ಕೋಡಿಹಳ್ಳಿ ಚಂದ್ರಶೇಖರ್‍ರಿಂದ ಬ್ಲಾಕ್‍ಮೇಲ್ ತಂತ್ರ
ಮೈಸೂರು

ಕೋಡಿಹಳ್ಳಿ ಚಂದ್ರಶೇಖರ್‍ರಿಂದ ಬ್ಲಾಕ್‍ಮೇಲ್ ತಂತ್ರ

December 14, 2020
  • ಅವರ ಮಾತು ಕೇಳಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ
  • `ಎಸ್ಮಾ’ ಜಾರಿ ಮಾಡಲು ಹಿಂಜರಿಯಲ್ಲ
  • ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು,ಡಿ.13-ಸಾರಿಗೆ ನೌಕರರ ಮುಷ್ಕರದ ಮುಂದಾಳತ್ವ ವಹಿಸಿ ರುವ ಕೋಡಿಹಳ್ಳಿ ಚಂದ್ರಶೇಖರ್ ಬ್ಲಾಕ್‍ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ರಂತಹವರ ಮಾತು ಕೇಳಿ ಭವಿಷ್ಯ ಹಾಳು ಮಾಡಿಕೊಳ್ಳ ಬೇಡಿ ಎಂದು ನೌಕರರಿಗೆ ಕಿವಿಮಾತು ಹೇಳಿದ ಗೃಹ ಸಚಿ ವರು, ಮುಷ್ಕರ ಮುಂದುವರೆದರೆ ಎಸ್ಮಾ ಜಾರಿ ಮಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಹಿಂದೆಯೂ ಎಸ್ಮಾ ಜಾರಿ ಮಾಡಿರುವ ಉದಾಹರಣೆಗಳಿವೆ ಎಂದು ಅವರು ಉಲ್ಲೇಖಿಸಿದರು.

ಸಾರಿಗೆ ನೌಕರರ ಮುಖಂಡರು ಸರ್ಕಾರದ ಜೊತೆ ಮಾತುಕತೆ ನಡೆಸಿ, ಸಂಧಾನ ಯಶಸ್ವಿಯಾಗಿದೆ ಎಂದು ವಿಧಾನಸೌಧದ ಮುಂದೆ ಘೋಷಿಸಿದ್ದರು. ಆನಂತರ ಫ್ರೀಡಂ ಪಾರ್ಕ್‍ಗೆ ತೆರಳಿ ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಮಾತನಾಡಿದ ನಂತರ ಮುಷ್ಕರ ಮುಂದುವರೆಯುತ್ತದೆ ಎಂದು ಉಲ್ಟಾ ಹೊಡೆದಿದ್ದಾರೆ. ಕೋಡಿ ಹಳ್ಳಿ ಸಾರಿಗೆ ನೌಕರರನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದಾರೆ. ಅವರ ಸ್ವಪ್ರತಿಷ್ಠೆಯಿಂದ ರಾಜ್ಯದ ಆರೂವರೆ ಕೋಟಿ ಜನರಿಗೆ ತೊಂದರೆಯಾಗುತ್ತಿದೆ. ಸರ್ಕಾರವು ಪರ್ಯಾಯ ಚಿಂತನೆ ನಡೆಸುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.

 

Translate »