ರಾಜ್ಯದಲ್ಲಿ ನಾಳೆಯಿಂದ ಬಸ್,   ಆಟೋ, ಟ್ಯಾಕ್ಸಿ ಸಂಚಾರ
ಮೈಸೂರು

ರಾಜ್ಯದಲ್ಲಿ ನಾಳೆಯಿಂದ ಬಸ್,  ಆಟೋ, ಟ್ಯಾಕ್ಸಿ ಸಂಚಾರ

May 17, 2020

ಬೆಂಗಳೂರು, ಮೇ 16(ಕೆಎಂಶಿ)- ಜನ ಸಂದಣಿ ಉಂಟಾಗಬಹುದಾದ ಚಟು ವಟಿಕೆ ಹೊರತುಪಡಿಸಿ, ಸೋಮವಾರದಿಂದ ಸಾರ್ವಜನಿಕ ಹಾಗೂ ಖಾಸಗಿ ಸಾರಿಗೆ ಸಂಚಾರ, ವ್ಯಾಪಾರ ವಹಿವಾಟು ಮುಕ್ತಗೊಳ್ಳಲಿದೆ.

ಮೂರನೇ ಹಂತದ ಲಾಕ್‍ಡೌನ್ ನಾಳೆ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿ, 4ನೇ ಹಂತದ ಲಾಕ್‍ಡೌನ್ ಘೋಷಣೆ ಮಾಡಲಿದೆ. ರಾಜ್ಯ ರಸ್ತೆ ಸಾರಿಗೆ ಬಸ್‍ಗಳು, ಆಟೋ ಮತ್ತು ಟ್ಯಾಕ್ಸಿಗಳು ಸೋಮವಾರ ದಿಂದ ಎಂದಿನಂತೆ ರಸ್ತೆಗಿಳಿಯಲಿವೆ.

ಈಗಾಗಲೇ ರಾಜ್ಯ ಸರ್ಕಾರ ಸಾರಿಗೆ ನಿಗಮಕ್ಕೆ ಸೂಚನೆ ನೀಡಿ, ಹವಾನಿಯಂ ತ್ರಿತ ಬಸ್‍ಗಳನ್ನು ಹೊರತುಪಡಿಸಿ, ನಗರ ಸಾರಿಗೆ ಮತ್ತು ಹೊರ ಊರುಗಳಿಗೆ ಬಸ್ ಸಂಚಾರ ಆರಂಭಿಸುವಂತೆ ತಿಳಿಸಿದೆ.

ಆದರೆ ಇದು ಕೇವಲ ರಾಜ್ಯದೊಳಗಿನ ಪ್ರಯಾಣಕ್ಕೆ ಸೀಮಿತವಾಗಿದೆ. ಅಂತರ ಜಿಲ್ಲಾ ಓಡಾಟಕ್ಕೆ ಅವಕಾಶ ಇದೆಯೇ ಹೊರತು, ಅಂತರರಾಜ್ಯಗಳಿಗೆ ನಿಷೇಧ ಮುಂದುವರೆ ದಿದೆ. ಆಟೋ ಮತ್ತು ಟ್ಯಾಕ್ಸಿಗಳು ರಸ್ತೆಗಳಿಗೆ ಇಳಿಯಲು ಅನುವು ಮಾಡಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನೀಡಿರುವಂತೆ ಇವರಿಗೂ ಕೆಲವು ಷರತ್ತುಗಳನ್ನು ವಿಧಿಸಿದೆ.

ಬಸ್‍ಗಳಲ್ಲೇ ಪ್ರಯಾಣಿಸುವವರು ಮೊದಲು ಆರೋಗ್ಯ ತಪಾಸಣೆಗೆ ಒಳಗಾಗ ಬೇಕು. ಮತ್ತು ಅವರು ಎಲ್ಲಿಂದ ಎಲ್ಲಿಗೆ ಹೋಗುತ್ತಾರೆ ಎಂಬ ಪೂರ್ಣ ಮಾಹಿತಿ ಯನ್ನು ನೀಡಬೇಕಾಗಿದೆ. ಬಸ್‍ನಲ್ಲಿ ಕೇವಲ 25ರಿಂದ 28 ಜನರು ಮಾತ್ರ ಪ್ರಯಾಣಿ ಕರು ಪ್ರಯಾಣಿಸಬಹುದು. ಅದೇ ರೀತಿ ಸಾರ್ವಜನಿಕ ಸಂಚಾರದಲ್ಲೂ, ಹತ್ತು ಹಲವು ನಿಬಂಧನೆಗಳನ್ನು ಹೇರಿದೆ.

ಇದೇ 18ರಂದು ಮೂರನೇ ಲಾಕ್‍ಡೌನ್ ಮುಗಿಯುವುದರಿಂದ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗು ವಂತೆ ಸೂಚಿಸಿದೆ. ಸಿಬ್ಬಂದಿ ಸುರಕ್ಷತೆಗಾಗಿ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಗೂ ಸ್ಯಾನಿಟೈಸರ್‍ಅನ್ನು ನಿಗಮವೇ ಸಿಬ್ಬಂದಿಗೆ ಪೂರೈಸುತ್ತದೆ. ಕಾರ್ಯನಿರ್ವಹಿಸುವ ಎಲ್ಲಾ ಬಸ್‍ಗಳಿಗೆ ಪ್ರತಿ ದಿನ ರಸಾಯನಿಕ ಸಿಂಪಡಿ ಸಲು ಆದೇಶಿಸಿದೆ. ಕಂಟೈನ್ಮೆಂಟ್ ವಲಯ ಗಳನ್ನು ಹೊರತುಪಡಿಸಿ ಉಳಿದೆಲ್ಲ ವಲಯ ಗಳಿಗೆ ಆರ್ಥಿಕ ಚಟುವಟಿಕೆಗೆ ಸೋಮ ವಾರದಿಂದ ಮುಕ್ತ ಅವಕಾಶ ದೊರೆಯ ಲಿದೆ. ಸಾಮಾಜಿಕ ಅಂತರ ಕಾಯ್ದು ಕೊಂಡು, ಮಾಸ್ಕ್ ಧರಿಸುವುದು ಕಡ್ಡಾಯ ವಾಗಿದೆ. ಯಾವುದೇ ಕಚೇರಿ, ಕಾರ್ಖಾನೆ ಇಲ್ಲವೆ ಅಂಗಡಿ ಮುಂಗಟ್ಟು ಪ್ರವೇಶಿಸುವ ಮುನ್ನ ಸ್ಯಾನಿಟೈಸರ್ ಬಳಸುವುದು ಕಡ್ಡಾಯ. ರೈಲು ಹಾಗೂ ವಿಮಾನ ಸಂಚಾರ ಸದ್ಯಕ್ಕಿ ದ್ದಂತಿಲ್ಲ. ಮೆಟ್ರೋ ರೈಲು ಸಂಚಾರಕ್ಕೂ ಕೆಲವು ಷರತ್ತುಬದ್ಧ ಅನುಮತಿ ದೊರೆ ಯುವ ಸಾಧ್ಯತೆ ಇದೆ.

ಇನ್ನು ಕ್ಲಬ್ ಮತ್ತು ಫಿಟ್ನೆಸ್‍ನಂತಹ ಸೆಲೂನ್ ಹಾಗೂ ಸ್ಪಾಗಳ ತೆರೆಯಲು ಅವಕಾಶ ಕಲ್ಪಿಸಿದರೂ, ಕೆಲವು ನಿಬಂಧನೆಗಳನ್ನು ವಿಧಿಸಿದೆ. ಈ ತಿಂಗಳ ಅಂತ್ಯದವರೆಗೂ ಆಡಂ ಬರದ ಮದುವೆ, ಧಾರ್ಮಿಕ ಜಾತ್ರಾ ಮಹೋತ್ಸವ, ಸಾಮೂಹಿಕ ಪ್ರಾರ್ಥನೆ, ರಾಜಕೀಯ ಸಮಾವೇಶಗಳಿಗೆ ಅವಕಾಶವಿಲ್ಲ. ಮುಂದಿನ ಆದೇಶದವರೆಗೂ ಶಾಲಾ ಕಾಲೇಜುಗಳು, ಮಾಲ್, ಚಿತ್ರಮಂದಿರ, ಮನರಂಜನೆ ಕೇಂದ್ರಗಳು ತೆರೆಯಲು ಅವಕಾಶವಿಲ್ಲ.

ಶಾಲಾ-ಕಾಲೇಜು ಪ್ರಾರಂಭಿಸಲು ಅನುಮತಿ ಇಲ್ಲ. ಆದರೆ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯ ಆಂಗ್ಲ ಪತ್ರಿಕೆ ಪರೀಕ್ಷೆಯನ್ನು ನಡೆಸಲು ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಸೋಮವಾರ ಸಿಬಿಎಸ್‍ಇ 10 ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಶನಿವಾರ ಈ ವೇಳಾಪಟ್ಟಿ ಪ್ರಕಟಿಸಬೇಕಾಗಿತ್ತಾದರೂ, ತಾಂತ್ರಿಕ ಕಾರಣ ಗಳಿಂದ ಸೋಮವಾರಕ್ಕೆ ಮುಂದೂಡಲಾಗಿದೆ. 10 ವರ್ಷಕ್ಕಿಂತ ಕೆಳಗಿನ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅನಾರೋಗ್ಯ ಪೀಡಿತರು ಮನೆಯಿಂದ ಹೊರ ಬರುವಂತಿಲ್ಲ ಎಂಬ ಸೂಚನೆ ಬರಲಿದೆ. ಅದೇ ರೀತಿ ಹೊರಗೆ ಸಂಚರಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ನಿಯಮ ಮುಂದುವರೆಯಲಿದೆ. ಹೋಟೆಲ್‍ಗಳನ್ನು ಆರಂಭಿಸಲು ಈಗಾಗಲೇ ಅನುಮತಿ ನೀಡಲಾಗಿದ್ದು, ಅದು ಮುಂದುವರೆಯಲಿದೆ. ಆದರೆ ಹೋಟೆಲ್ ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶವಿದ್ದು, ಸೋಮವಾರದಿಂದ ಗ್ರಾಹಕರಿಗೆ 6 ಅಡಿ ಅಂತರದಲ್ಲಿ ಕುಳಿತುಕೊಂಡು ಊಟ ಮಾಡುವ ವ್ಯವಸ್ಥೆಗೆ ಆರೋಗ್ಯ ಇಲಾಖೆಯ ಸಲಹೆ ಪಡೆದು ಅನುಮತಿ ನೀಡಬಹುದೇ? ಎಂಬುದರ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

 

 

 

Translate »