ವಿವಿಧ ಜಿಲ್ಲೆಗಳಲ್ಲಿ ಕಳ್ಳತನ: 7 ಮಂದಿ ಖದೀಮರ ಬಂಧನ
ಮಂಡ್ಯ

ವಿವಿಧ ಜಿಲ್ಲೆಗಳಲ್ಲಿ ಕಳ್ಳತನ: 7 ಮಂದಿ ಖದೀಮರ ಬಂಧನ

October 27, 2020

ಮಂಡ್ಯ, ಅ.27- ಮಂಡ್ಯ, ಮೈಸೂರು, ರಾಮನಗರ, ಹಾಸನ, ತುಮಕೂರು ಹಾಗೂ ಬೆಂಗಳೂರು ಜಿಲ್ಲೆಯ ವಿವಿಧೆಡೆ 60 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತು ಗಳನ್ನು ಕಳ್ಳತನ ಮಾಡಿದ್ದ 7 ಮಂದಿ ಆರೋಪಿ ಗಳನ್ನು ಬಂಧಿಸಲಾಗಿದ್ದು, 34 ಪ್ರಕರಣ ಗಳನ್ನು ಭೇದಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶು ರಾಮ್ ಹೇಳಿದರು.

ಮಂಗಳವಾರ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ತಾಲೂಕಿನ ಚಾಕೇನಹಳ್ಳಿ ಗ್ರಾಮದ ಸಿ.ರವಿಕುಮಾರ್ ಅಲಿಯಾಸ್ ರವಿ(39), ಮಂಡ್ಯ ತಾಲೂಕಿನ ಸೂನಗಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಸ್.ಆರ್.ಮಂಜುನಾಥ್ (33), ಎಸ್.ಪಿ.ನಾಗರಾಜು ಅಲಿಯಾಸ್ ನಾಗ(33), ಸಿ.ಬಿ.ಹೇಮಂತ್ ಕುಮಾರ (27), ಕಂಪ್ಯೂಟರ್ ವ್ಯಾಪಾರ ಮತ್ತು ರಿಪೇರಿ ಮಾಡಿಕೊಂಡಿದ್ದ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಎನ್.ವೈ.ರಾಮಕೃಷ್ಣ (46) ಮತ್ತು ಅನ್ನಪೂರ್ಣೇಶ್ವರಿ ನಗರದ ಬಿ.ಜಿ.ವೆಂಕಟೇಶ್(39) ಮತ್ತು ಮಂಡ್ಯ ನಗರದ ವಿವಿ ಪುರಂ ಚೀಲ ವ್ಯಾಪಾರಿ ಸಾದಿಕ್ (50) ಬಂಧಿತ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿರುವ ಮತ್ತೋರ್ವನ ಪತ್ತೆಗೆ ಕ್ರಮವಹಿಸಲಾಗಿದೆ.

ಘಟನೆ ವಿವರ: ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಸಿ.ಫಾರಂ ಗೇಟ್ ಬಳಿ ಇರುವ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್ ಮತ್ತು ಜೆರಾಕ್ಸ್ ಮಿಷನ್, ಕಂಪ್ಯೂಟರ್ ಬ್ಯಾಟರಿ ಮುಂತಾದ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಶಿವಳ್ಳಿ ಠಾಣೆಯಲ್ಲಿ 117/2020 ಕಲಂ 457-380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಧನಂಜಯ, ಡಿವೈಎಸ್‍ಪಿ ನವೀನ್‍ಕುಮಾರ್, ಡಿವೈಎಸ್‍ಪಿ ಪೃಥ್ವಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಎನ್.ವಿ. ಮಹೇಶ್ ನೇತೃತ್ವದಲ್ಲಿ ತಂಡ ರಚಿಸಿ ಈ ಪ್ರಕರಣದ ತನಿಖೆ ನಡೆಸಲು ಕ್ರಮ ವಹಿಸಲಾಗಿತ್ತು. ಈ ಹಿನ್ನಲೆಯಲ್ಲಿ ಈ ಸದರಿ ತಂಡವು ಅ.17ರಂದು ಮಂಡ್ಯ ತಾಲೂಕಿನ ದುದ್ದ ಸರ್ಕಲ್‍ನಲ್ಲಿ ಎಚ್.ಆರ್. ಮಂಜುನಾಥ್, ನಾಗರಾಜು ಮತ್ತು ಅ.18 ರಂದು ಕೆ.ಎಂ.ದೊಡ್ಡಿ ಬಳಿ ಸಿ.ರವಿ ಕುಮಾರ್ ಹಾಗೂ ಅ.22 ರಂದು ಚಿಕ್ಕಕೊಪ್ಪಲು ಬಳಿ ಹೇಮಂತ್ ಎಂಬ ಆರೋಪಿ ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಕೊಂಡು ವಿಚಾರಣೆಗೊಳಪಡಿಸಲಾಯಿತು. ವಿಚಾರಣೆ ವೇಳೆ ರವಿಕುಮಾರ್ ಅಲಿಯಾಸ್ ರವಿ ಕೊಲೆ ಮತ್ತು ಕಿಡ್ನಾಪ್ ಆರೋಪ ಸೇರಿದಂತೆ ನಾಲ್ಕು ಪ್ರಕರಣ ಗಳಲ್ಲಿ ಭಾಗಿಯಾಗಿದ್ದು, ಈತನೂ ಸೇರಿ ದಂತೆ ಮಂಜುನಾಥ್, ಎಸ್.ಪಿ. ನಾಗರಾಜು, ಸಿ.ಬಿ.ಹೇಮಂತ್‍ಕುಮಾರ್ ಇವರುಗಳು ಮಂಡ್ಯ, ರಾಮನಗರ, ಮೈಸೂರು, ಹಾಸನ, ತುಮಕೂರು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕಳ್ಳತನ ಮಾಡಿದ್ದ ಸುಮಾರು 54 ಲಕ್ಷ ರೂಪಾಯಿಗಳ ಬೆಲೆ ಬಾಳುವ ಕಂಪ್ಯೂ ಟರ್‍ಗಳು, ಪ್ರಿಂಟರ್, ಜೆರಾಕ್ಸ್ ಮಿಷನ್ ಮತ್ತು ಬ್ಯಾಟರಿಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಜೊತೆಗೆ 6 ಲಕ್ಷ ಬೆಲೆ ಬಾಳುವ ಬಿಳಿಯ ಬಣ್ಣದ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಕಳ್ಳತನಕ್ಕೆ ಬಳಸಿದ್ದ ಒಂದು ಸ್ಕಾರ್ಪಿಯೋ ಕಾರು, ಒಂದು ಬೊಲೆರೋ ಲಗೇಜ್ ವಾಹನ, ಒಂದು ಟಾಟಾ ಸುಮೊ ಕಾರನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ. ಇನ್ನುಳಿದ ಆರೋಪಿಗಳಾದ ಬಿ.ಜಿ. ವೆಂಕಟೇಶ್, ಸಾದಿಕ್, ರಾಮಕೃಷ್ಣ ಅವರು ಕದ್ದ ಮಾಲುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು ಎಂದರು.

