಪ್ರವಾಸಕ್ಕೆ ಬನ್ನಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೇಳಿದರು. ದೇಶದ ಜನ ಪ್ರಧಾನಿ ಮೋದಿ ಮತ್ತು ಬಿಜೆಪಿ ಪರವಾಗಿದ್ದಾರೆ, ಮುಂದಿನ ಚುನಾವಣೆಯಲ್ಲಿ ನಾವು ಒಗ್ಗಟ್ಟಿನಿಂದ ಹೋರಾಟ ಮಾಡಿ ೧೩೦ರಿಂದ ೧೪೦ ಸ್ಥಾನಗಳಲ್ಲಿ ೧೦೦ಕ್ಕೆ ನೂರರಷ್ಟು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗುತ್ತೇವೆ. ಮತ್ತೆ ಬಿಜೆಪಿ ಸರ್ಕಾರ ತರಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇವೆ ಎಂದರು.

Translate »