ಜಿ.ಟಿ.ದೇವೇಗೌಡ ಈಗ ಜೆಡಿಎಸ್‌ನಲ್ಲೇ ಇದ್ದಾರೆ
ಮೈಸೂರು

ಜಿ.ಟಿ.ದೇವೇಗೌಡ ಈಗ ಜೆಡಿಎಸ್‌ನಲ್ಲೇ ಇದ್ದಾರೆ

September 11, 2021

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ಸೇರುವರೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಜಿಟಿಡಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ, ಅವರು ಜೆಡಿಎಸ್‌ನಲ್ಲೇ ಇದ್ದಾರೆ. ಸಿದ್ದರಾಮಯ್ಯ, ಯಡಿಯೂರಪ್ಪನವರ ಮನೆಗೂ ಹೋಗಿ ಕ್ಷೇತ್ರದ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ದ್ದಾರೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ನೀಡು ವುದಿಲ್ಲ. ಅವರು ಪಕ್ಷ ಬಿಟ್ಟಾಗ ನಾನು ಮಾತ ನಾಡುತ್ತೇನೆ ಎಂದರು. ಜಿಟಿಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ `ಅದು ಮುಂದಿನ ವಿಚಾರ. ಸದ್ಯಕ್ಕೆ ಅವರು ಇನ್ನೂ ಜೆಡಿಎಸ್‌ನಲ್ಲೇ ಇದ್ದಾರೆ’ ಎಂದು ಪುನರುಚ್ಚರಿಸಿದರು.

 

 

Translate »