ಸಾ.ರಾ.ಮಹೇಶ್ ನಾಮಪತ್ರ ಸಲ್ಲಿಕೆ
ಮೈಸೂರು

ಸಾ.ರಾ.ಮಹೇಶ್ ನಾಮಪತ್ರ ಸಲ್ಲಿಕೆ

April 21, 2023

ಕೆ.ಆರ್.ನಗರ, ಏ.20- ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಶಾಸಕ ಸಾ.ರಾ.ಮಹೇಶ್ ಸಾವಿರಾರು ಮುಖಂಡರು, ಕಾರ್ಯಕರ್ತರು, ಅಭಿ ಮಾನಿಗಳು ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ಚುನಾವಣಾ ಧಿಕಾರಿ ಸುಪ್ರಿಯಾ ಬಣಗಾರ್ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಪತ್ನಿ ಅನಿತಾ ಮಹೇಶ್, ಪುತ್ರರಾದ ಡಾ.ಧನುಷ್, ಜಯಂತ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಪಕ್ಷದ ಮುಖಂಡರಾದ ಅಚ್ಯುತಾನಂದ್, ಚಂದ್ರ ಶೇಖರ್, ಡಾ.ಮೆಹಬೂಬ್ ಖಾನ್, ಎಂ.ಟಿ. ಕುಮಾರ್, ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಹಂಪಾಪುರ ಕುಮಾರ್, ದಲಿತ ಮುಖಂಡ ಹನ ಸೋಗೆ ನಾಗರಾಜ್ ಅವರುಗಳು ಸಾಥ್ ನೀಡಿದರು.

