ಕನಕಪುರದಲ್ಲಿ ಸಹೋದರ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ
News

ಕನಕಪುರದಲ್ಲಿ ಸಹೋದರ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ

April 21, 2023

ಬೆಂಗಳೂರು, ಏ.20(ಕೆಎಂಶಿ)- ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಕೊನೆ ಗಳಿಗೆಯಲ್ಲಿ ತಮ್ಮ ಸಹೋದರ ಸಂಸದ ಡಿ.ಕೆ.ಸುರೇಶ್ ಅವರನ್ನು ಕನಕಪುರ ವಿಧಾನಸಭಾ ಕ್ಷೇತ್ರ ದಿಂದ ಕಣಕ್ಕಿಳಿಸಿ, ರಾಜಕೀಯ ವಲಯ ದಲ್ಲಿ ದಿಗ್ಭ್ರಮೆ ಮೂಡಿಸಿದ್ದಾರೆ.

ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯ ಮಂತ್ರಿ ಸ್ಥಾನ ಏರಲು ಮುಂಚೂಣಿ ಯಲ್ಲಿರುವ ಶಿವಕುಮಾರ್ ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಇಂದು ತನ್ನ ಸಹೋದರನಿಂದ ಮೂರು ನಾಮ ಪತ್ರಗಳನ್ನು ಸಲ್ಲಿಕೆ ಮಾಡಿಸಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್ ಸ್ಪರ್ಧಿಸಿರುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ಸುರೇಶ್ ಅವರನ್ನು ಕಣಕ್ಕಿಳಿ ಸುವ ಬಗ್ಗೆ ಚಿಂತನೆ ನಡೆಸಿದ್ದ ಶಿವಕುಮಾರ್ ಕಡೇ ಗಳಿಗೆಯಲ್ಲಿ ಈ ನಿರ್ಧಾರ ಕೈಗೊಂಡಿ ದ್ದಾರೆ. ಏಪ್ರಿಲ್ 17ರಂದು ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರ ದಿಂದ ನಾಮಪತ್ರ ಸಲ್ಲಿಸಿದ್ದರು. ಅದರೆ ಅವರ ನಾಮಪತ್ರ ತಿರಸ್ಕೃತಗೊಳ್ಳುವ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಇಂತಹ ತೀರ್ಮಾನ ಕೈಗೊಂಡರು ಎನ್ನಲಾಗಿದೆ. ಶಿವಕುಮಾರ್ ಸಲ್ಲಿಸಿರುವ ನಾಮಪತ್ರದಲ್ಲಿ ಕೆಲವು ಕಾನೂನು ಲೋಪಗಳಿರುವುದನ್ನು ಬಿಜೆಪಿ ಪತ್ತೆ ಹಚ್ಚಿದೆ. ಅವರ ಅರ್ಜಿಯ ಬಗ್ಗೆ ಪಕ್ಷದ ಕೇಂದ್ರೀಯ ಕಾನೂನು ಘಟಕವೇ ಪರಿಶೀಲನೆಗೆ ತೆಗೆದುಕೊಂಡಿದೆ. ಶಿವಕುಮಾರ್ ಸಲ್ಲಿಸಿರುವ ನಾಮಪತ್ರದಲ್ಲಿ ವಿಶೇಷವಾಗಿ ಆಸ್ತಿ ವಿವರ ಹಾಗೂ ತಮ್ಮ ಮೇಲಿರುವ ಮೊಕದ್ದಮೆಗಳಿಗೆ ಸಂಬಂಧಿ ಸಿದಂತೆ ಸಮಸ್ಯೆ ಉದ್ಭವವಾಗಬಹುದೆಂದು ಕಾನೂನು ತಜ್ಞರು ಅವರ ಗಮನಕ್ಕೆ ತಂದಿದ್ದಾರೆ. ನಂತರ ತಮ್ಮ ಅರ್ಜಿಗೆ ಸಂಬಂಧಿಸಿದಂತೆ ಆಪ್ತರು ಹಾಗೂ ಕಾನೂನು ತಜ್ಞರೊಟ್ಟಿಗೆ ಚರ್ಚೆ ನಡೆಸಿ, ಅವರ ಸಲಹೆ ಮೇರೆಗೆ ಸುರೇಶ್ ಅವರನ್ನು ಕಣಕ್ಕಿಳಿ ಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿಪಾಸ್ತಿ ಹೊಂದಿರುವ ಬಗ್ಗೆ ಐಟಿ, ಇಡಿ, ಹಾಗೂ ಸಿಬಿಐ ಪ್ರತ್ಯೇಕವಾಗಿ ತನಿಖೆ ನಡೆಸಿ, ಕೆಲವು ಪ್ರಕರಣಗಳು ನ್ಯಾಯಾ ಲಯದ ಮೆಟ್ಟಲು ಹತ್ತಿದರೆ, ಮತ್ತೆ ಕೆಲವು ಪ್ರಕರಣಗಳು ತನಿಖಾ ಹಂತದಲ್ಲಿವೆ.

ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಶಿವಕುಮಾರ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನೀಡಿಲ್ಲ. ಆದರೆ ಅವರ ಆದಾಯ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಕೇಂದ್ರದ ಮೂರು ತನಿಖಾ ಸಂಸ್ಥೆಗಳ ಮುಂದೆ ದಾಖಲೆಗಳಿವೆ.

ಸಂಸ್ಥೆಗಳಲ್ಲಿರುವ ದಾಖಲೆ ಹಾಗೂ ಶಿವಕುಮಾರ್ ಸಲ್ಲಿಸಿರುವ ಅರ್ಜಿಯಲ್ಲಿ ವ್ಯತ್ಯಾಸಗಳು ಕಂಡು ಬಂದರೆ ಶಿವಕುಮಾರ್ ಅರ್ಜಿ ವಜಾಗೊಳ್ಳಲಿದೆ. ಶಿವಕುಮಾರ್ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿಯ ಆರ್. ಅಶೋಕ್ ಮೇಲುಗೈ ಸಾಧಿಸಬಹುದು. ಇದನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ಸಹೋದರನಿಂದ ನಾಮಪತ್ರ ಸಲ್ಲಿಸಿದ್ದಾರೆ.

Translate »