ಜನರಿಗೆ ಒಂದು ತೊಟ್ಟು ರಕ್ತ ಬಂದರೆ  ಕೋಡಿಹಳ್ಳಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುತ್ತೇವೆ
ಮೈಸೂರು

ಜನರಿಗೆ ಒಂದು ತೊಟ್ಟು ರಕ್ತ ಬಂದರೆ ಕೋಡಿಹಳ್ಳಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುತ್ತೇವೆ

December 14, 2020

ಬೆಂಗಳೂರು, ಡಿ.13-ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದು ಸಾರ್ವಜನಿಕರಿಗೆ ಒಂದು ತೊಟ್ಟು ರಕ್ತ ಬಂದರೂ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸುಮ್ಮನೆ ಬಿಡುವುದಿಲ್ಲ. ಪರ ಪ್ಪನ ಅಗ್ರಹಾರ ಜೈಲಿಗೆ ಕಳುಹಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದರು. ಸಂಧಾನ ವಿಫಲವಾಗಿದೆ ಎಂದು ಫ್ರೀಡಂ ಪಾರ್ಕ್‍ನಲ್ಲಿ ಸಾರಿಗೆ ನೌಕರರ ಒಕ್ಕೂಟದ ಮುಖಂಡರು ಘೋಷಣೆ ಮಾಡಿದ ಬೆನ್ನಲ್ಲೇ ಯಡಿಯೂರಪ್ಪ ನಡೆಸಿದ ಸಭೆಯಲ್ಲಿ ಭಾಗ ವಹಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

ಇಂದು ಸಾರಿಗೆ ನೌಕರರ ಮುಖಂಡರು ಸಂಧಾನ ಸಭೆ ಯಲ್ಲಿ ಭಾಗವಹಿಸಿ, ಸಂಧಾನ ಯಶಸ್ವಿಯಾಗಿದೆ ಎಂದು ವಿಧಾನ ಸೌಧದ ಮುಂದೆ ಮಾಧ್ಯಮಗಳೊಂದಿಗೆ ಹೇಳಿದ್ದರು. ಈ ಹಿನ್ನೆಲೆ ಯಲ್ಲಿ ರಾಜ್ಯದ ಹಲವೆಡೆ ನೌಕರರು ಸಿಹಿ ಹಂಚಿ ಸಂಭ್ರಮಿಸಿ ಬಸ್‍ಗಳನ್ನು ಓಡಿಸಲು ಮುಂದಾಗಿದ್ದರು. ಆದರೆ ಈ ಮುಖಂ ಡರು ಫ್ರೀಡಂ ಪಾರ್ಕ್‍ಗೆ ತೆರಳಿ ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಚರ್ಚಿಸಿದ ನಂತರ ಮುಷ್ಕರ ಮುಂದುವರೆಯುವು ದಾಗಿ ಹೇಳಿದ್ದಾರೆ ಎಂದು ಅಶೋಕ್ ಕಿಡಿಕಾರಿದರು. ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯದ ಜನರು ಹಾಗೂ ನೌಕರರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಬಸ್ ಸಂಚಾರ ವಿಲ್ಲದೆ ಆಸ್ಪತ್ರೆಗೆ ತೆರಳಬೇಕಾದ ರೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿ ಕರು ತೊಂದರೆ ಅನುಭವಿಸಿದ್ದಾರೆ. ನಾಳೆ ನೌಕರರು ಕೆಲಸಕ್ಕೆ ಹಾಜರಾಗುವ ಸಾಧ್ಯತೆ ಇದೆ. ಬಸ್‍ಗಳನ್ನು ಅವರು ಓಡಿಸುತ್ತಾರೆ. ಆ ವೇಳೆ ಕಲ್ಲು ತೂರಾಟ ನಡೆದು ಸಾರ್ವಜನಿಕರಿಗೆ ಒಂದು ಹನಿ ರಕ್ತ ಬಂದರೂ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸುಮ್ಮನೆ ಬಿಡುವು ದಿಲ್ಲ. ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

Translate »