ಹಿಂಸೆ, ಪ್ರತೀಕಾರ, ವೃದ್ಧಾಪ್ಯದ ಕಷ್ಟ, ಪ್ರತಿಭೆ ಹತ್ತಿಕ್ಕುವ ಶಕ್ತಿಗಳ ಅನಾವರಣ
ಮೈಸೂರು

ಹಿಂಸೆ, ಪ್ರತೀಕಾರ, ವೃದ್ಧಾಪ್ಯದ ಕಷ್ಟ, ಪ್ರತಿಭೆ ಹತ್ತಿಕ್ಕುವ ಶಕ್ತಿಗಳ ಅನಾವರಣ

March 14, 2022

ಮೈಸೂರು, ಮಾ.೧೩(ಎಂಕೆ)- ಜಾನಪದ ನೃತ್ಯದ ಹೆಜ್ಜೆ-ಗೆಜ್ಜೆಯ ನಡುವೆ ದೇಹದ ಮೇಲೆ ನಡೆಯುವ ಹಿಂಸೆ, ಪ್ರತೀಕಾರ, ವೃದ್ಧಾಪ್ಯ ಬದುಕಿನ ಕಷ್ಟದ ದಿನಗಳು, ಪ್ರತಿಭೆಗಳನ್ನು ಹತ್ತಿಕ್ಕುವ ರಾಜಕೀಯ ಶಕ್ತಿಗಳು ಹಾಗೂ ಅನೈತಿಕತೆ ಕುರಿತ ಚಿತ್ರಣ ಕಲಾಭಿಮಾನಿಗಳ ಮನಸೂರೆಗೊಂಡಿತು.

ಮೈಸೂರು ರಂಗಾಯಣದಲ್ಲಿ ಆಯೋಜಿಸಿರುವ ‘ಬಹುರೂಪಿ ರಾಷ್ಟಿçÃಯ ರಂಗೋತ್ಸವ’ದಲ್ಲಿ ಭಾನುವಾರ ಪಾಂಡಿಚೇರಿ ಆದಿಶಕ್ತಿ ತಂಡದಿAದ ‘ಭೂಮಿ’, ನವದೆಹಲಿ ರಂಗವಿಷಾರದ್ ಥಿಯೇಟರ್ ಕ್ಲಬ್‌ನ ‘ಬುಡೇ ನೆ ಕಹಾ’, ಮುಂಬೈ ಕರ್ನಾಟಕ ಸಂಘದ ‘ಆಟಿ ತಿಂಗೊಲ್ದ ಒಂಜಿ ದಿನ’, ಬೆಂಗಳೂರಿನ ಅನನ್ಯ ತಂಡದಿAದ ‘ಉಚ್ಛಿಷ್ಟ’ ನಾಟಕ ಪ್ರದರ್ಶನ ಹಾಗೂ ವಿವಿಧ ಕಲಾತಂಡಗಳ ಜಾನಪದ ನೃತ್ಯ ರಂಗಾಸಕ್ತರಿಗೆ ಭರಪೂರ ಮನರಂಜನೆ ನೀಡಿತು.

