ಮೈಸೂರು ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 2,404 ಮಂದಿಗೆ ಮಾತ್ರ ಅಂಚೆ ಮತದಾನ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 2,404 ಮಂದಿಗೆ ಮಾತ್ರ ಅಂಚೆ ಮತದಾನ

April 21, 2023

ಮೈಸೂರು, ಏ.20(ಆರ್‍ಕೆ)- ಭಾರತ ಚುನಾವಣಾ ಆಯೋಗವು ಇದೇ ಪ್ರಥಮ ಬಾರಿ ಹಾಸಿಗೆ ಹಿಡಿದಿರುವ 80 ವರ್ಷ ಮೇಲ್ಪಟ್ಟ ಅತ್ಯಂತ ದುರ್ಬಲ ವಯೋವೃದ್ಧರು ಹಾಗೂ ಮತಗಟ್ಟೆಗೆ ಬರಲಾಗದ ಅಂಗವಿಕಲರಿಗೆ 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಿದೆ.

ರಾಜ್ಯದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಿ ಪ್ರಜಾಪ್ರÀಭುತ್ವದ ಹಬ್ಬವನ್ನು ಚುನಾವಣೆ ಮೂಲಕ ಸಂಭ್ರಮದಿಂದ ಆಚರಿಸುವ ದೃಷ್ಟಿಯಿಂದ ಮತಗಟ್ಟೆಗೆ ಬರಲು ಸಾಧ್ಯ ವಾಗದ 80 ವರ್ಷ ಮೇಲ್ಪಟ್ಟವರಿಗೆ ಮನೆ ಯಿಂದಲೇ ಅಂಚೆ ಮೂಲಕ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸುವ ವ್ಯವಸ್ಥೆ ಕಲ್ಪಿಸಿರುವುದರಿಂದ ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಪಿ. ರಾಜೇಂದ್ರ ಬೂತ್ ಮಟ್ಟದ ಅಧಿಕಾರಿ ಗಳ (ಃಐಔ’S) ಮೂಲಕ ಸಮೀಕ್ಷೆ ನಡೆಸಿ ಜಿಲ್ಲೆಯಲ್ಲಿ 80,994 ಹಿರಿಯರು ಹಾಗೂ 31,304 ಮಂದಿ ಅಂಗವಿಕಲ ರನ್ನು ಗುರುತಿಸಿದ್ದರು. ಅವರನ್ನು ಮನೆ ಮನೆಗೆ ತೆರಳಿ 12-ಡಿ ನಮೂನೆಗೆ ಸಹಿ ಹಾಕಿಸಿಕೊಂಡು ಅಂಚೆ ಮತದಾನಕ್ಕೆ ಮನವಿ ಪತ್ರ ಸ್ವೀಕರಿಸಬೇಕು. ಮೈಸೂರು ಜಿಲ್ಲೆಯಲ್ಲಿರುವ 80,994 ಮಂದಿ ಹಿರಿ ಯರ ಪೈಕಿ 2,404 ಮಂದಿ ಅಂಚೆ ಮತ ದಾನ ಬಯಸಿದ್ದು, ಉಳಿದವರು ನಾವೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿ ಸುತ್ತೇವೆಂದು ಉತ್ಸಾಹ ತೋರಿದ್ದಾರೆ. ಅದೇ ರೀತಿ 31,304 ಅಂಗವಿಕಲರ ಪೈಕಿ ಕೇವಲ 403 ಮಂದಿ ಮನೆಯಿಂದಲೇ ಮತದಾನ ಮಾಡಲು ಆಸಕ್ತಿ ತೋರಿದ್ದಾರೆ.

ಮೈಸೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಅಧಿಕಾರಿ(ಃಐಔ) ಗಳು ಕಳೆದ ಒಂದು ವಾರದಿಂದ ಈ ಪ್ರಕ್ರಿಯೆ ನಡೆಸಿದ್ದಾರೆ. ಅಂಚೆ ಮತದಾನ ಬಯಸಿರುವವರ ಮನೆಗಳಿಗೆ ಮೇ 10 ರಂದು ಖುದ್ದು ಭೇಟಿ ನೀಡಲಿರುವ ಅಧಿಕಾರಿಗಳು ಬ್ಯಾಲೆಟ್ ಪೇಪರ್‍ಕೊಟ್ಟು ಮತ ಹಾಕಿಸಿ ಕೊಂಡು ವೀಡಿಯೋ ಮಾಡಿಕೊಂಡು ಬರುವರು. ಉಳಿದ ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟವರು ಬೇರೆ ಯವರ ಸಹಕಾರದಿಂದ ಮತಗಟ್ಟೆಗಳಿಗೆ ಬಂದು ವಿದ್ಯುನ್ಮಾನ ಮತಯಂತ್ರಗಳಲ್ಲೇ ತಮ್ಮ ಹಕ್ಕು ಚಲಾಯಿಸಲು ಬಯ ಸಿದ್ದಾರೆ ಎಂದು ಜಿಲ್ಲಾ ಚುನಾವಣಾ ಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಕರ್ತವ್ಯದಲ್ಲಿರುವ ಹಾಗೂ ಖುದ್ದಾಗಿ ಮತ ಚಲಾಯಿಸಲು ಸಾಧ್ಯವಾಗದ ಅಧಿಕಾರಿಗಳಿಗೂ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

Translate »