ಬೆಳಗ್ಗೆ ನಾಡದೇವತೆ ಶ್ರೀಚಾಮುಂಡೇಶ್ವರಿಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ತೆರಳಿ ಪೂಜೆ ಸಲ್ಲಿಸಿದ ಸಾ.ರಾ.ಮಹೇಶ್, ನಂತರ ಚುಂಚನಕಟ್ಟೆ ಶ್ರೀರಾಮ ದೇವಸ್ಥಾನ ಹಾಗೂ ಶ್ರೀವೀರಾಂಜನೇಯಸ್ವಾಮಿಗೆ ಕೈ ಮುಗಿದು ಮಾಲಾರ್ಪಣೆ ಮಾಡಿ, ಸ್ವಗ್ರಾಮ ಸಾಲಿ ಗ್ರಾಮದ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ಅರ್ಚನೆ ಮಾಡಿಸಿದ ಬಳಿಕ ತಂದೆ ತಾಯಿ ಆಶೀರ್ವಾದ ಪಡೆದು ಕೆ.ಆರ್.ನಗರದ ಶ್ರೀತೋಪಮ್ಮನವರ ದೇವಸ್ಥಾನದಲ್ಲಿ ಕಾರ್ಯಕರ್ತರು ಏರ್ಪಡಿಸಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ಹರಿದುಬಂದ ಜನಸಾಗರ: ಪೂಜೆ ಸಲ್ಲಿಸಿದ ಬಳಿಕ ಶಾಸಕ ಸಾ.ರಾ.ಮಹೇಶ್ ತೆರೆದ ವಾಹನದಲ್ಲಿ ಸಾವಿ ರಾರು ಜೆಡಿಎಸ್ ಮುಖಂಡರು, ಕಾರ್ಯಕರ್ತ ರೊಂದಿಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿದರು. ಈ ವೇಳೆ ಗರುಡಗಂಭ ವೃತ್ತದಲ್ಲಿ ಕಾರ್ಯಕರ್ತರು ಭಾರೀ ಗಾತ್ರದ ಮಲ್ಲಿಗೆ ಹಾರ ಹಾಕಿ ಸಾ.ರಾ.ಮಹೇಶ್, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಜೈಕಾರ ಕೂಗಿದರು. ಬಳಿಕ ಸಾ.ರಾ.ಮಹೇಶ್ ಡಾ.ಬಿ.ಆರ್.ಅಂಬೇ ಡ್ಕರ್ ಪುತ್ಥಳಿ, ಗರುಡಗಂಭ ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಹಾಗೂ ಪುರಸಭೆ ವೃತ್ತದಲ್ಲಿರುವ ಬಾಬು ಜಗಜೀವನ್ ರಾಂ ಪುತ್ಥಳಿಗೆ ಹಾಗೂ ತಾಲೂಕು ಆಡಳಿತ ಸೌಧÀದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ನಾಮಪತ್ರ ಸಲ್ಲಿಸಿದರು. ಶಾಸಕ ಸಾ.ರಾ.ಮಹೇಶ್ ಮಾತನಾಡಿ, ಎರಡೂ ರಾಷ್ಟೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಮನಗಂಡ ರಾಜ್ಯದ ಪ್ರಭಾವಿ ರಾಜಕಾರಣಿಗಳು ಜೆಡಿಎಸ್ ಸೇರುತ್ತಿದ್ದು, 2023ರ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ನೂರಕ್ಕೆ ನೂರರಷ್ಟು ಸತ್ಯ ಎಂದರು.
ನಮ್ಮ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ನುಡಿದಂತೆ ನಡೆಯುವ, ಕೊಟ್ಟ ಭರವಸೆ ಈಡೇರಿ ಸುವ ನಾಯಕ. ನಮ್ಮ ಪಕ್ಷದ ಎಲ್ಲಾ ಕಾರ್ಯಕ್ರಮ ಗಳಿಗೂ ಜನಸಾಗರ ಹರಿದು ಬರುತ್ತಿರುವುದನ್ನು ನೋಡಿ ಜೆಡಿಎಸ್ ಅನ್ನು ಹಗುರವಾಗಿ ಕಾಣುತ್ತಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರಿಗೆ ನಡುಕ ಉಂಟಾಗಿದೆ ಎಂದರು. ನಾನು ಇದು 5ನೇ ಬಾರಿಗೆ ಸಲ್ಲಿಸುತ್ತಿರುವ ನಾಮಪತ್ರವಾಗಿದ್ದು, 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿ ಕ್ಷೇತ್ರದ ಜನತೆ ಅತ್ಯಧಿಕ ಮತಗಳಿಂದ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅನುಕಂಪ ಅಥವಾ ಅಭಿವೃದ್ಧಿ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಸಾ.ರಾ.ಮಹೇಶ್ ಅವರು ಅನುಕಂಪ ಇರುವುದು ನಂಜನಗೂಡಿನ ದರ್ಶನ್ ಧ್ರುವನಾರಾಯಣ್ ಅವರಿಗೆ ಆ ಕಾರಣದಿಂದ ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಪಕ್ಷದ ಅಭ್ಯರ್ಥಿ ಹಾಕಿಲ್ಲ ಎಂದು ತಿಳಿಸಿದರು.

ನನ್ನ ಮೂರು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದಾರೆ ಹದಿನೈದು ವರ್ಷಗಳಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಸಾವಿರ ಕೋಟಿಗೂ ಹೆಚ್ಚು ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಶಾಸಕ ಸಾ.ರಾ.ಮಹೇಶ್ ಅಣ್ಣನವರ ಜನಸೇವೆಯನ್ನು ಎಲ್ಲರೂ ಮೆಚ್ಚಬೇಕು. ಇಂದು ಇಲ್ಲಿ ಜಮಾಯಿಸಿರುವ ಜನಸ್ತೋಮ ನೋಡಿದರೆ 25 ಸಾವಿರ ಅಂತರದಲ್ಲಿ ಸಾ.ರಾ.ಮಹೇಶ್ ಅಣ್ಣ ಗೆಲುವು ಸಾಧಿಸಲಿದ್ದಾರೆ ಎಂದು ನುಡಿದರು.