ಕಿಂದರಿಜೋಗಿ ಜಾನಪದ ವೇದಿಕೆ: ಜಾನಪದ ಪ್ರಕಾರಗಳಾದ ಲಂಬಾಣ ಕುಣ ತ, ಕೋಲಾಟ ಹಾಗೂ ಸೋಮನ ಕುಣ ತ ಅಭಿಮಾನಿಗಳಿಗೆ ಮುದ ನೀಡಿತು. ರಂಗಾಯಣದ ಕಿಂದರಿಜೋಗಿ ಜಾನಪದ ವೇದಿಕೆಯಲ್ಲಿ ಹಾಸನದ ಬಿ.ಟಿ.ಮಾನವ ಕಲಾತಂಡದಿAದ ಕೋಲಾಟ, ವಿಜಯನಗರದ ಶ್ರೀ ಸೇವಾಲಾಲ್ ಕಲಾತಂಡದಿAದ ಲಂಬಾಣ ಕುಣ ತ ಹಾಗೂ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೆಲ್ಲಿಕೆರೆಯ ಶ್ರೀ ಮದಕರಿನಾಯಕ ಕಲಾತಂಡದಿAದ ಸೋಮನ ಕುಣ ತದ ಹೆಜ್ಜೆ-ಗೆಜ್ಜೆಯ ನಾದಕ್ಕೆ ಅಭಿಮಾನಿಗಳು ಮನಸೋತರು.
ಭೂಮಿಗೀತ: ಸಾರಾ ಜೋಸೆಫ್ ಅವರ ಮಲೆಯಾಳಂ ನಾಟಕ ‘ಭೂಮಿರಾಕ್ಷಸಂ’ ಆಧಾರಿತ ‘ಭೂಮಿ’ ಇಂಗ್ಲಿಷ್ ನಾಟಕ ರಂಗಾಯಣದ ಭೂಮಿಗೀತ ವೇದಿಕೆಯಲ್ಲಿ ಪ್ರದರ್ಶನಗೊಂಡಿತು. ವಿಭಿನ್ನ ಸಂಭಾಷಣೆ, ಇಬ್ಬರು ಕಲಾವಿದರು, ನಿರ್ದೇಶಕಿ ಮತ್ತು ಅವಳ ನಟ, ಗಂಡು-ಹೆಣ್ಣು ಮತ್ತು ದೇಹಗಳ ಮೇಲೆ ನಡೆಯುವ ಹಿಂಸೆ, ಪ್ರತೀಕಾರ ಹಾಗೂ ನಿರ್ಧಾರಗಳ ಬಗ್ಗೆ ಮಾತನಾಡುತ್ತಾ ಪರಸ್ಪರ ಹೊಂದಾಣ ಕೆ, ಭಿನ್ನಾಭಿಪ್ರಾಯಗಳ ಚರ್ಚಿಸುವ ಕಥೆ ಇದಾಗಿದೆ. ವಿನಯ್ ಕುಮಾರ್ ನಿರ್ದೇಶನ ಮತ್ತು ರಂಗರೂಪದಲ್ಲಿ ಪಾಂಡಿಚೇರಿ ಆದಿಶಕ್ತಿ ತಂಡದ ಕಲಾವಿದರ ಅಮೋಘ ಅಭಿನಯ ಎಲ್ಲರ ಮೆಚ್ಚುಗೆ ಪಡೆಯಿತು.

ಸಂಪತ್ ರಂಗಮAದಿರ(ಕಿರುರAಗಮAದಿರ)- ವೃದ್ಧಾಪ್ಯ ಬದುಕಿನ ಅಂತಿಮ ಕಷ್ಟದ ದಿನಗಳನ್ನು ಎದುರಿಸುವ ಅಜ್ಜ-ಅಜ್ಜಿಯ ಕಥೆಯುಳ್ಳ ‘ಬುಡೇ ನೆ ಕಹಾ’ ಹಿಂದಿ ನಾಟಕ ಕಲಾಮಂದಿರದ ಕಿರುರಂಗಮAದಿರ (ಸಂಪತ್ ರಂಗಮAದಿರ)ದಲ್ಲಿ ಪ್ರದರ್ಶನವಾಯಿತು. ಕುಟುಂಬ ಸಂಪೂರ್ಣ ಹೊಣೆ ಹೊತ್ತು, ಮಕ್ಕಳನ್ನು ಕಷ್ಟಗಳಿಂದ ದೂರವಿಟ್ಟು, ಅವರಿಗೆ ಯಾವ ತೊಂದರೆಯೂ ಆಗದಂತೆ ಪ್ರೀತಿ- ವಾತ್ಸಲ್ಯದ ನೆರಳಿನಲ್ಲಿ ಬೆಳೆಸಿ-ಪೋಷಿಸುವ ತಂದೆ- ತಾಯಿಯನ್ನು ವೃದ್ಧಾಪ್ಯದಲ್ಲಿ ಮಕ್ಕಳ ನಿರ್ಲಕ್ಷಕ್ಕೆ ದಿಂದ ಅಪಮಾನ ಬದುಕಿಗಿಂತ ಸಾಯುವುದೇ ಸರಿಯಾದ ದಾರಿಯೆಂದು ಸಾಯಲು ಹೊರಡುವ ಭಾವನಾತ್ಮಕ ಚಿತ್ರಣ ಎಲ್ಲರ ಮನಗೆದ್ದಿತು. ವಿಣಾಶರ್ಮ ನಿರ್ದೇಶನದಲ್ಲಿ ನವದೆಹಲಿಯ ರಂಗ ವಿಷಾರದ್ ಥಿಯೇಟರ್ ಕ್ಲಬ್‌ನ ಕಲಾವಿದರು ತಮ್ಮ ನಟನೆ ಮೂಲಕ ತಂದೆ-ತಾಯಿಗೆ ನೀಡಬೇಕಾದ ಮಹತ್ವದ ಕುರಿತು ಅರಿವು ಮೂಡಿಸಿದರು.

