ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು
ಮೈಸೂರು ಗ್ರಾಮಾಂತರ

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

March 5, 2020

ನಂಜನಗೂಡು, ಮಾ.4(ರವಿ/ಚನ್ನಪ್ಪ)- ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪಿ ರುವ ಘಟನೆ ತಾಲೂಕಿನ ಕಡ ಬೂರು ಗ್ರಾಮ ದಲ್ಲಿ ನಡೆದಿದೆ.

ಗ್ರಾಮದ ಚಿಕ್ಕದೇವನಾಯಕ(31) ಮೃತರು. ಇವರು ಮಂಗಳವಾರ ಗ್ರಾಮದ ನುಗು ಹೊಳೆಯಲ್ಲಿ ಮೀನು ಹಿಡಿಯಲು ತನ್ನ ಸಹಚರರೊಂದಿಗೆ ತೆರಳಿದ್ದ ವೇಳೆ ಸಮೀಪವಿದ್ದ ಹೈಟೆನ್ಷನ್ ವಿದ್ಯುತ್ ಮಾರ್ಗದಿಂದ ವಿದ್ಯುತ್ ಪ್ರವಹಿಸಿ ತೀವ್ರ ವಾಗಿ ಗಾಯಗೊಂಡರು. ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಯಾಗದೆ ಅಸುನೀಗಿದ್ದಾರೆ. ಮರಣೋ ತ್ತರ ಪರೀಕ್ಷೆ ಬಳಿಕ ವಾರಸುದಾರ ರಿಗೆ ದೇಹ ಹಸ್ತಾಂತರಿಸಲಾಯಿತು. ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »