ಬ್ರಿಗೇಡ್ ರೋಡ್ ಮಾದರಿ ಅರಸು ರಸ್ತೆ ಅಭಿವೃದ್ಧಿ: ಶಾಸಕ ನಾಗೇಂದ್ರ
ಮೈಸೂರು

ಬ್ರಿಗೇಡ್ ರೋಡ್ ಮಾದರಿ ಅರಸು ರಸ್ತೆ ಅಭಿವೃದ್ಧಿ: ಶಾಸಕ ನಾಗೇಂದ್ರ

February 24, 2023

ಮೈಸೂರು, ಫೆ.23(ಎಂಕೆ)- ಮೈಸೂ ರಿನ ಪ್ರತಿಷ್ಠಿತ ವಾಣಿಜ್ಯ ಸಂಕೀರ್ಣವೆಂದೇ ಕರೆಯಲ್ಪಡುವ ಡಿ.ದೇವರಾಜ ಅರಸು ರಸ್ತೆ ಅಭಿವೃದ್ಧಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಕೆ.ಆರ್. ವೃತ್ತದಿಂದ ಜೆಎಲ್‍ಬಿ ರಸ್ತೆ ಜಂಕ್ಷನ್‍ವರೆಗಿನ ಡಿ.ದೇವರಾಜ ಅರಸು ರಸ್ತೆಗೆ ಗುಣಮಟ್ಟದ ಡಾಂಬರೀಕರಣ, ಎರಡು ಬದಿಯ ಚರಂಡಿ ಹಾಗೂ ಫುಟ್‍ಪಾತ್ ಅಭಿವೃದ್ಧಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಮೇಯರ್ ಶಿವಕುಮಾರ್ ಗುದ್ದಲಿ ಪೂಜೆ ನೆರವೇರಿಸಿದರು.
9.77 ಕೋಟಿ ರೂ. ರಾಜ್ಯ ಸರ್ಕಾರದ ವಿಶೇಷ ಅನುದಾನದಡಿ ಬೆಂಗಳೂರಿನ ಬ್ರಿಗೇಡ್ ರಸ್ತೆ ಮಾದರಿಯಲ್ಲಿ ಡಿ.ದೇವ ರಾಜ ಅರಸು ರಸ್ತೆ ಅಭಿವೃದ್ಧಿ ಮಾಡಲಾ ಗುವುದು. ಮೈಸೂರು ಕೇಂದ್ರ ಭಾಗದಲ್ಲಿ ರುವ ಈ ಪ್ರತಿಷ್ಠಿತ ರಸ್ತೆ ಅಭಿವೃದ್ಧಿ ಅಗತ್ಯ ವಾಗಿದೆ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು. ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‍ಗಳಾದ ನಾಗರಾಜ್, ಸಿದ್ದರಾಜು, ಬಿಜೆಪಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರ್ ರಾಜು, ಪ್ರಧಾನ ಕಾರ್ಯದರ್ಶಿ ಪುನೀತ್, ದಿನೇಶ್ ಗೌಡ, ಹರ್ಷ, ಪರಮೇಶ್ ಗೌಡ, ವಿಘ್ನೇಶ್ವರ ಭಟ್, ಮೈಪು ರಾಜೇಶ್, ವಾರ್ಡ್ ಅಧ್ಯಕ್ಷ ರಾದ ಸುರೇಂದ್ರ, ಕಾರ್ಯದರ್ಶಿಯವರಾದ ಶ್ರೀನಿವಾಸ್, ರಾಜೇಂದ್ರ, ಮುರುಗೇಶ್, ಗೋಪಾಲಕೃಷ್ಣ, ಸುದರ್ಶನ್, ಸಚಿನ್. ಡಿ. ದೇವರಾಜ ಅರಸು ರಸ್ತೆ ಟ್ರೇಡರ್ಸ್ ಅಸೋಸಿ ಯೇಷನ್ ವೀರಭದ್ರಪ್ಪ, ಖಾಜ, ಮಹೇಂದ್ರ, ಅಬ್ದುಲ್ ಖಾದೀರ್ ಮತ್ತಿತರರಿದ್ದರು.

Translate »