ನಾಗನಹಳ್ಳಿ ಸ್ಯಾಟಲೈಟ್ ರೈಲ್ವೆ ನಿಲ್ದಾಣ ಕಾಮಗಾರಿಗೆ ಬಜೆಟ್‍ನಲ್ಲಿ ಕನಿಷ್ಠ 200 ಕೋಟಿ ಅನುದಾನ ಕಲ್ಪಿಸಿ
ಮೈಸೂರು

ನಾಗನಹಳ್ಳಿ ಸ್ಯಾಟಲೈಟ್ ರೈಲ್ವೆ ನಿಲ್ದಾಣ ಕಾಮಗಾರಿಗೆ ಬಜೆಟ್‍ನಲ್ಲಿ ಕನಿಷ್ಠ 200 ಕೋಟಿ ಅನುದಾನ ಕಲ್ಪಿಸಿ

February 19, 2021

ಮೈಸೂರು,ಫೆ.18(ಪಿಎಂ)- ಮೈಸೂರು ನಾಗನಹಳ್ಳಿ ಸ್ಯಾಟಲೈಟ್ ರೈಲ್ವೆ ನಿಲ್ದಾಣಕ್ಕೆ ಪ್ರಾರಂಭಿಕವಾಗಿ ಈ ಸಾಲಿನ ಬಜೆಟ್‍ನಲ್ಲಿ ಕನಿಷ್ಠ 200 ಕೋಟಿ ರೂ. ಅನುದಾನ ಕಲ್ಪಿಸುವಂತೆ ಹಾಗೂ ಹುಣಸೂರು ತಾಲೂ ಕಿನ 49 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋ ದನೆ ಜೊತೆಗೆ ಬಜೆಟ್‍ನಲ್ಲಿ ಅನುದಾನ ವನ್ನೂ ದೊರಕಿಸಿಕೊಡಲು ಕೋರಿ ಸಂಸದ ಪ್ರತಾಪ್ ಸಿಂಹ ಗುರುವಾರ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮೈಸೂರು ನಗರವು ಅತ್ಯಂತ ವೇಗ ವಾಗಿ ಬೆಳೆಯುತ್ತಿದ್ದು, ಸಾರ್ವಜನಿಕರು ಸಂಪರ್ಕಕ್ಕಾಗಿ ರೈಲ್ವೆ ಮಾರ್ಗವನ್ನು ಅವ ಲಂಬಿಸಿದ್ದಾರೆ. ಮೈಸೂರು ರೈಲ್ವೆ ನಿಲ್ದಾ ಣದ ಒತ್ತಡವನ್ನು ಕಡಿಮೆಗೊಳಿಸಲು ಹಾಗೂ ಇನ್ನು ಹೆಚ್ಚು ರೈಲುಗಳ ಸಂಪರ್ಕ ಗಳನ್ನು ಒದಗಿಸುವ ನಿಟ್ಟಿನಲ್ಲಿ ಮೈಸೂರು ತಾಲೂಕಿನ ನಾಗನಹಳ್ಳಿಯಲ್ಲಿ ರೈಲ್ವೆ ಸ್ಯಾಟ ಲೈಟ್ ನಿಲ್ದಾಣ ನಿರ್ಮಾಣದ ಯೋಜ ನೆಗೆ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ 2018-19ನೇ ಸಾಲಿನ ಬಜೆಟ್‍ನಲ್ಲಿ ಅನುಮೋದನೆ ನೀಡಿದೆ.

ಸದರಿ ಯೋಜನೆ ಅನುಷ್ಠಾನಗೊಳಿ ಸಲು ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರದಿಂದ ಉಚಿತವಾಗಿ ನೀಡು ವಂತೆ ಹಾಗೂ ಸದರಿ ನಿಲ್ದಾಣದ ಕಾಮ ಗಾರಿಗೆ ಪ್ರಾರಂಭಿಕವಾಗಿ ಈ ಸಾಲಿನ ಬಜೆಟ್‍ನಲ್ಲಿ ಕನಿಷ್ಠ 200 ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವಂತೆ ಪ್ರತಾಪ್ ಸಿಂಹ ಕೋರಿದ್ದಾರೆ.

ಹುಣಸೂರು ತಾಲೂಕಿನ ವ್ಯಾಪ್ತಿಯಲ್ಲಿ ಬತ್ತಿ ಹೋಗಿರುವ 49 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಗೆ ಅಂದಾಜು 63.50 ಕೋಟಿ ರೂ. ಮೊತ್ತದ ಡಿಪಿಆರ್ (ವಿವರವಾದ ಯೋಜನೆ ವರದಿ) ಅನ್ನು ಜಲ ಸಂಪನ್ಮೂಲ ಇಲಾಖೆ ವತಿ ಯಿಂದ ಸಿದ್ಧಪಡಿಸಲಾಗಿದೆ.

ಸದರಿ ಪ್ರಸ್ತಾವನೆಗೆ ಅಂದಾಜು ಪರಿ ಶೀಲನಾ ಸಮಿತಿಯು 2017ರ ಜ.10 ರಂದು ಅನುಮತಿ ನೀಡಿದೆ. ಜೊತೆಗೆ 2017ರ ನ.21ರಂದು ನಡೆದ 60ನೇ ಮಂಡಳಿ ಸಭೆಯು ಅನುಮೋದನೆ ನೀಡಿದೆ. ಸದರಿ ನೀರು ತುಂಬಿಸುವ ಕಾರ್ಯ ತುರ್ತು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಅನುದಾನವನ್ನು ಈ ಬಜೆಟ್‍ನಲ್ಲಿ ಕಲ್ಪಿಸು ವಂತೆ ಪ್ರತಾಪ್ ಸಿಂಹ ಸಚಿವರಿಗೆ ಸಲ್ಲಿ ಸಿದ ಪ್ರತ್ಯೇಕ ಮನವಿಗಳಲ್ಲಿ ಕೋರಿದ್ದಾರೆ.

 

Translate »