ಗೋಣಿಕೊಪ್ಪ ದಸರಾ ಧಾರ್ಮಿಕ ಕೈಂಕರ್ಯದೊಂದಿಗೆ ಸಮಾಪ್ತಿ
ಕೊಡಗು

ಗೋಣಿಕೊಪ್ಪ ದಸರಾ ಧಾರ್ಮಿಕ ಕೈಂಕರ್ಯದೊಂದಿಗೆ ಸಮಾಪ್ತಿ

October 28, 2020

ಗೋಣಿಕೊಪ್ಪ, ಅ.27-ಗೋಣಿಕೊಪ್ಪ 42ನೇ ವರ್ಷದ ದಸರಾ ಆಚರಣೆ ಧಾರ್ಮಿಕ ಚಟುವಟಿಕೆಗೆ ಸೀಮಿತಗೊಂಡು, ಚಾಮುಂಡೇಶ್ವರಿ ದೇವಿ ಮೂರ್ತಿ ಸಿಸರ್ಜನೆಯೊಂದಿಗೆ ಸಮಾಪ್ತಿಯಾಯಿತು.

ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿ ಯನ್ನು ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಹೊರತೆಂದು ವಾಹನದಲ್ಲಿ ರಿಸಲಾಯಿತು. ಬಳಿಕ ಸರಳವಾಗಿ ನಾಗಸ್ವರ ವಾದನದ ಮೂಲಕ ಸೀಗೆ ತೋಡು ನದಿಗೆ ಕೊಂಡೊಯ್ದು ಮೂರ್ತಿ ವಿಸರ್ಜಿಸಲಾಯಿತು. ಈ ವೇಳೆ ಕಾವೇರಿ ದಸರಾ ಸಮಿತಿ ಅಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಪೂಜಾ ಸಮಿತಿ ಪ್ರಮುಖರಾದ ಡಾ.ಕಾಳಿಮಾಡ ಕೆ.ಶಿವಪ್ಪ, ಸುಮಿ ಸುಬ್ಬಯ್ಯ, ಡಾ.ಕೆ.ಎನ್.ಚಂದ್ರಶೇಖರ್ ಸೇರಿದಂತೆ ಭಕ್ತರಿದ್ದರು.

ಶಾರದಾಂಭ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ನಮ್ಮ ದಸರಾ ಸಮಿತಿ, ನವಚೇತನ ದಸರಾ ಸಮಿತಿ, ಸರ್ವರ ದಸರಾ ಸಮಿತಿ, ನಾಡಹಬ್ಬ ದಸರಾ ಸಮಿತಿ, ಯುವ ದಸರಾ ಸಮಿತಿ, ಭಗವತಿ ದಸರಾ ಸಮಿತಿ, ಸ್ನೇಹಿತರ ಬಳಗ ಸಮಿತಿಗಳು ಪೂಜೆಯಲ್ಲಿ ಪಾಲ್ಗೊಂಡವು.

 

 

 

Translate »