ಮುಂದಿನ ವಾರದಿಂದ ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ
ಮೈಸೂರು

ಮುಂದಿನ ವಾರದಿಂದ ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ

January 19, 2022

ಮೈಸೂರು, ಜ.18(ಜಿಎ)- ಮುಂದಿನ ವಾರದಿಂದ ಮೊದಲಿನಂತೆ ಪೌರಕಾರ್ಮಿಕ ರಿಗೆ ಉತ್ತಮ ಗುಣಮಟ್ಟದ ಬೆಳಗಿನ ಉಪಾ ಹಾರ ವ್ಯವಸ್ಥೆ ಮಾಡಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.

ರಾಜ್ಯ ಸಫಾಯಿ ಕರ್ಮಚಾರಿ ಆಯೋ ಗದ ಆಧ್ಯಕ್ಷ ಎಂ.ಶಿವಣ್ಣ ಅವರ ನೇತೃತ್ವ ದಲ್ಲಿ ಪೌರಕಾರ್ಮಿಕರ ಕುಂದು ಕೊರತೆ ಕುರಿತು ಪಾಲಿಕೆ ಅಧಿಕಾರಿಗಳು ಮತ್ತು ಮೈಸೂರು ನಗರ ಪಾಲಿಕೆ ಖಾಯಂ ಪೌರ ಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿ ಕರ ಮಹಾ ಸಂಘ ವತಿಯಿಂದ ಮಂಗಳ ವಾರ ಪಾಲಿಕೆಯ ನವೀಕೃತ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲಾಯಿತು.

ಪೌರಕಾರ್ಮಿಕರು ವೇತನದ ಜೊತೆಗೆ ಉಪಾಹಾರದ ಭತ್ಯೆ 600 ರೂ. ನೀಡು ವಂತೆ ಬೇಡಿಕೆ ಮುಂದಿಟ್ಟರು. ಇದನ್ನು ಆಲಿಸಿದ ನಿಗಮದ ಅಧ್ಯಕ್ಷ ಎಂ. ಶಿವಣ್ಣ ರಾಜ್ಯದ ಎಲ್ಲಾ ಪಾಲಿಕೆಗಳಲ್ಲೂ ಬೆಳಗಿನ ಉಪಾಹಾರದ ವ್ಯವಸ್ಥೆ ಇದೆ ಅದರಲ್ಲೂ ಭದ್ರಾವತಿಯಲ್ಲಿ ಪೌರಕಾರ್ಮಿಕರಿಗೆ ಬಿರಿ ಯಾನಿಯನ್ನು ಉಪಾಹಾರಕ್ಕೆ ನೀಡುತ್ತಿದ್ದಾರೆ. ಮೈಸೂರಿನ ಪಾಲಿಕೆಯಲ್ಲಿ ಏಕೆ ಸಾಧ್ಯ ವಿಲ್ಲ ಎಂದು ಪಾಲಿಕೆ ಆಯುಕ್ತ ಲಕ್ಷ್ಮೀ ಕಾಂತ ರೆಡ್ಡಿ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಪೌರ ಕಾರ್ಮಿಕರಿಗೆ 2018ರಲ್ಲಿ ಬೆಳಗಿನ ಉಪಾ ಹಾರ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ಉಪಾಹಾರ ರುಚಿ ಮತ್ತು ಗುಣಮಟ್ಟ ಸರಿ ಇಲ್ಲ ಎಂದು ಅಂದು ವಿರೋಧ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆ ಬೆಳಗಿನ ಉಪಾ ಹಾರದ ಬದಲಿಗೆ ಒಬ್ಬ ಪೌರಕಾರ್ಮಿಕ ನಿಗೆ 20 ರೂ. ಭತ್ಯೆ ನೀಡಲಾಗುತ್ತಿತ್ತು ಎಂದರಲ್ಲದೆ ಮುಂದಿನ ವಾರದಿಂದಲೇ ಪೌರಕಾರ್ಮಿಕರಿಗೆ ಉತ್ತಮ ಉಪಾಹಾರ ನೀಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಪೌರಕಾರ್ಮಿಕರು ಸಮ್ಮತಿಸಿದರು.

