ಬಿಜೆಪಿ ಕೃಷಿ ಮೋರ್ಚಾದಿಂದ ಚೆಸ್ಕಾಂ ಅಧಿಕಾರಿ ಭೇಟಿ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಮನವಿ
ಕೊಡಗು

ಬಿಜೆಪಿ ಕೃಷಿ ಮೋರ್ಚಾದಿಂದ ಚೆಸ್ಕಾಂ ಅಧಿಕಾರಿ ಭೇಟಿ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಮನವಿ

October 27, 2020

ಮಡಿಕೇರಿ, ಅ.27-ಬಿಲ್ ಬಾಕಿ ಪಾವತಿ ಸಿಲ್ಲ ಎಂಬ ನೆಪವೊಡ್ಡಿ ಪರಮಾರ್ಶೆ ಮಾಡದೆ ರೈತರ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಬಿಜೆಪಿ ಕೃಷಿ ಮೋರ್ಚಾ ಪದಾಧಿಕಾರಿಗಳು ಗೋಣಿ ಕೊಪ್ಪ ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರು.

ವಿರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ್ ಮುಂದಾಳತ್ವದಲ್ಲಿ ಗೋಣಿಕೊಪ್ಪಲಿನ ಚೆಸ್ಕಾಂ ಅಧಿಕಾರಿಗಳನ್ನು ಭೇಟಿ ಮಾಡಿದ ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರು, ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದರಲ್ಲದೆ, ರೈತರು ಎದುರಿ ಸುತ್ತಿರುವ ಸಂಕಷ್ಟ ಮನವರಿಕೆ ಮಾಡಿಕೊಟ್ಟರು.

ಚೆಸ್ಕಾಂ ಅಧಿಕಾರಿಗಳು ಮುಖಂಡರ ಮಾತಿಗೆ ಸ್ಪಂದಿಸಿ, ಕೆಲವು ಸಂದರ್ಭಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ರೈತರಿಗೆ ನೋಟಿಸ್ ಜಾರಿಯಾಗಿದೆ. ಈ ಬಗ್ಗೆ ರೈತರು ಆತಂಕಕ್ಕೆ ಒಳಗಾಗುವುದು ಬೇಡ. ಸರ್ಕಾರದ ನಿಯಮದಡಿ ಕೃಷಿ ಚಟುವಟಿಕೆಗೆ ಬಳಸುವ ವಿದ್ಯುತ್‍ಗೆ ಬಿಲ್ ಪಾವತಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ರೈತರು ಕಚೇರಿಗೆ ಆಗಮಿಸಿದ ಸಂದರ್ಭ ಅಧಿಕಾರಿಗಳು ಕಾರ್ಯ ನಿಮಿತ್ತ ಬೇರೆ ಸ್ಥಳದಲ್ಲಿದ್ದರು. ದೂರವಾಣಿ ಮೂಲಕ ಕೃಷಿ ಮೋರ್ಚಾದ ಅಧ್ಯಕ್ಷ ಕಟ್ಟೇರ ಈಶ್ವರ್ ರೈತರ ಅಹವಾಲು ಆಲಿಸುವಂತೆ ಕೋರಿದರು. ಕೂಡಲೇ ಕಚೇರಿಗೆ ಆಗಮಿಸಿದ ಅಧಿಕಾರಿಗಳು ರೈತರ ಸಮಸ್ಯೆ ಆಲಿಸಿ, ಅವರ ಗೊಂದಲಗಳನ್ನು ನಿವಾರಿಸಿದರು.

ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ರೈತರು ತಮ್ಮ ಕೃಷಿ ಭೂಮಿಗೆ ಸರ್ಕಾರದ ನಿಯಮದಂತೆ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಸರ್ಕಾರವು ಕೂಡ ಕೃಷಿ ಚಟುವಟಿಕೆಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಿದೆ. ಆದರೆ ಕೆಲ ಅಧಿಕಾರಿಗಳು ಇದ್ಯಾ ವುದನ್ನು ಪರಿಶೀಲಿಸದೆ ಏಕಾಏಕಿ ರೈತರಿಗೆ ಬಿಲ್ ಪಾವತಿಸಲು ನೋಟಿಸ್ ಜಾರಿ ಮಾಡಿ ದ್ದಾರೆ. ಇದರಿಂದ ರೈತರು ಆತಂಕಕ್ಕೀ ಡಾಗಿದ್ದಾರೆ. ಇನ್ನು ಮುಂದೆ ಈ ರೀತಿಯ ದೂರುಗಳು ಬಾರದಂತೆ ಎಚ್ಚರಿಕೆ ವಹಿಸ ಬೇಕು ಎಂದು ಕಿರುಗೂರು ಗ್ರಾಪಂ ವ್ಯಾಪ್ತಿಯ ಕೃಷಿ ಮೋರ್ಚಾ ಅಧ್ಯಕ್ಷ ಚೆಪ್ಪುಡೀರ ರಾಕೇಶ್ ದೇವಯ್ಯ ಚೆಸ್ಕಾಂ ಎಇಇ ಪ್ರಭಾರ ಅಧಿಕಾರಿ ಅಶೋಕ್‍ಗೆ ಒತ್ತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಕೆಲ ಸಂದರ್ಭಗಳಲ್ಲಿ ಈ ರೀತಿ ವ್ಯತ್ಯಾಸಗಳಾ ಗುತ್ತವೆ. ಇನ್ನು ಮುಂದೆ ಕಿರಿಯ ಅದಿ üಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡ ಲಾಗುವುದು. ಪ್ರಸ್ತುತ ರೈತರ ಸಮಸ್ಯೆ ಗಳನ್ನು ವಾರದೊಳಗಾಗಿ ಬಗೆಹರಿಸ ಲಾಗುವುದು ಎಂದು ಭರವಸೆ ನೀಡಿದರು.

ಅಲ್ಲದೆ ಈ ವೇಳೆ ಅಧಿಕಾರಿ ಅಶೋಕ್ ಅರವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಇಲಾಖೆಯಲ್ಲಿನ ಸಮಸ್ಯೆಗಳನ್ನು ರೈತರ ಮೇಲೆ ಹೇರಬಾರದು. ರೈತರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸು ವಂತೆ ಕಿರಿಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇ ಶನ ನೀಡಬೇಕು. ಸರ್ಕಾದ ಪ್ರಯೋ ಜನಗಳು ರೈತರಿಗೆ ನ್ಯಾಯಯುತವಾಗಿ ಸಿಗುವಂತಾಗಬೇಕು ಎಂದು ಅಶೋಕ್ ಅವರಿಗೆ ಸೂಚಿಸಿದರು.

ಈ ಸಂದರ್ಭ ಕಿರುಗೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಚೆರಿಯಪಂಡ ರಾಜ, ಬೂತ್ ಅಧ್ಯಕ್ಷ ಚೆರಿಯಪಂಡ ಕೀರ್ತನ್, ಬಿಜೆಪಿ ಕೃಷಿ ಮೋರ್ಚಾ ತಾಲೂಕು ಸದಸ್ಯರಾದ ಕಟ್ಟೇರ ಕವನ್, ಕಾಕಮಾಡ ಆದರ್ಶ್, ಕಟ್ಟೇರ ನರೇನ್, ಚೆಪ್ಪುಡೀರ ರಾಕೇಶ್ ದೇವಯ್ಯ, ರೈತ ಮುಖಂಡ ರಾದ ಪೆಮ್ಮಂಡ ವಿಶ್ವನಾಥ್, ಕೊಕ್ಕೆಂಗಡ ಸಚಿನ್, ಕಾಕಮಾಡ ಶಯನ್, ಕಾಕಮಾಡ ಹರೀಶ್, ಕೊಕ್ಕಲೆ ಮಾಡ ತಿಮ್ಮಯ್ಯ, ಕಾಡೇಮಾಡ ಶಾಂತು ಮುಂತಾದವರಿದ್ದರು. ಫೋಟೋ :04