ಮೈಸೂರು ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಸೋಂಕು, 23 ಮಂದಿ ಗುಣಮುಖ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಸೋಂಕು, 23 ಮಂದಿ ಗುಣಮುಖ

February 19, 2021

ಮೈಸೂರು, ಫೆ.18(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 23 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 53,834 ಮಂದಿಗೆ ಸೋಂಕು ತಗುಲಿದಂತಾಗಿದೆ. 52,662 ಸೋಂಕಿತರು ಗುಣ ಕಂಡಿದ್ದಾರೆ.

ಇಂದು ಕೊರೊನಾದಿಂದ ಒಂದೂ ಸಾವಿನ ವರದಿಯಾಗಿಲ್ಲ. ಜಿಲ್ಲೆಯಲ್ಲಿನ್ನೂ 143 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 40 ಮಂದಿ ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ-ನಿಗಾ ಕೇಂದ್ರಗಳಲ್ಲಿ 31, ಖಾಸಗಿ ಆಸ್ಪತ್ರೆಗಳು-ನಿಗಾ ಕೇಂದ್ರಗಳಲ್ಲಿ 72 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದ ವಿವರ: ಬಾಗಲಕೋಟೆ, ಬಳ್ಳಾರಿ, ಚಿಕ್ಕಮಗಳೂರು, ಹಾವೇರಿ, ಕೊಡಗು ಜಿಲ್ಲೆಗಳಲ್ಲಿ ಗುರುವಾರ ಒಂದೂ ಕೋವಿಡ್-19 ಪ್ರಕರಣ ವರದಿಯಾಗಿಲ್ಲ. ಬೆಳಗಾವಿ 11, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 256, ಬೀದರ್ 3, ಚಾಮರಾಜ ನಗರ 1, ಚಿಕ್ಕಬಳ್ಳಾಪುರ 3, ಚಿತ್ರದುರ್ಗ 3, ದಕ್ಷಿಣಕನ್ನಡ 20, ದಾವಣಗೆರೆ 4, ಧಾರವಾಡ 6, ಗದಗ್ 3, ಹಾಸನ 5, ಕಲಬುರಗಿ 14, ಕೋಲಾರ 2, ಮಂಡ್ಯ 6, ಮೈಸೂರು 12, ರಾಯಚೂರು 2, ರಾಮನಗರ 3, ಶಿವಮೊಗ್ಗ 6, ತುಮಕೂರು 24, ಉಡುಪಿ 4, ಉತ್ತರಕನ್ನಡ 7, ವಿಜಯಪುರ 3, ಯಾದಗಿರಿ 3 ಮಂದಿ

Translate »