ಇನ್ನೂ ಇದೇ ವೇಳೆ ಹೊರಗುತ್ತಿಗೆ ಆಧಾ ರದ ಮೇಲೆ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಕೇವಲ 46 ಮಂದಿಗೆ ಮಾತ್ರ ನೇರಪಾವತಿಯಡಿಯಲ್ಲಿ ವೇತನ ನೀಡಲಾಗುತ್ತಿದೆ. ಬಾಕಿ 59 ಮಂದಿಗೆ ನೇರಪಾವತಿಗೆ ಸೇರಿಸಬೇಕು ಎಂದು ಪೌರಕಾರ್ಮಿಕರು ಮನವಿ ಮಾಡಿದರು. ಈ ವೇಳೆ ಮಾತನಾಡಿದ ಆಯುಕ್ತರು ಈವರೆಗೂ 46 ಪೌರಕಾರ್ಮಿಕರು ಮಾತ್ರ ಅಗತ್ಯ ದಾಖಲಾತಿಗಳನ್ನು ನೀಡಿದ್ದಾರೆ. ಈ ಹಿನ್ನೆಲೆ ಅವರನ್ನು ನೇರ ಪಾವತಿಗೆ ಸೇರಿಸಲಾಗಿದೆ. ಬಾಕಿ 59 ಪೌರಕಾರ್ಮಿ ಕರು ಅಗತ್ಯ ದಾಖಲಾತಿಗಳನ್ನು ನೀಡಿದರೆ ಶೀಘ್ರದಲ್ಲೇ ನೇರಪಾವತಿಗೆ ಅವರನ್ನು ಸೇರಿಸಲಾಗುವುದು ಎಂದರು.

ಕೆಲ ಪೌರಕಾರ್ಮಿಕರನ್ನು ಏಕಾಏಕಿ ಕೆಲಸ ದಿಂದ ವಜಾ ಮತ್ತು ಅಮಾನತು ಮಾಡ ಲಾಗಿದೆ. ಅವರನ್ನು ಮತ್ತೆ ಕೆಲಸಕ್ಕೆ ತೆಗೆದು ಕೊಳ್ಳಬೇಕು ಎಂದು ಪೌರಕಾರ್ಮಿಕರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಆಯು ಕ್ತರು ಹಲವಾರು ವಾರ್ಡ್‍ಗಳಲ್ಲಿ ಪೌರ ಕಾರ್ಮಿಕರು ಕೆಲಸಕ್ಕೆ ಹಾಜರಿರುವುದಿಲ್ಲ. ನಮ್ಮ ಗಮನಕ್ಕೆ ಬಂದ ನಂತರ ಅವರಿಗೆ ಕೆಲಸಕ್ಕೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಅದಕ್ಕೆ ಅವರು ಪ್ರತಿಕ್ರಿಯೆ ನೀಡದ ಕಾರಣ ಅವರನ್ನು ವಜಾ ಮತ್ತು ಅಮಾನತು ಮಾಡಲಾಗಿದೆ ಎಂದು ವಿವರಿಸಿದರು.

ಪೌರಕಾರ್ಮಿಕರಿಗೆ ವಿಶ್ರಾಂತಿ ಪಡೆ ಯಲು 65 ವಾರ್ಡ್‍ಗಳಲ್ಲಿ ವಿಶ್ರಾಂತಿ ಕಟ್ಟಡ ಕಟ್ಟಿಸಲು ಸಿದ್ಧತೆಗಳನ್ನು ಮಾಡ ಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ನಾಗರಾಜ್ ಪೌರಕಾರ್ಮಿಕರ ಬೇಡಿಕೆಗೆ ಉತ್ತರಿಸಿದರು. ಆಯೋಗದ ಆಧ್ಯಕ್ಷÀ ಶಿವಣ್ಣ ಮಾತನಾಡಿ ಪೌರಕಾರ್ಮಿ ಕರು ಬೆಳಗ್ಗೆ 6ಕ್ಕೆ ಕೆಲಸಕ್ಕೆ ಬರುತ್ತಾರೆ ಮಧ್ಯಾಹ್ನ 2 ಗಂಟೆವರೆಗೂ ಕಾರ್ಯನಿರ್ವ ಹಿಸುತ್ತಾರೆ. ಆದರಿಂದ ಅವರಿಗೆ ವಿಶ್ರಾಂತಿ ಮತ್ತು ಬಟ್ಟೆಗಳನ್ನು ಬದಲಿಸಲು ಇದು ಅವಶ್ಯಕವಾಗಿದೆ. ತಕ್ಷಣ 65 ವಾರ್ಡ್ ಬದಲು ಮೊದಲು 35 ವಾರ್ಡ್‍ಗಳಲ್ಲಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಿ ಎಂದು ಸಲಹೆ ನೀಡಿದರು.