ವನರಂಗ: ಮೋಹನ್ ರಾಕೇಶ್ ಅವರ ಹಿಂದಿಯ ‘ಆಷಾಡ್ ಕಾ ಏಕ್ ದಿನ್’ ಎಂಬ ಕ್ಲಾಸಿಕ್ ನಾಟಕದ ತುಳು ಅನುವಾದ ‘ಆಟಿ ತಿಂಗೊಲ್ದ ಒಂಜಿ ದಿನ’ ನಾಟಕ ವನರಂಗದಲ್ಲಿ ಪ್ರಸ್ತುತಪಡಿ ಸಲಾಯಿತು. ಭರತ್‌ಕುಮಾರ್ ಪೊಲಿಪು ಅವರ ಅನುವಾದ ಮತ್ತು ನಿರ್ದೇಶನದಲ್ಲಿ ಮುಂಬೈನ ಮುಂಬೈ ಕರ್ನಾಟಕ ಸಂಘದ ನಟರಿಂದ ನಾಟಕ ಪ್ರದರ್ಶನ ನೀಡಲಾಯಿತು. ರಾಜಕೀಯ ಶಕ್ತಿಗಳು ಹೇಗೆ ಪ್ರತಿಭೆಗಳನ್ನು ಹತ್ತಿಕ್ಕಿ, ಸರ್ವನಾಶದ ಅಂಚಿಗೆ ತರುತ್ತದೆ ಎಂಬ ಕಥೆಯುಳ್ಳ ನಾಟಕ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಕಲಾಮಂದಿರ: ಎಸ್.ಎನ್.ಸೇತೂರಾಂ ರಚನೆ, ನಿರ್ದೇಶನದಲ್ಲಿ ಬೆಂಗಳೂರಿನ ಅನನ್ಯ ತಂಡದ ವತಿಯಿಂದ ‘ಉಚ್ಛಿಷ್ಟ’ ನಾಟಕವನ್ನು ಕಲಾಮಂದಿರದಲ್ಲಿ ಪ್ರದರ್ಶನ ನೀಡಲಾಯಿತು. ಪ್ರೊಫೆಸರ್ ಒಬ್ಬ ತನ್ನ ಪ್ರೇಯಸಿ ಮತ್ತು ಅವಳ ಮೊದಲ ಗಂಡನ ಮಗಳ ಬದುಕಿನ ನಾಟಕ ಇದಾಗಿದ್ದು, ಹಿರಿಯರು ಸಲ್ಲದ ಸಂಬAಧಗಳಲ್ಲಿ ತೊಡಗಿದರೆ, ಗುರುತಿಸಿಕೊಂಡರೆ ನಂತರ ಪೀಳಿಗೆಯ ಮನಸ್ಥಿತಿಯ ಮತ್ತು ಭಾವನೆಗಳ ಮೇಲೆ ಬೀರುವ ಪರಿಣಾಮವನ್ನು ತೋರಿಸುವ ಪ್ರಯತ್ನವನ್ನು ನಾಟಕದ ಮೂಲಕ ಮಾಡಲಾಯಿತು.
ಭರ್ತಿ: ರಂಗಾಯಣದಲ್ಲಿನ ಎಲ್ಲಾ ರಂಗ ವೇದಿಕೆಗಳು ಭರ್ತಿಯಾಗಿದ್ದು, ಸಾವಿರಾರು ಮಂದಿ ರಂಗಾಸಕ್ತರು ತಮ್ಮಿಷ್ಟದ ನಾಟಕಗಳನ್ನು ವೀಕ್ಷಣೆ ಮಾಡಿದರು. ನಾಟಕ ನೋಡಲು ಬರುವ ಅಭಿಮಾನಿಗಳಿಗೆ ಯಾವುದೇ ಗೊಂದಲ ಉಂಟಾಗದAತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ.

Translate »