ಮಂಗಳವಾರದವರೆಗೆ ಬೋಟಿ ಬಜಾರ್ ಮಾಂಸ ಮಾರುಕಟ್ಟೆ ಬಂದ್
ಮೈಸೂರು

ಮಂಗಳವಾರದವರೆಗೆ ಬೋಟಿ ಬಜಾರ್ ಮಾಂಸ ಮಾರುಕಟ್ಟೆ ಬಂದ್

July 27, 2020

ಮೈಸೂರು, ಜು.26(ಎಂಟಿವೈ)-ಮಾಂಸದ ಅಂಗಡಿ ನೌಕರನೊಬ್ಬ ಕೊರೊನಾ ಸೋಂಕಿ ನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಮೈಸೂ ರಿನ ಬೋಟಿ ಬಜಾರ್ ಮಾಂಸದ ಅಂಗಡಿಯನ್ನು ಮಂಗಳವಾರದವರೆಗೆ ಬಂದ್ ಮಾಡಲಾಗಿದ್ದು, ಪಾಲಿಕೆ ವತಿ ಯಿಂದ ಸ್ಯಾನಿಟೈಸ್ ಮಾಡಲಾಗಿದೆ.

ಬೋಟಿ ಬಜಾರ್‍ನಲ್ಲಿರುವ ಮಾಂಸದ ಮಾರುಕಟ್ಟೆಯ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 10 ದಿನದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆ ಅವರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಅವರ ಗಂಟಲು ದ್ರವ ಪರೀಕ್ಷಾ ವರದಿ 4 ದಿನದ ಹಿಂದೆ ಪಾಸಿಟಿವ್ ಬಂದಿತ್ತು. ಉಸಿ ರಾಟದ ಸಂಬಂಧ ಸಮಸ್ಯೆಗೆ ತುತ್ತಾಗಿದ್ದ ಆ ವ್ಯಕ್ತಿ 2 ದಿನದ ಹಿಂದಷ್ಟೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರದಿಂದ 4 ದಿನಗಳವರೆಗೆ ಮಾರು ಕಟ್ಟೆ ಬಂದ್ ಮಾಡಲಾಗಿದ್ದು, ಎರಡು ಬಾರಿ ಸ್ಯಾನಿಟೈಸ್ ಮಾಡಲಾಗಿದೆ. ಸೋಂಕಿತ ನೌಕರ ತಾನು ಅನಾರೋಗ್ಯಕ್ಕೆ ತುತ್ತಾದ ದಿನದಿಂದಲೂ ಮಾಂಸದ ಮಾರುಕಟ್ಟೆಗೆ ಕೆಲಸಕ್ಕೆ ಬಾರದೇ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸೋಂಕು ಹರಡಿಲ್ಲ. ಒಂದು ವೇಳೆ ಸೋಂಕಿತ ವ್ಯಕ್ತಿ ಕೆಲಸಕ್ಕೆ ಬಂದಿದ್ದರೆ ಆ ಮಳಿಗೆಯಲ್ಲಿ ಮಾಂಸ ಖರೀದಿಸಿದ ಗ್ರಾಹಕರಿಗೆ ಆತಂಕ ಎದುರಾಗುತ್ತಿತ್ತು. ಆದರೂ ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರ ಪಾಲಿಕೆ ಬೋಟಿ ಬಜಾರ್ ನಲ್ಲಿರುವ ಮಾಂಸದ ಅಂಗಡಿಯನ್ನು ಮಂಗಳವಾರದವರೆಗೂ ಬಂದ್ ಮಾಡಿಸಿದೆ. ಅಲ್ಲದೇ ಸೋಂಕು ಇತರರಿಗೆ ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಗ್ರಾಹಕರು ಅಥವಾ ನೆರೆ ಹೊರೆಯ ಮಳಿಗೆಗಳ ಮಾಲೀಕರು ಆತಂಕಪಡದಂತೆ ಪಾಲಿಕೆ ಸಿಬ್ಬಂದಿ ಭರವಸೆ ನೀಡಿದ್ದಾರೆ.

ಈ ಕುರಿತಂತೆ ಮಟನ್ ಮಾರ್ಕೆಟ್ ಮರ್ಚೆಂಟ್ಸ್ ಅಸೋಸಿಯೇಷನ್ ಕಾರ್ಯ ದರ್ಶಿ ನಾಗೇಂದ್ರ ಮಾತನಾಡಿ, ಗ್ರಾಹಕರ ಹಿತವೂ ಮುಖ್ಯವಾಗಿದೆ. ಸೋಂಕಿತ ನೌಕರ ಅನಾ ರೋಗ್ಯಕ್ಕೂ ಮುನ್ನವೇ ಕೆಲಸಕ್ಕೆ ಗೈರು ಹಾಜರಾಗಿದ್ದ. ಈ ಹಿನ್ನೆಲೆಯಲ್ಲಿ ಮಾಂಸ ಮಾರುಕಟ್ಟೆಗೆ ಬಂದ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಪಾಲಿಕೆ ಸೂಚನೆ ಮೇರೆಗೆ 4 ದಿನ ಮಾಂಸದ ಅಂಗಡಿಗಳನ್ನು ಬಂದ್ ಮಾಡಿದ್ದೇವೆ. ಮಂಗಳವಾರದಿಂದ ಮಾರು ಕಟ್ಟೆ ತೆರೆಯಲಿದೆ. ಸಿಬ್ಬಂದಿಗಳಲ್ಲದೇ ಗ್ರಾಹಕರ ಆರೋಗ್ಯ ರಕ್ಷಣೆಯೂ ನಮಗೆ ಮುಖ್ಯವಾಗಿರುವುದರಿಂದ ಯಾರೂ ಆತಂಕಪಡ ಬಾರದು. ಎಲ್ಲರ ಸುರಕ್ಷತೆಗಾಗಿ ಸ್ಯಾನಿಟೈಸ್ ಮಾಡಲಾಗಿದೆ ಎಂದರು.

Translate »