ಸದ್ಯದಲ್ಲೇ ಭಾರೀ ಪ್ರಮಾಣದಲ್ಲಿ ಸಂಪುಟ ಪುನರ್ರಚನೆ
ಮೈಸೂರು

ಸದ್ಯದಲ್ಲೇ ಭಾರೀ ಪ್ರಮಾಣದಲ್ಲಿ ಸಂಪುಟ ಪುನರ್ರಚನೆ

November 11, 2020

ಬೆಂಗಳೂರು, ನ.10(ಕೆಎಂಶಿ)- ಮಂತ್ರಿ ಮಂಡಲವನ್ನು ದೊಡ್ಡ ಪ್ರಮಾಣದಲ್ಲಿ ಪುನರ್ರ ಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.

ಉಪಚುನಾವಣೆ ನಡೆದ ಎರಡು ಕ್ಷೇತ್ರಗಳಲ್ಲಿ ಪಕ್ಷ ಜಯಭೇರಿ ಬಾರಿಸಲು ತಮ್ಮ ಸರ್ಕಾರಕ್ಕಿ ರುವ ಜನ ಬೆಂಬಲವೇ ಕಾರಣ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಇದಕ್ಕೆ ಈ ಕ್ಷೇತ್ರಗಳ ಮತ ದಾರರು ಮತ್ತು ರಾಜ್ಯದ ಜನತೆಗೆ ಚಿರಋಣಿ ಯಾಗಿರುತ್ತೇನೆ. ಮುಂದಿನ ಎರಡೂವರೆ ವರ್ಷ ಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದ್ದು, ಇದಕ್ಕಾಗಿ ಆಡಳಿತದಲ್ಲಿ ಕೆಲವು ಮಾರ್ಪಾಡು ಮಾಡುತ್ತೇನೆ.

ಇನ್ನೆರಡು ಮೂರು ದಿನ ಗಳಲ್ಲಿ ಮಂತ್ರಿಮಂಡಲ ವನ್ನು ವಿಸ್ತರಿಸಲಿದ್ದು, ಕೆಲವ ರನ್ನು ಕೈಬಿಟ್ಟು ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಇದಕ್ಕೆ ವರಿ ಷ್ಠರ ಅನುಮತಿ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಈ ಸಂಬಂಧ ಸಮಾಲೋಚನೆ ಮಾಡುತ್ತೇನೆ.

ಅಲ್ಲದೆ ಎರಡು ಮೂರು ದಿನದಲ್ಲಿ ದೆಹಲಿಗೆ ಹೋಗಿ, ವರಿಷ್ಟರ ಜೊತೆ ಚರ್ಚೆ ನಡೆಸುವು ದಾಗಿ ತಿಳಿಸಿದರು. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಜನತೆ ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಜನತೆಗೆ ನಾನು ನೀಡಿ ರುವ ಭರವಸೆಯನ್ನು ಖಂಡಿತ ನೆರವೇರಿ ಸುತ್ತೇನೆ ಎಂದರು. ಕಳೆದ 1 ವರ್ಷದ ಅವಧಿ ಯಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆದವು. ರಾಜ್ಯದಲ್ಲಿ ಎರಡು ಬಾರಿ ನೆರೆ ಮತ್ತು ಪ್ರವಾಹ ಪರಿಸ್ಥಿತಿ ಎದುರಾಯಿತು.

ಇದಲ್ಲದೆ, ಕೋವಿಡ್-19 ಸೋಂಕಿನ ನಡುವೆಯು ರಾಜ್ಯ ಸರ್ಕಾರ ಯಶಸ್ವಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಜನರ ಭಾವನೆಗೆ ಸ್ಪಂದಿಸಿದ್ದೇವೆ ಎನ್ನುವುದಕ್ಕೆ ಈ ಚುನಾವಣಾ ಫಲಿತಾಂಶವೇ ಕಾರಣ. ಜನತೆಗೆ ಕೊಟ್ಟ ಮಾತಿನಂತೆ ಈ ಸರ್ಕಾರ ನಡೆದುಕೊಳ್ಳಲಿದೆ ಎಂದರು. ಬಸವ ಕಲ್ಯಾಣ, ಮಸ್ಕಿ, ಬೆಳಗಾವಿ ಉಪ ಚುನಾವಣೆಗೆ ನಾವು ಸಿದ್ಧತೆ ಆರಂಭಿಸಿದ್ದೇವೆ. ವಿಜಯೇಂದ್ರ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷದ ವರಿಷ್ಠರು ಸೂಚಿಸಿದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸ ಬಹುದು. ಸರ್ಕಾರ ಹಾಗೂ ತಮ್ಮ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮತದಾರರೇ ಉತ್ತರ ನೀಡಿದ್ದಾರೆ. ಇನ್ನು ಮುಂದಾದರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದಷ್ಟೇ ಸಲಹೆ ನೀಡುತ್ತೇನೆ.

 

Translate »