ಬಸ್-ಬೈಕ್ ಡಿಕ್ಕಿ: ಸವಾರನ  ಕಾಲು ಮುರಿತ
ಮೈಸೂರು ಗ್ರಾಮಾಂತರ

ಬಸ್-ಬೈಕ್ ಡಿಕ್ಕಿ: ಸವಾರನ  ಕಾಲು ಮುರಿತ

March 5, 2020

ಹುಣಸೂರು, ಮಾ.4(ಕೆಕೆ)-ಸಾರಿಗೆ ಬಸ್ ಹರಿದು ಬೈಕ್ ಸವಾರನ ಕಾಲು ಮುರಿದಿರುವ ಘಟನೆ ನಗರದ ಬಸ್ ಡಿಪೆÇೀ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಚಿಟ್ಟಕ್ಯಾತನಹಳ್ಳಿ ಗ್ರಾಮದ ನಿವಾಸಿ ಸಿ.ಬಿ.ಕೃಷ್ಣೆಗೌಡ(55) ಅಪಘಾತದಿಂದ ಗಾಯಗೊಂಡವರು. ಇವರು ಇಂದು ಮಧ್ಯಾಹ್ನ ಬೈಕ್(ಕೆಎ45 ಕೆ.0605)ನಲ್ಲಿ ಪಟ್ಟಣದ ಸಾರಿಗೆ ಬಸ್ ಡಿಪೆÇೀ ಬಳಿಯಿಂದ ಚರ್ಚ್ ಕಡೆ ತೆರಳು ತ್ತಿದ್ದ ವೇಳೆ ಮೈಸೂರು ಕಡೆಯಿಂದ ಬಂದ (ಕೆಎ01, ಎಫ್0122) ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಸಿ.ಬಿ.ಕೃಷ್ಣೇಗೌಡ ಬೈಕ್‍ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿ ಚಕ್ರ ಕಾಲಿನ ಮೇಲೆ ಹರಿದಿದ್ದು, ಎಡಗಾಲು ಮುರಿದಿದೆ. ಸ್ಥಳಕ್ಕೆ ಎಸ್‍ಐ ಮಹೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರಲ್ಲದೆ, ಚಾಲಕ ಅರುಣ್‍ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

Translate »