ಪ್ರದರ್ಶಕ ಕಲೆಗಾಗಿ ನಾಡಿನೆಲ್ಲೆಡೆ ಶಾಖೆ ವಿಸ್ತಾರ: ಪ್ರೊ.ನಾಗೇಶ್ ವಿ.ಬೆಟ್ಟಕೋಟೆ
ಮೈಸೂರು

ಪ್ರದರ್ಶಕ ಕಲೆಗಾಗಿ ನಾಡಿನೆಲ್ಲೆಡೆ ಶಾಖೆ ವಿಸ್ತಾರ: ಪ್ರೊ.ನಾಗೇಶ್ ವಿ.ಬೆಟ್ಟಕೋಟೆ

February 11, 2021

ಮೈಸೂರು,ಫೆ.10-ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲಾ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಪ್ರೊ.ನಾಗೇಶ್. ವಿ.ಬೆಟ್ಟಕೋಟೆ ಅವರನ್ನು ಕಲ್ಯಾಣ ಕರ್ನಾಟಕದ ರಂಗ ಪದವೀಧರರಿಂದ ಸನ್ಮಾನಿಸಲಾಯಿತು. ಈ ವೇಳೆ ಹಂಪಿ ವಿ.ವಿಯ ಪ್ರೊ.ಅಶೋಕಕುಮಾರ್ ರಂಜೇರೆ ಮಾತನಾಡಿ, ಈ ನಾಡಿನ ಎಲ್ಲಾ ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ನಾಟಕದ ಪಠ್ಯವನ್ನು ಅಳವಡಿಸಿ ಅದಕ್ಕೆ ಪೂರಕವಾಗಿ ನಾಡಿನ ಎಲ್ಲ ರಂಗ ಪದವೀಧರರು ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.

ಪ್ರೊ.ಕೆ.ರಾಮಕೃಷ್ಣಯ್ಯ ಮಾತನಾಡಿ, ವಿಶೇಷ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಮತ್ತು ವಿ.ವಿಗಳು ಆದಷ್ಟು ಬೇಗ ನೆರವೇರಿಸಿದಾಗ ಏಕಕಾಲದಲ್ಲಿ ರಂಗಭೂಮಿಯ ಮೂಲಕ ಮಕ್ಕಳಿಗೆ ಆಯಾ ಪ್ರದೇಶದ ಸಂಸ್ಕøತಿಯನ್ನು ಕಟ್ಟಿ ಬೆಳೆಸಲು ಸಹಾಯಕ ವಾಗುತ್ತದೆ ಎಂದರು. ಸನ್ಮಾನ ಸ್ವೀಕರಿಸಿ ಕುಲಪತಿ ಪ್ರೊ.ನಾಗೇಶ್.ವಿ. ಬೆಟ್ಟಕೋಟೆ ಮಾತ ನಾಡಿ, ನಾಡಿನ ಎಲ್ಲ ಪ್ರದರ್ಶನ ಕಲಾಸಕ್ತರಿಗೆ ಅನುಕೂಲವಾಗುವಂತೆ ನಾಡಿನ ಎಲ್ಲೆಡೆ ಸದರಿ ವಿವಿಯ ಶಾಖೆಗಳನ್ನು ಸ್ಥಾಪಿಸಿ ಪ್ರದರ್ಶಕ ಕಲೆಗಳಿಗೆ ಪ್ರೋತ್ಸಾಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ವಿಎಸ್‍ಕೆವಿವಿಯ ಪ್ರಾಧ್ಯಾಪಕ ಡಾ.ಅಣ್ಣಾಜಿ ಕೃಷ್ಣರೆಡ್ಡಿ, ಬೆಂಗಳೂರು ಪ್ರಾಧ್ಯಾಪಕ ಹೆಚ್.ಶಿವಣ್ಣ, ಪ್ರಭುರಾಜ, ಕೆ.ಶಂಕರ್ ಮೆಟ್ರಿ, ಆರ್.ಪಿ. ಮಂಜುನಾಥ್, ಮಹೇಶ್, ಅನಂತಕುಮಾರ್ ಮತ್ತಿತರರು ಹಾಜರಿದ್ದರು.

Translate »