ತುಮಕೂರು, ನ.10- ಕೆ.ಆರ್.ಪೇಟೆ ಉಪ ಚುನಾವಣೆ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಶಿರಾ ಚುನಾವಣೆ ಉಸ್ತುವಾರಿ ಹೊತ್ತಿ ದ್ದರು. ಶಿರಾ ಗೆಲುವಿನ ಬಹುತೇಕ ಕ್ರೆಡಿಟ್ ವಿಜಯೇಂದ್ರ ಅವರಿಗೆ ಸಲ್ಲಲಿದೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿಗಳನ್ನು ಸುತ್ತಿದ ವಿಜಯೇಂದ್ರ ಜಾತಿವಾರು ಸಭೆಗಳನ್ನು ನಡೆಸಿದರು. ತಮ್ಮದೇ ಆದ ತಂಡ ಕಟ್ಟಿಕೊಂಡು ಶಿರಾದಲ್ಲಿ ಕಾರ್ಯಾಚರಣೆ ನಡೆಸಿದರು. ಅವರ ತಂತ್ರಗಳು ಶಿರಾದಲ್ಲಿ ಫಲ ನೀಡಿವೆ.
