ಮಾಜಿ ಪ್ರಧಾನಿ ದೇವೇಗೌಡರಿಗೆ ಸುತ್ತೂರು ಶ್ರೀಗಳ ಆಶೀರ್ವಾದ
ಮೈಸೂರು

ಮಾಜಿ ಪ್ರಧಾನಿ ದೇವೇಗೌಡರಿಗೆ ಸುತ್ತೂರು ಶ್ರೀಗಳ ಆಶೀರ್ವಾದ

September 11, 2021

ಮೈಸೂರು, ಸೆ.೯(ಎಂಕೆ)- ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಗುರುವಾರ ಭೇಟಿ ನೀಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀ ರ್ವಾದ ಪಡೆದು ಕುಶಲೋಪರಿ ನಡೆಸಿದರು.

ಬಳಿಕ ಸುತ್ತೂರು ಶ್ರೀಗಳೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತ್ಯೇಕ ವಾಗಿ ಸಮಾಲೋಚನೆ ನಡೆಸಿ, ಪ್ರಸಾದ ಸ್ವೀಕರಿಸಿದರು. ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಶಾಸಕ ರಾದ ಸಿ.ಎಸ್.ಪುಟ್ಟರಾಜು, ಸಾ.ರಾ. ಮಹೇಶ್, ಕೆ.ಮಹದೇವ್, ಅಶ್ವಿನ್ ಕುಮಾರ್, ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್, ಮೈಸೂರು ಜಿಪಂ ಮಾಜಿ ಸದಸ್ಯ ಮಾದೇಗೌಡ, ಕೆ.ಟಿ.ಚೆಲುವೇಗೌಡ ಇನ್ನಿ ತರರು ಉಪಸ್ಥಿತರಿದ್ದರು.

Translate »