34 ಪ್ರಕರಣಗಳು, ಪತ್ತೆಯಾದ ವಸ್ತುಗಳ ವಿವರ: ರಾಮನಗರದಲ್ಲಿ 1, ಹಾಸನ ಜಿಲ್ಲೆಯಲ್ಲಿ 2, ತುಮಕೂರು ಜಿಲ್ಲೆಯಲ್ಲಿ 5, ಮೈಸೂರು ಜಿಲ್ಲೆಯಲ್ಲಿ 5, ಮಂಡ್ಯ ಜಿಲ್ಲೆಯಲ್ಲಿ 20 ಹಾಗೂ ಬೆಂಗಳೂರು ನಗರದಲ್ಲಿ 1 ಸೇರಿದಂತೆ ಒಟ್ಟು 34 ಪ್ರಕಣಗಳನ್ನು ಭೇದಿಸ ಲಾಗಿದೆ. ಕಂಪ್ಯೂಟರ್- 160, ಬ್ಯಾಟರಿ 16, ಟಿವಿ- 3, ವಾಷಿಂಗ್ ಮಿಷನ್-03, ಜೆರಾಕ್ಸ್ ಮಿಷನ್- 3 ಮತ್ತು ಪ್ರಿಂಟರ್ 1 ಅನ್ನು ಪತ್ತೆ ಮಾಡಿ ಸುಮಾರು 61 ಲಕ್ಷ ಬೆಲೆ ಬಾಳುವ ವಸ್ತುಗಳಾಗಿವೆ ಎಂದು ಅಂದಾಜಿಸಲಾಗಿದೆ.

ಈ ಬಂಧಿತರು ಬಹುತೇಕ ಶಾಲೆಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಶಾಲೆಯ ಸೀರಿಯಲ್ ನಂಬರ್ ಅಥವಾ ಕೋಡ್ ಗಳನ್ನು ತಿಳಿದು ಅವರಿಗೆ ನೀಡಲಾಗುತ್ತದೆ. ಕೆಲವು ಡೀಲರ್‍ಗಳ ಬಳಿಯಿರುವ ಕದ್ದ ಮಾಲುಗಳನ್ನು ಸದ್ಯದಲ್ಲೇ ವಶಕ್ಕೆ ಪಡೆದು ಕೊಳ್ಳಲಾಗುವುದು. ಜೊತೆಗೆ ಅವರ ಮೇಲೂ ಸಹ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗುತ್ತದೆ. ಸದ್ಯಕ್ಕೆ ಆರೋಪಿ ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿ ಸಲಾಗುವುದು. ಆರೋಪಿಗಳೆಲ್ಲರನ್ನೂ ಕೋವಿಡ್‍ಗೆ ಒಳಪಡಿಸಲಾಗಿದೆ. ನಂತರ ಮತ್ತಷ್ಟು ಮಾಹಿತಿಯು ತನಿಖೆಯ ನಂತರ ಸಿಗಲಿದೆ ಎಂದರು. ಗೋಷ್ಠಿಯಲ್ಲಿ ವೃತ್ತ ನಿರೀಕ್ಷಕರಾದ ಕೆ.ಸಂತೋಷ್, ಎನ್.ವಿ.ಮಹೇಶ್, ಡಿವೈಎಸ್‍ಪಿ ಎಲ್.ನವೀನ್‍ಕುಮಾರ್ ಹಾಜರಿದ್ದರು.

 

Translate »