ಮೈಸೂರು, ಚಾಮರಾಜನಗರದಲ್ಲಿ ಪ್ರಧಾನಿ ಮೋದಿ ಪ್ರಚಾರ
ಮೈಸೂರು

ಮೈಸೂರು, ಚಾಮರಾಜನಗರದಲ್ಲಿ ಪ್ರಧಾನಿ ಮೋದಿ ಪ್ರಚಾರ

April 21, 2023

ಮೈಸೂರು, ಏ.20 (ಎಂಟಿವೈ)- ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗ ಮಿಸಲಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.
ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಬಿಜೆಪಿಯಲ್ಲಿ ಸ್ಟಾರ್ ಪ್ರಚಾರಕರ ಕೊರತೆಯಿಲ್ಲ. ರಾಜ್ಯದಲ್ಲಿ ನಡೆ ಯುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಸ್ಟಾರ್ ಪ್ರಚಾ ರಕರು ಕಣಕ್ಕಿಳಿಯಲಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಅನೇಕ ಸ್ಟಾರ್ ಪ್ರಚಾರ ಕರು ಪ್ರಚಾರ ನಡೆಸ ಲಿದ್ದಾರೆ. ಮೈಸೂರಲ್ಲಿ ಮೋದಿ ಅವರ ರೋಡ್ ಶೋ ನಡೆಸಲು ನಿರ್ಧ ರಿಸಲಾಗಿದೆ. ಚಾಮರಾಜ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳ ಲಿದ್ದಾರೆ. ಕಾರ್ಯಕ್ರಮದ ದಿನಾಂಕ ಶೀಘ್ರ ದಲ್ಲೇ ನಿಗದಿಯಾಗಲಿದೆ ಎಂದರು.

ಕಾಂಗ್ರೆಸ್‍ನಿಂದಲೇ ಮ್ಯಾಚ್ ಫಿಕ್ಸಿಂಗ್: ವರುಣ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ ಸಿಂಹ, 2018ರ ಚುನಾವಣೆಯಲ್ಲಿ ಜನ ಬಿಜೆಪಿಗೆ 104 ಸ್ಥಾನ ನೀಡಿದ್ದಾಗ ಜನಾದೇಶಕ್ಕೆ ವಿರುದ್ಧವಾಗಿ ಜೆಡಿಎಸ್ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿದ್ದು ಯಾರು ಎಂದು ಜನರಿಗೆ ತಿಳಿದಿದೆ. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾರ ಜತೆ ಸಿದ್ದರಾಮಯ್ಯ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆಂಬುದು ಗೊತ್ತಿದೆ. ಮುಖ್ಯಮಂತ್ರಿಯಾಗಿದ್ದಾಗಲೇ 36 ಸಾವಿರ ಮತಗಳಿಂದ ಸೋತಿದ್ದೀರಿ. ಸೋಲಿನ ಭಯದಿಂದ ಇಂತಹ ಮಾತುಗಳನ್ನು ಆಡುತ್ತಿದ್ದಿರಿ. ಮೇ 13ರ ಫಲಿತಾಂಶ ಬರಲಿ ತಾಯಿ ಚಾಮುಂಡೇಶ್ವರಿ ಹಾಗೂ ವರುಣ ಜನರ ಆಶೀರ್ವಾದ ಯಾರ ಮೇಲಿದೆ ಎಂಬುದು ತಿಳಿಯಲಿದೆ ಎಂದು ಕಿಡಿಕಾರಿದರು. ನಾವು ವರುಣ ಕ್ಷೇತ್ರಕ್ಕೆ ಹೋದ ನಂತರ ಬಹಳ ದೊಡ್ಡ ಅಂತರದಿಂದ ಗೆಲ್ಲುತ್ತೇವೆಂಬ ವಿಶ್ವಾಸ ಹೆಚ್ಚಾಗಿದೆ. ಒಳಮೀಸಲು ಹೆಚ್ಚಳ, ವಾಲ್ಮೀಕಿ ಸಮುದಾಯದ ಮೀಸಲು ಹೆಚ್ಚಳ ನಮ್ಮ ಕೈ ಹಿಡಿಯುವ ವಿಶ್ವಾಸವಿದೆ. ಮುಸ್ಲಿಂ ಸಮುದಾಯಕ್ಕೆ ಮೀಸಲು ಕೊಡುವ ಬಗ್ಗೆ ಕಾಂಗ್ರೆಸ್ ಹೇಳಿದ್ದು, ಯಾವ ಸಮುದಾಯದಿಂದ ಕಿತ್ತು ಕೊಡುತ್ತಾರೆಂಬ ಪ್ರಶ್ನೆ ಎಲ್ಲ ಸಮುದಾಯದಲ್ಲಿಯೂ ಇದೆ. ಹೀಗಾಗಿ ಕಾಂಗ್ರೆಸ್ ಇರುವುದು ಮುಸ್ಲಿಮರ ಓಲೈಕೆಗೆ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಸೋಲಿನ ಭಯ: ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದಿರುವ ಸಿದ್ದರಾಮಯ್ಯ ಈ ಬಾರಿ ಸೋಲುವುದು ಖಚಿತ. ಸೋಲಿನ ಭಯದಿಂದ ಅಪ್ರಾಪ್ತ ಮೊಮ್ಮಗನನ್ನು ಕರೆತಂದು ಪ್ರಚಾರ ಮಾಡುತ್ತಿದ್ದಾರೆ. ಮತದಾನದ ಹಕ್ಕೇ ಬಂದಿಲ್ಲದ 17 ವರ್ಷದ ಮೊಮ್ಮಗನನ್ನು ಕರೆದುಕೊಂಡು ಹೋಗಿ ಚಾಮುಂಡೇಶ್ವರಿಗೆ ಪೂಜೆ ಮಾಡಿ ಭಾವನಾತ್ಮಕವಾಗಿ ಜನರ ಬಳಿ ಮತ ಕೇಳಲು ಹೊರಟಿದ್ದೀರಿ. ನಿಮ್ಮೊಳಗೆ ಭಯ ಕಾಡುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ಎಂದರು.

