ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಶ್ರೀಗಳ ಜಯಂತಿ: ನೂರಾರು ಮಂದಿಯ ಆರೋಗ್ಯ ತಪಾಸಣೆ
ಮೈಸೂರು

ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಶ್ರೀಗಳ ಜಯಂತಿ: ನೂರಾರು ಮಂದಿಯ ಆರೋಗ್ಯ ತಪಾಸಣೆ

January 19, 2022

ಮೈಸೂರು, ಜ.18(ಎಂಟಿವೈ)- ಆದಿ ಚುಂಚನಗಿರಿಯ ಶ್ರೀ ಬಾಲಗಂಗಾ ಧರನಾಥ ಸ್ವಾಮೀಜಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಸಹಕಾರ ಸಂಘ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಮೈಸೂರಿನ ವಿನಾಯಕ ನಗರದ (ಪಡು ವಾರಹಳ್ಳಿ) ಶ್ರೀ ಮಹದೇಶ್ವರ ದೇವಾ ಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಾಲಗಂಗಾಧರ ಶ್ರೀಗಳ ಜನ್ಮ ದಿನ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಮಾಜಿ ಶಾಸಕ ವಾಸು ಉದ್ಘಾಟಿಸಿದರಲ್ಲದೆ, ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಬಳಿಕ ಮಾತನಾಡಿದ ವಾಸು, ಆದಿ ಚುಂಚನಗಿರಿ ಕ್ಷೇತ್ರದತ್ತ ವಿಶ್ವದ ಅನೇಕ ರಾಷ್ಟ್ರಗಳ ಜನರು ತಿರುಗಿ ನೋಡುವಂತೆ ಮಾಡಿದ ಕೀರ್ತಿ ಆದಿಚುಂಚನಗಿರಿ ಶ್ರೀ ಗಳಿಗೆ ಸಲ್ಲುತ್ತದೆ. ತಮ್ಮ ಜನಪರ ಕಾಳಜಿ ಯಿಂದಾಗಿ ಆದಿಚುಂಚನಗಿರಿ ಕ್ಷೇತ್ರದ ವತಿಯಿಂದ ಬಡವರು, ನೊಂದವರಿಗೆ ಸದಾ ಸಹಾಯ ಹಸ್ತ ನೀಡುತ್ತಿದ್ದರು. ಜನಾಂ ಗಕ್ಕೆ ಮಾತ್ರ ಸೀಮಿತಗೊಳ್ಳದೆ ಎಲ್ಲಾ ಜನಾಂ ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಕ್ಷೇತ್ರದಲ್ಲೂ ಪ್ರತಿಭೆ ಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನನ್ನನ್ನೂ ಒಳಗೊಂಡಂತೆ ಅಪಾರ ಸಂಖ್ಯೆ ಯಲ್ಲಿ ಮುಖಂಡರು ಸಾಗುತ್ತಿದ್ದಾರೆ. ಯುವಜನತೆ ಸನ್ಮಾರ್ಗದಲ್ಲಿ ಸಾಗಬೇಕಾ ದರೆ ಅದು ಆದಿಚುಂಚನಗಿರಿ ಶ್ರೀಗಳ ಮಾರ್ಗದರ್ಶನ ಅನುಸರಿಸುವುದು ಅಗತ್ಯ ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಜಿ. ಗಂಗಾಧರ್ ಮಾತನಾಡಿ, ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಎಲ್ಲ ಜನಾಂಗದವರ ಏಳಿಗೆಗೆ ಶ್ರಮಿಸಿ ದರು. ಸ್ವಾಮೀಜಿಯ ಸಾಧನೆಯ ಹಾದಿ ಬಲು ದೊಡ್ಡದು. ಚುಂಚನಗಿರಿಯನ್ನು ಚಿನ್ನದಗಿರಿ ಎಂಬಂತೆ ಮರು ಸೃಷ್ಟಿಸಿ ದ್ದಾರೆ. ಶ್ರೀಗಳು ಧಾರ್ಮಿಕ ದೃಷ್ಟಿಯಲ್ಲಿ ಜಗದ್ಗುರುಗಳು ಎನಿಸಿಕೊಂಡಿದ್ದರು. ಅವರು ಸೇವೆಯೇ ಪೂಜೆ ಎಂದು ಭಾವಿಸಿ, ಜನಮುಖಿ ಚಿಂತಕರಾಗಿದ್ದರು. ಶೋಷಿತರು, ದಲಿತರು, ಅನಕ್ಷರಸ್ಥರು, ರೈತರು, ನಿರ್ಲಕ್ಷಿತರಿಗೆ ಸ್ಪಂದಿಸುವ ಹಂಬಲವುಳ್ಳವರಾಗಿದ್ದರು ಎಂದರು.

