ಗುತ್ತಿಗೆದಾರರಿಗೆ ವಿವಿಧ ಕಾಮಗಾರಿ ಬಿಲ್ ಹಣ ಪಾವತಿಸದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಿ
ಮೈಸೂರು

ಗುತ್ತಿಗೆದಾರರಿಗೆ ವಿವಿಧ ಕಾಮಗಾರಿ ಬಿಲ್ ಹಣ ಪಾವತಿಸದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಿ

February 24, 2023

ಮೈಸೂರು, ಫೆ.23(ಆರ್‍ಕೆ)-ಶಾಲಾ ಕೊಠಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿ ಕೈಗೊಂಡ ಗುತ್ತಿಗೆದಾರರ ಬಿಲ್ ಪಾವತಿ ಸದೆ ವಿಳಂಬ ಮಾಡುತ್ತಿರುವ ಅಧಿಕಾರಿ ಗಳಿಗೆ ಶೋಕಾಸ್ ನೋಟೀಸ್ ನೀಡಿ, ವಿವರಣೆ ಪಡೆಯುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಜಯರಾಂ ಅವರು ಇಂದಿಲ್ಲಿ ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಓ ಡಾ. ಕೆ.ಎಂ. ಗಾಯತ್ರಿ ಅವರಿಗೆ ನಿರ್ದೇಶನ ನೀಡಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಅಬ್ದುಲ್ ನಜೀರ್ ಸಾಬ್ ಸಭಾಂಗಣ ದಲ್ಲಿ ಇಂದು ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಿವಿಧ ಅಭಿ ವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡು ಗಡೆಯಾಗಿ ಭೌತಿಕವಾಗಿ ಕೆಲಸ ಮಾಡಿ ದ್ದಾಗ್ಯೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಸದ ಪಂಚಾಯತ್ ರಾಜ್ ಇಂಜಿನಿಯ ರಿಂಗ್ ವಿಭಾಗ (Pಖಇಆ)ದ ಎಗ್ಸಿಕ್ಯುಟಿವ್ ಇಂಜಿನಿಯರ್, ಅಸಿಸ್ಟೆಂಟ್ ಎಗ್ಸಿಕ್ಯುಟಿವ್ ಇಂಜಿನಿಯರ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಇಂದೇ ಶೋಕಾಸ್ ನೋಟೀಸ್ ನೀಡಿ ಎಂದು ತಾಕೀತು ಮಾಡಿದರು.

ಮೈಸೂರು ಜಿಲ್ಲಾ ಪಂಚಾಯ್ತಿ ಪಿಆರ್ ಇಡಿಗೆ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯಿಂದ 4 ಕೋಟಿ ರೂ. ಅನುದಾನ ನೀಡಿದ್ದರೂ ಹಣ ಖರ್ಚು ಮಾಡಿಲ್ಲ. ಪ್ರಸ್ತಾವನೆ ಬಂದ ತಕ್ಷಣ ಎಸ್ಟಿಮೇಟ್ ತಯಾರಿಸಿ ಟೆಂಡರ್ ಕರೆದು ಕಾರ್ಯಾದೇಶ ನೀಡಲು ವಿಳಂಬ ಮಾಡಿದ್ದಲ್ಲದೆ, ಭೌತಿಕವಾಗಿ ಕೆಲಸ ಮಾಡಿ ದ್ದಾಗ್ಯೂ ಗುತ್ತಿಗೆದಾರರಿಗೆ ಹಣ ಪಾವತಿಸದೇ ಅಲೆಸುತ್ತಿರುವುದಕ್ಕೆ ಕಾರಣವೇನು, ನಿಮಗೆ ನೀಡಿದ ಹಣ ಬಳಕೆಯಾಗದಿದ್ದಲ್ಲಿ ಅನು ದಾನ ಮಾರ್ಚ್ ಮುಗಿದ ನಂತರ ಸರ್ಕಾರಕ್ಕೆ ವಾಪಸ್ ಹೋಗುವುದಿಲ್ಲವೆ ಎಂದು ಜಯರಾಂ ಅವರು ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡರು.
ಅದಕ್ಕೆ ಸಮರ್ಪಕ ಉತ್ತರ ನೀಡಲು ತಡಬಡಾಯಿಸಿದ ಇಂಜಿನಿಯರ್‍ಗಳು, ತಾಲೂಕುವಾರು ಅಂಕಿ-ಅಂಶಗಳೊಂದಿಗೆ ಪ್ರಶ್ನೆ ಕೇಳಿದಾಗಲೂ ಅನುದಾನ ಬಳಕೆ ಬಗ್ಗೆ ಸಮರ್ಪಕ ಮಾಹಿತಿ ನೀಡದಿದ್ದ ರಿಂದ ಕಾರಣ ಕೇಳಿ ನೋಟೀಸ್ ಜಾರಿ ಮಾಡಿ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಡಾ. ಕೆ.ಎಂ.ಗಾಯತ್ರಿ ಅವರಿಗೆ ಸೂಚನೆ ನೀಡಿದ ಜಯರಾಂ ಅವರು, ನಾಳೆ (ಫೆ.23) ಸಂಜೆಯೊಳಗಾಗಿ ಬಿಲ್ ಬರೆದು ಗುತ್ತಿಗೆದಾರರಿಗೆ ಬಾಕಿ ಹಣವನ್ನು ಕೆ-2 ಚಲನ್ ಮೂಲಕ ಪಾವತಿಸದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾ ನತುಪಡಿಸುವಂತೆ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡುವಂತೆ ತಾಕೀತು ಮಾಡಿದರಲ್ಲದೆ, ಈಗಲೇ ಪತ್ರ ರೆಡಿ ಮಾಡಿಸಿ ತರಿಸಿ ಎಂದಾಗ ಬೆಚ್ಚಿ ಬಿದ್ದ ಅಧಿಕಾರಿಗಳು, ಹೆಚ್ಚಿನ ವಿವರಣೆ ನೀಡಿ ತುರ್ತು ಪತ್ರ ಬರೆಯುವುದರಿಂದ ಪಾರಾದರು.

