ಸವಲತ್ತುಗಳಿಂದ ಮೇದಾರ ಜನಾಂಗ ವಂಚಿತ
ಮೈಸೂರು ಗ್ರಾಮಾಂತರ

ಸವಲತ್ತುಗಳಿಂದ ಮೇದಾರ ಜನಾಂಗ ವಂಚಿತ

March 5, 2020

ತಿ.ನರಸೀಪುರ, ಮಾ.4-ವಿದ್ಯಾಭ್ಯಾಸದ ಕೊರತೆಯಿಂದ ಮೇದಾರ ಜನಾಂಗ ಸರ್ಕಾರದ ಸವಲತ್ತುಗಳಿಂದ ವಂಚಿತ ರಾಗುತ್ತಿದೆ ಎಂದು ಚಿತ್ರದುರ್ಗದ ಇಮ್ಮಡಿ ಬಸವ ಪ್ರಭು ಮೇದಾರ ಕೇತೇಶ್ವರ ಸ್ವಾಮೀಜಿ ವಿಷಾದಿಸಿದರು.

ಪಟ್ಟಣದ ಮೇದರ ಬೀದಿಯ ವಿನಾ ಯಕ ಕಾಲೋನಿಯಲ್ಲಿ ನಡೆದ ಕೇತೇಶ್ವರ ಜ್ಯೋತಿ ಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ಜನಾಂಗ ಎಸ್‍ಟಿ ವರ್ಗಕ್ಕೆ ಸೇರಿದ್ದರೂ ವಿದ್ಯಾಭ್ಯಾಸ ವಿಲ್ಲದೆ, ಸರ್ಕಾರದ ಸವಲತ್ತನ್ನು ಪಡೆ ಯಲು ವಿಫಲರಾಗುತ್ತಿದ್ದೇವೆ. ನಮ್ಮ ಜನಾಂಗ ಬಿದಿರು ನೇಯ್ಗೆ ಕಾಯಕವನ್ನೇ ನಂಬಿದ್ದು, ಪ್ರಸ್ತುತದ ದಿನಗಳಲ್ಲಿ ಕಾಡಿ ನಲ್ಲೂ ಬಿದಿರು ಸಿಗುತ್ತಿಲ್ಲ. ಇದಕ್ಕೆ ಸರ್ಕಾರ ಪರ್ಯಾಯ ವೃತ್ತಿ ಕಲ್ಪಿಸಬೇಕು ಎಂದ ರಲ್ಲದೆ, ಶಿಕ್ಷಣದ ಜೊತೆಗೆ ಸಂಘಟಿತರಾ ದಾಗ ಮಾತ್ರ ಜನಾಂಗಕ್ಕೆ ಸರ್ಕಾರದ ಎಲ್ಲಾ ಸವಲತ್ತು ದಕ್ಕಲಿದೆ ಎಂದರು.

ಚಿತ್ರದುರ್ಗದಿಂದ ಕೇತೇಶ್ವರ ಜ್ಯೋತಿ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದ್ದು, ಏ.13ರಂದು ಚಿತ್ರದುರ್ಗದಲ್ಲಿ ಅಂತ್ಯಗೊಳ್ಳ ಲಿದೆ. ಅಂದು ಬೃಹತ್ ಸಮಾವೇಶ ಏರ್ಪ ಡಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಉಪಮುಖ್ಯಮಂತ್ರಿಗಳು ಹಾಗೂ ಸಚಿವರು, ಶಾಸಕರು ಪಾಲ್ಗೊಳ್ಳುವರು. ಸಮುದಾಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಪುರಸಭಾ ಸದಸ್ಯ ಟಿ.ಎಂ.ನಂಜುಂಡ ಸ್ವಾಮಿ ಮಾತನಾಡಿದರು. ಇದೇ ಸಂದರ್ಭ ದಲ್ಲಿ ಇಮ್ಮಡಿ ಬಸವಪ್ರಭು ಮೇದಾರ ಕೇತೇಶ್ವರ ಸ್ವಾಮೀಜಿಗಳನ್ನು ಗೌರವಿಸಲಾ ಯಿತು. ಮೇದಾರ ಗುರುಪೀಠ ಟ್ರಸ್ಟ್‍ನ ಅಧ್ಯಕ್ಷ ಸಿ.ಸಿ.ಪಾಟೀಲ್, ಉಪಾಧ್ಯಕ್ಷ ಕುಬೇರಪ್ಪ, ಗಣೇಶ್ ಅರಳಿಕಟ್ಟೆ, ಸರೋಜ ಪಾಟೀಲ್, ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಶಂಕರ ನಾಯಕ್, ಮೇದಾರ ಜನಾಂಗದ ತಾಲೂಕು ಅಧ್ಯಕ್ಷ ಮಹದೇವು, ಬಸವರಾಜು, ಶಿವಣ್ಣ, ಕೃಷ್ಣ, ಹನುಮಶೆಟ್ಟಿ ಕಾರ್ಯಕ್ರಮದಲ್ಲಿದ್ದರು.

Translate »