ಇದೇ ವೇಳೆ ನೂರಾರು ಮಂದಿ ಬಿಪಿ, ಶುಗರ್, ನೇತ್ರ ಹಾಗೂ ದಂತ ತಪಾಸಣೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳ ತಪಾಸಣೆಗೂ ಒಳಗಾದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಕಾಂಗ್ರೆಸ್ ಮುಖಂಡ ಹರೀಶ್‍ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಎಂ.ಬಿ.ಮಂಜೇಗೌಡ, ಅಖಿಲ ಕರ್ನಾಟಕ ಒಕ್ಕಲಿಗರ ಮಹಾ ಸಭಾದ ಅಧ್ಯಕ್ಷ ಎನ್.ಬೆಟ್ಟೇಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ದಂತವೈದ್ಯ ಡಾ. ಲೋಕೇಶ್, ಮುಖಂಡರಾದ ಕೆ.ಹರೀಶ್ ಗೌಡ, ಮುಖಂಡರಾದ ಎಂ.ಮಹದೇವ ಸ್ವಾಮಿ, ಎಂ.ಭೈರಪ್ಪ, ಸುಶೀಲಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಒಕ್ಕಲಿಗರ ಯುವ ಶಕ್ತಿ ವೇದಿಕೆ: ಒಕ್ಕಲಿ ಗರ ಯುವ ಶಕ್ತಿ ವೇದಿಕೆ ವತಿಯಿಂದ ಬಾಲಗಂಗಾಧರನಾಥ ಸ್ವಾಮೀಜಿಯ ಜನ್ಮ ಜಯಂತಿ ಅಂಗವಾಗಿ ನಾರಾ ಯಣಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ವೃತ್ತದಲ್ಲಿ ಸ್ವಾಮೀಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸ ಲಾಯಿತು. ಈ ವೇಳೆ ಮುಡಾ ಸದಸ್ಯ ನವೀನ್ ಕುಮಾರ್ ಮಾತನಾಡಿ, ಅನ್ನ ಮತ್ತು ಅಕ್ಷರ ದಾಸೋಹದ ಮೂಲಕ ಬಡ ಜನರ ಸೇವೆ ಮಾಡಿದವರು ಬಾಲಗಂಗಾಧರ ಶ್ರೀಗಳು. ಹಸಿರು ಕ್ರಾಂತಿ ಹರಿಕಾರರೆಂದು ಹೆಸರು ಗಳಿಸಿದ ಶ್ರೀಗಳು 5 ಕೋಟಿ ಗಿಡ ನೆಡುವ ಮೂಲಕ ಹೊಸ ವಿಕ್ರಮ ಸ್ಥಾಪಿಸಿದ್ದಾರೆ ಎಂದರು.

ವೇದಿಕೆ ಅಧ್ಯಕ್ಷ ಪ್ರಮೋದ್‍ಗೌಡ ಮಾತ ನಾಡಿ, ಶ್ರೀಗಳು ಆದಿಚುಂಚನಗಿರಿ ಮಠದ ಹೆಸರಿನಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ, ಪರಿಸರ, ಪ್ರಾಣಿ ಸಂರಕ್ಷಣೆ, ವೇದಾ ಧ್ಯಯನ, ಕೃಷಿ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿ ಸಿಕೊಂಡಿದ್ದರು ಎಂದು ಹೇಳಿದರು.

ವೇದಿಕೆ ಕಾರ್ಯದರ್ಶಿ ಮಂಜುನಾಥ್ ಗೌಡ, ಲಕ್ಷ್ಮಿ ಸುದರ್ಶನ್, ಶ್ರೀನಿವಾಸ್, ವಿಘ್ನೇಶ್ವರ್ ಭಟ್, ವಿವೇಕ್, ರವಿ, ಕೆಂಪ ರಾಜು, ನಂಜುಂಡಿ, ಕುಮಾರ್, ಸಂತೋಷ್, ಪ್ರಶಾಂತ್, ಶಿವಕುಮಾರ್, ನವೀನ್, ಸನತ್ ಸೇರಿದಂತೆ ಹಲವರು ಇದ್ದರು.

Translate »