ಮಾಂಸ ತಿಂದು ದೇವಾಲಯಕ್ಕೆ ಪ್ರವೇಶ: ಸಿ.ಟಿ.ರವಿ ಅನಾಚಾರ ಬಯಲು
ಮೈಸೂರು

ಮಾಂಸ ತಿಂದು ದೇವಾಲಯಕ್ಕೆ ಪ್ರವೇಶ: ಸಿ.ಟಿ.ರವಿ ಅನಾಚಾರ ಬಯಲು

February 24, 2023

ಮೈಸೂರು, ಫೆ.23(ಎಂಟಿವೈ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ದೇವಾಲಯಕ್ಕೆ ಹೋಗಿ ದ್ದರು ಎಂದು ಆರೋಪಿಸಿ ಹಾದಿ ಬೀದಿ ಯಲ್ಲಿ ಕೂಗಾಡಿದ್ದ ಶಾಸಕ ಸಿ.ಟಿ.ರವಿ, ಈಗ ಮಾಂಸ ಸೇವಿಸಿ ಎರಡು ದೇವಾ ಲಯಕ್ಕೆ ಹೋಗಿ ತಮ್ಮ ಅನಾಚಾರ ಪ್ರದರ್ಶಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಯಲ್ಲಿ ಮಾತನಾಡಿದ ಅವರು, ಶಾಸಕ ಸಿ.ಟಿ.ರವಿ ಈ ಹಿಂದಿನಿಂದಲೂ ಅನಾಚಾರಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಅಸಂಬದ್ಧ ಮಾತು, ನಡವಳಿಕೆ ಮೂಲಕವೇ ಕುಖ್ಯಾತಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನು ತಿಂದು ದೇವಾಲಯಕ್ಕೆ ಹೋಗಿದ್ದರು ಎಂದು ಇದೇ ಸಿ.ಟಿ.ರವಿ ಹಾದಿ-ಬೀದಿಯಲ್ಲಿ ನಿಂತು ಕೂಗಾಡಿ ದ್ದರು. ಇಂದು ಅವರೇ, ಮಾಂಸಾಹಾರ ಸೇವಿಸಿ, ರಾಜಾಂಗಣ ನಾಗಬನ ಹಾಗೂ ಕರಿಬಂಟ ದೇವಸ್ಥಾನಕ್ಕೆ ಭೇಟಿ ನೀಡಿ ದ್ದಾರೆ. ಬಿಜೆಪಿ ಕಾರ್ಯಕರ್ತರು ಮಾಡಿ ರುವ ವಿಡಿಯೋ ದೃಶ್ಯದಿಂದಲೇ ಇದು ಬಯಲಾಗಿದೆ. ಆದರು ಕಿಂಚಿತ್ತೂ ಆತ್ಮಸಾಕ್ಷಿ ಇಲ್ಲದವರಂತೆ ದೇವಾಲಯಕ್ಕೆ ಹೋಗಿಯೇ ಇಲ್ಲ ಎಂದು ವಾದ ಮಾಡುವ ಮೂಲಕ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಷಯದಲ್ಲಿ ಬಿಜೆಪಿ ಹಾಗೂ ಆರ್‍ಎಸ್‍ಎಸ್ ಮುಖಂಡರ ಮೌನ ಅವರ ಇಬ್ಬಂದಿ ನೀತಿಯನ್ನು ತೋರ್ಪ ಡಿಸುತ್ತದೆ. ಇನ್ನಾದರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಭಟ್ಕಳದ ಬಿಜೆಪಿ ಶಾಸಕ ಸುನೀಲ್ ನಾಯಕ್ ಮನೆಯಲ್ಲಿ ಚಿಕನ್, ಮೀನು ಸೇವಿಸಿ ಅಲ್ಲಿಂದ ಸ್ಥಳೀಯ ದೇವಾ ಲಯಕ್ಕೆ ಹೋಗಿದ್ದಾರೆಂಬ ಮಾಹಿತಿ ಇದೆ ಎಂದು ಆರೋಪಿಸಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. 2023ರ ಚುನಾವಣೆ ನಂತರ ಸಿ.ಟಿ.ರವಿ ಮಾಜಿ ಶಾಸಕನಾಗಿ ಮನೆ ಸೇರಲಿದ್ದಾರೆ. ಅಲ್ಲದೇ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಎಂದು ಅಭಿಪ್ರಾಯಪಟ್ಟಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ವ್ಯಂಗ್ಯ ವಾಡಿದ್ದ ಸಿ.ಟಿ.ರವಿ ಅವರಿಗೆ ಅಲ್ಲಿನ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸರ್ಕಾರದ ಅಸಹಾಯಕತೆ: ರಾಜ್ಯದಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳ ಜಗಳ ರಾಜ್ಯದ ಜನತೆಗೆ ಮನರಂಜನೆಯಂತೆ ಕಾಣುತ್ತಿದೆ. ದೇಶದಲ್ಲಿ ರಾಜ್ಯದ ಮಾನ ಮರ್ಯಾದೆಯನ್ನು ಈ ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇಲ್ಲ ಎಂಬುದು ಸಾಬೀತಾಗಿದೆ. ಈ ವಿಚಾರದಲ್ಲಿ ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅವರನ್ನು ಕಂಟ್ರೋಲ್ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ಸೋತಿರುವುದನ್ನು ನೋಡಿದರೆ ರಾಜ್ಯ ದಲ್ಲಿ ಅಸಮರ್ಥ ಮುಖ್ಯಮಂತ್ರಿ ಆಡಳಿತ ನಡೆಸುತ್ತಿದ್ದಾರೆ ಎಂದು ಭಾಸವಾಗುತ್ತಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಈ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಪತ್ರ ಬರೆದಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ ಎಂದು ಟೀಕಿಸಿದರು.

