ಕುವೆಂಪು ಮನೆಯಲ್ಲಿ ಕಳ್ಳತನ: ಅಪರಾಧಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ
ಮೈಸೂರು

ಕುವೆಂಪು ಮನೆಯಲ್ಲಿ ಕಳ್ಳತನ: ಅಪರಾಧಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ

January 31, 2020

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ಕವಿ ಮನೆ ಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳಿಗೆ ತೀರ್ಥಹಳ್ಳಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಪದ್ಮವಿಭೂಷಣ ಪದಕ ಸೇರಿದಂತೆ ಇತರೆ ಅಮೂಲ್ಯ ವಸ್ತುಗಳನ್ನು ಖದೀಮರು ಕಳ್ಳತನ ಮಾಡಿದ್ದರು. ಈ ಪ್ರಕರಣದ ಅಪರಾಧಿ ಗಳಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಮೊದಲ ಅಪರಾಧಿ ದಾವಣಗೆರೆ ಜಿಲ್ಲೆಯ ತುರಚಘಟ್ಟದ ಬೆಳಂದೂರಿನ ರೇವಣಸಿದ್ದಪ್ಪ ಈಗಾಗಲೇ ವಿಚಾರಣಾ ಹಂತದಲ್ಲೇ ಮೃತಪಟ್ಟಿದ್ದಾನೆ. ಇನ್ನು ಮೊದಲ ಅಪರಾಧಿ ರೇವಣ ಸಿದ್ದಪ್ಪಗೆ ಪದಕ ಕಳ್ಳತನಕ್ಕೆ ಪ್ರೇರೇಪಿಸಿದ ಕವಿಮನೆಯ ಮಾರ್ಗದರ್ಶಕ ಆಂಜನಪ್ಪ 2ನೇ ಅಪರಾಧಿಯಾಗಿದ್ದು, ಕಳ್ಳತನದ ಮಾಲೆಂದು ಗೊತ್ತಿದ್ದರೂ ಅವು ಗಳನ್ನು ಖರೀದಿ ಮಾಡಿದ್ದ ಸವಳಂ ಗದ ಪ್ರಕಾಶ್ 3ನೇ ಅಪರಾಧಿಯಾಗಿ ದ್ದಾನೆ. ಎರಡು ಮತ್ತು ಮೂರನೇ ಅಪರಾಧಿಗಳಿಗೆ ನ್ಯಾಯಾಲಯವು ತಲಾ 2 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡದ ಹಣ ಕಟ್ಟಲು ವಿಫಲವಾದರೆ, ಮತ್ತೆ 6 ತಿಂಗಳ ಕಾಲ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದೆ.

ಈ ಪ್ರಕರಣ 2015ರ ನ.23ರಂದು ನಡೆದಿತ್ತು. ಖದೀಮರು ಕುವೆಂಪು ಅವರಿಗೆ ಮೈಸೂರು ವಿವಿ ನೀಡಿದ್ದ 2 ಪದಕ, ಕೇಂದ್ರ ಸರ್ಕಾರ ನೀಡಿದ್ದ ಪದ್ಮವಿಭೂಷಣ ಪದಕ, 1 ಸಾವಿರ ನಗದು ಕಳ್ಳತನ ಆಗಿತ್ತು. ಈ ಬಗ್ಗೆ ಕುವೆಂಪು ಪ್ರತಿಷ್ಠಾನದ ಖಜಾಂಚಿ ಮನುದೇವ್ ತೀರ್ಥ ಹಳ್ಳಿ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೆÇಲೀಸರು ಅಂದಿನ ಪಿಎಸ್‍ಐ ಭರತ್‍ಕುಮಾರ್ ಹಾಗೂ ಸಿಪಿಐ ಎಚ್.ಎಂ. ಮಂಜುನಾಥ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿದ್ದರು.

ಕಳ್ಳತನ ಮಾಡಿದ್ದ ಎಲ್ಲಾ ವಸ್ತುಗಳನ್ನು ಪೆÇಲೀಸರು ವಶಕ್ಕೆ ಪಡೆದಿದ್ದರು. ಆದರೆ ಪದ್ಮವಿಭೂಷಣ ಪದಕ ಮಾತ್ರ ಪತ್ತೆಯಾಗಿಲ್ಲ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಡಿ.ಬಿನು ವಾದ ಮಂಡಿಸಿದ್ದರು.

Translate »