ಚರ್ಚಿಸಿ ನಿರ್ಧಾರ: ಪೌರಕಾರ್ಮಿಕರು ಇಂದಿನ ಸಭೆಯಲ್ಲಿ 25 ಬೇಡಿಕೆಗಳನ್ನು ಆಯೋಗ ಮತ್ತು ಪಾಲಿಕೆ ಅಧಿಕಾರಿಗಳ ಮುಂದೆ ಇಟ್ಟರು. ಇದರಲ್ಲಿ ಕೆಲವು ಬೇಡಿಕೆಗಳಿಗೆ ಸಭೆಯಲ್ಲೇ ಪರಿಹಾರ ದೊರಕಿತು. ಮತ್ತೆ ಕೆಲವು ಬೇಡಿಕೆಗಳನ್ನು ಚರ್ಚಿಸಿ ತಿಳಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದರು.
ಅದರಲ್ಲಿ ಪ್ರಮುಖವಾಗಿ ಮೃತಪಟ್ಟಿ ರುವ 24 ಪೌರಕಾರ್ಮಿಕರ ಕುಟುಂಬಕ್ಕೆ ಪರಿಹಾರವಾಗಿ 10 ಲಕ್ಷ ರೂ. ನೀಡಬೇಕು ಮತ್ತು ಅನುಕಂಪದ ಆಧಾರಲ್ಲಿ ಕುಟುಂಬ ದವರಿಗೆ ಕೆಲಸ ನೀಡಬೇಕು ಹಾಗೂ ರಾಷ್ಟ್ರೀಯ ಹಬ್ಬ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ನೇರ ಮತ್ತು ಖಾಯಂ ಪೌರ ಕಾರ್ಮಿಕರಿಗೆ ಅರ್ಧ ದಿನ ರಜೆ ನೀಡಬೇಕು ಮತ್ತು ಪೌರಕಾರ್ಮಿಕರಿಗೆ ಮೀಸಲಿರುವ ಶೇಕಡಾ 24.10 ಹಣದಲ್ಲಿ ಪೌರಕಾರ್ಮಿ ಕರ ಅಭಿವೃದ್ಧಿಗೆ ಪೂರಕವಾಗುವಂತೆ ಕ್ರಿಯಾ ಯೋಜನೆ ರೂಪಿಸಬೇಕು ಎಂಬ ಅನೇಕ ಬೇಡಿಕೆಗಳನ್ನು ಇಂದಿನ ಸಭೆಯಲ್ಲಿ ಮುಂದಿಟ್ಟರು. ಸಭೆಯಲ್ಲಿ ಮೇಯರ್ ಸುನಂದಾ ಪಾಲನೇತ್ರ, ಪಾಲಿಕೆ ವಿವಿಧ ವಿಭಾಗದ ಅಧಿಕಾರಿಗಳು ಮತ್ತು ಮೈಸೂರು ನಗರ ಪಾಲಿಕೆ ಖಾಯಂ ಪೌರಕಾರ್ಮಿ ಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾ ಸಂಘದ ಉನ್ನತ ಸಮಿತಿ ಅಧ್ಯಕ್ಷ ಎನ್. ಮಾರ, ಪ್ರಧಾನ ಕಾರ್ಯದರ್ಶಿ ಸಿ.ಆರ್. ರಾಚಯ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Translate »