ಹೇಳೋರು-ಕೇಳೋರ್ಯಾರೂ ಇಲ್ಲ: ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದಿರುವುದ ರಿಂದ ನಿಮ್ಮ ಇಷ್ಟ ಬಂದಂತೆ ವರ್ತಿಸುತ್ತಿದ್ದೀರಿ. ನಿಮಗೆ ಹೇಳೋರು-ಕೇಳೋರು ಯಾರೂ ಇಲ್ಲ. ಸದಸ್ಯರು, ಸ್ಥಾಯಿ ಸಮಿತಿಗಳಿಲ್ಲದಿರುವುದರಿಂದ ಅಧಿಕಾರ ಹಾಗೂ ಸಮಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ. ಸರ್ಕಾರ ಮುಕ್ತ ಅವಕಾಶ ನೀಡಿರುವು ದನ್ನು ಬಳಸದೇ ನಿರ್ಲಕ್ಷ್ಯದಿಂದ ಕೈಚೆಲ್ಲಿ ಕುಳಿತಿದ್ದೀರಾ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳು ಜಢತ್ವ ಬೆಳೆಸಿಕೊಂಡಿ ದ್ದಾರೆ. ಚುನಾಯಿತ ಪ್ರತಿನಿಧಿಗಳಿದ್ದಾಗ ಆಗಿಂದಾಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದರು. ಈಗ ನಿಮ್ಮ ಇಷ್ಟ ಬಂದ ಹಾಗೆ ಕಾಲ ಕಳೆಯುತ್ತಿದ್ದೀರಿ ಎಂದ ಜಯರಾಂ, ರಾಜ್ಯ ಮತ್ತು ಕೇಂದ್ರ ವಲಯ ದಿಂದ ಬಿಡುಗಡೆಯಾದ ಅನುದಾನವನ್ನು ಮಾರ್ಚ್ ತಿಂಗಳೊಳಗಾಗಿ ಖರ್ಚು ಮಾಡದಿ ದ್ದಲ್ಲಿ ಹಣ ವಾಪಸ್ಸಾಗುತ್ತದೆ. ಮಾರ್ಚ್ ಅಂತ್ಯಕ್ಕೆ 34 ದಿನ ಉಳಿದಿದ್ದು, ಅಲ್ಲಿಯ ವರೆಗೆ ಶೇ.100ರಷ್ಟು ಅನುದಾನ ಬಳಸಿ ಸಮರೋಪಾದಿಯಲ್ಲಿ ಕೆಲಸ ಮಾಡಿಸಿ ಆರ್ಥಿಕ ಪ್ರಗತಿ ಸಾಧಿಸಬೇಕೆಂದು ತಾಕೀತು ಮಾಡಿದರು. ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಉಪ ಅರಣ್ಯ ಸಂರಕ್ಷಣಾಧಿ ಕಾರಿ ಕೆ.ಎನ್.ಬಸವರಾಜು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಗಳು ಕೆಡಿಪಿ ಸಭೆಯಲ್ಲಿ ಹಾಜರಿದ್ದರು.

Translate »