ಜಿಪಂ ಮಾಜಿ ಸದಸ್ಯ ಅಚ್ಯುತಾನಂದ ಮಾತನಾಡಿ, ಶಾಸಕ ಸಾ.ರಾ.ಮಹೇಶ್ ಅವರ ಅಭಿವೃದ್ಧಿ ಕಾರ್ಯ ಒಂದು ಕಡೆಯಾದರೇ, ನೊಂದವರ ಧ್ವನಿಯಾಗಿ ನಿಂತು ಎಲ್ಲಾ ರೀತಿಯ ನೆರವು ನೀಡಿದಕ್ಕೆ ಸಾವಿರಾರು ಜನರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಿದ್ದಾರೆ. ಶಾಸಕ ಸಾ.ರಾ.ಮಹೇಶ್ ಅವರು 4ನೇ ಬಾರಿಗೆ ಶಾಸಕರಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಚನ್ನಬಸಪ್ಪ, ಮಾಜಿ ಸದಸ್ಯ ದ್ವಾರಕೀಶ್, ಎಂ.ಟಿ.ಕುಮಾರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಅಣ್ಣೇಗೌಡ, ಮುಡಾ ಮಾಜಿ ಅಧ್ಯಕ್ಷ ವಿಜಯ್, ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಕುಮಾರ್, ರಾಜಣ್ಣ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಜೆಡಿಎಸ್ ಮುಖಂಡರಾದ ಡಾ.ಮೆಹಬೂಬ್ ಖಾನ್, ತಾ.ಯುವ ಜೆಡಿಎಸ್ ಅಧ್ಯಕ್ಷ ಡಿ.ಎಸ್.ಯೋಗೇಶ್, ಜೆಡಿಎಸ್ ಗ್ರಾಮಾಂತರ ಉಪಾಧ್ಯಕ್ಷ ಕುಚೇಲ, ತಾ ಜೆಡಿಎಸ್ ಉಪಾಧ್ಯಕ್ಷ ಡೈರಿ ಪ್ರಕಾಶ್, ಸಾಲಿಗ್ರಾಮ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಶೀರ್, ನಗರ ಅಧ್ಯಕ್ಷ ಸಂತೋಷ್‍ಗೌಡ, ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ಉಮೇಶ್, ಕೆ.ಪಿ.ಪ್ರಭು ಶಂಕರ್, ಮಾಜಿ ಅಧ್ಯಕ್ಷ ಡಿ.ಕಾಂತರಾಜು, ತಾಪಂ ಮಾಜಿ ಸದಸ್ಯ ತಮ್ಮಣ್ಣ, ರವಿ, ಶ್ರೀನಿವಾಸ್ ಪ್ರಸಾದ್, ನಾಗಣ್ಣ, ದಲಿತ ಮುಖಂಡ ನಾಗರಾಜ್, ಗ್ರಾಪಂ ಅಧ್ಯಕ್ಷರಾದ ಸವಿತಾ, ನಂದಿನಿ, ಜೆಡಿಎಸ್ ಮುಖಂಡರಾದ ಆನಂದ್, ಸಾಗರ್, ರವಿ, ಧನಪಾಲ್, ಡೈರಿ ರಾಜೇಗೌಡ, ಲಾಳಂದೇವನಹಳ್ಳಿ ಗ್ರಾಪಂ ಸದಸ್ಯರಾದ ಬಾಲಾಜಿ ಗಣೇಶ್, ದಾಕ್ಷಾಯಿಣಿ, ವಸಂತ, ಕಿಚ್ಚಸುನೀಲ್, ಮುಖಂಡರಾದ ಶಂಭು, ವಸಂತಣ್ಣ, ಅನೀಫ್ ಗೌಡ, ಕಾಶಿ, ಬಿ.ಕೆ.ಕುಮಾರ್, ಸೋಮು, ತನು, ಸುಹೇಲ್, ಸುಜಯ್, ಹೆಚ್.ಪಿ.ಶಿವಣ್ಣ, ಬಾರ್ ಶಿವಕುಮಾರ್, ಶಿವು, ಕುಚೇಲ, ಎಲ್.ಮಂಜುನಾಥ್, ಕುಳ್ಳಮಂಜಣ್ಣ, ಶ್ರೀಧರ್ ಸೇರಿದಂತೆ ಅನೇಕರು ಇದ್ದರು.

Translate »