ರೌಡಿಶೀಟರ್‍ಗಳಿಗೆ ಟಿಕೆಟ್: ಮುಂಬ ರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಸೈಲೆಂಟ್ ಸುನೀಲ್, ಬೆತ್ತನಗೆರೆ ಶಂಕರ, ಸ್ಯಾಂಟ್ರೊ ರವಿ, ಸೈಕಲ್ ರವಿ, ಪೈಟರ್ ರವಿ ಸೇರಿದಂತೆ 10 ರೌಡಿಶೀಟರ್‍ಗಳಿಗೆ ಟಿಕೆಟ್ ನೀಡು ತ್ತಿದೆ. 60 ಮಂದಿಗೆ ಬಿಬಿಎಂಪಿ ಟಿಕೆಟ್ ನೀಡಲಾಗುತ್ತಿದೆ. ಅಲ್ಲದೇ ವಿಧಾನಸಭಾ ಅಧಿವೇಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೆಲವು ರೌಡಿಗಳನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ. ಕೆಲವು ಕಡೆ ಕಾಂಗ್ರೆಸ್ ಅಭÀ್ಯರ್ಥಿಗಳಿಗೆ ರೌಡಿ ಶೀಟರ್‍ಗಳಿಂದ ಬೆದರಿಕೆ ಹಾಕಿಸಲಾಗುತ್ತಿದೆ. ಇದು ಬಿಜೆಪಿಯ ರೌಡಿ ಮೋರ್ಚಾ, ಗೂಂಡಾ ಮೋರ್ಚಾ ಕಾಂಗ್ರೆಸ್ ಅವರನ್ನು ಹೆದರಿಸಲು ಇವರೆಲ್ಲರೂ ತಯಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಫೆ.25ರಿಂದ ನನ್ನನ್ನು ಹತ್ಯೆ ಮಾಡಿ ಅಭಿ ಯಾನ: ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಸಾರ್ವಜನಿಕ ಸಭೆಯೊಂದ ರಲ್ಲಿ ಸಚಿವ ಅಶ್ವತ್ಥ್ ನಾರಾಯಣ ಅವರು ಟಿಪ್ಪುವನ್ನು ಹೊಡೆದು ಹಾಕಿದ ರೀತಿ ಯಲ್ಲಿ ಸಿದ್ದರಾಮಯ್ಯರ ಹೊಡೆದುಹಾಕ ಬೇಕು ಎಂದು ನೀಡಿರುವ ಪ್ರಚೋದನ ಕಾರಿ ಹೇಳಿಕೆ ವಿರುದ್ಧ ಫೆ.25ರಂದು ಮೈಸೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಂದ ನನ್ನನ್ನು ಹತ್ಯೆ ಮಾಡಿ ಎಂಬ ಅಭಿಯಾನ ವನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ಕೋಟೆ ಆಂಜನೇಯ ದೇವಾಲಯದ ಮುಂಭಾಗದಿಂದ ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ರಾಷ್ಟ್ರಪತಿ, ರಾಜ್ಯಪಾಲ ಹಾಗೂ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಾ ಧೀಶರಿಗೆ ದೂರು ಸಲ್ಲಿಸಲಾಗುತ್ತದೆ. ಸಚಿವರು ತಮ್ಮ ಹೇಳಿಕೆಗೆ ಕೈಬರಹದ ಮೂಲಕ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಶಿವಣ್ಣ, ಮಾಧÀ್ಯಮ ಸಂಚಾಲಕ ಮಹೇಶ್ ಹಾಗೂ ಇನ್ನಿತರರು ಇದ್ದರು.

Translate »