ಸೋಮಣ್ಣ 2019ರಲ್ಲಿ ದಸರಾ ಮಾಡಲು ಉಸ್ತುವಾರಿಯಾಗಿ ಬಂದ ಕೂಡಲೇ ಬೆಟ್ಟವನ್ನು ಸ್ವಚ್ಛಗೊಳಿಸಿದರು. ರಿಂಗ್ ರಸ್ತೆ ದೀಪ ವ್ಯವಸ್ಥೆ ಮಾಡಿದರು. ರಿಂಗ್ ರಸ್ತೆ ಕಸ ಎತ್ತಿಸಿದರು. ವಿದ್ಯಾರಣ್ಯಪುರಂನ ಕಸ ಸಮಸ್ಯೆಗೂ ಮುಕ್ತಿ ಹಾಡಿದ್ದಾರೆ. ವರುಣದಲ್ಲಿ ಗೆದ್ದ ಬಳಿಕ ಅಭಿವೃದ್ಧಿ ಮಾಡಲಿದ್ದಾರೆ. 15 ವರ್ಷ ಸಿದ್ದರಾಮಯ್ಯ, ಮಗ ಏನೂ ಮಾಡಿಲ್ಲ ಎಂಬುದು ಗೊತ್ತಾಗಿಯೇ ಬಿಜೆಪಿ ಕಣಕ್ಕಿಳಿದಿದೆ. ವರುಣ ಪೂರ್ಣಪ್ರಮಾಣದ ತಾಲೂಕು ಆಗಬೇಕು. ಅಭಿವೃದ್ಧಿ ಮಾಡುವುದಕ್ಕೆ ಸೂಕ್ತ ವ್ಯಕ್ತಿ ಎಂಬುದಕ್ಕೆ ಸೋಮಣ್ಣರನ್ನು ಕಣಕ್ಕಿಳಿಸಲಾಗಿದೆ ಎಂದು ಸಂಸದರು ಹೇಳಿದರು.

Translate »