ಜೆಎಸ್‍ಎಸ್ ಮೈಸೂರು ಅರ್ಬನ್‍ಹಾತ್‍ನಲ್ಲಿ ಕುಶಲಕಲೆಯ ಸಂಗಮ
ಮೈಸೂರು

ಜೆಎಸ್‍ಎಸ್ ಮೈಸೂರು ಅರ್ಬನ್‍ಹಾತ್‍ನಲ್ಲಿ ಕುಶಲಕಲೆಯ ಸಂಗಮ

March 5, 2020

ಮೈಸೂರು, ಮಾ.4- ಅಲ್ಲಿ ಕೌಶಲದ ಸಂಗಮವಾಗಿದೆ. ಕುಶಲ ಕರ್ಮಿಗಳ ಸಮಾಗಮವಿದೆ. ರಾಜ್ಯದ ಸಾಧಕ ನಾರೀ ಶಕ್ತಿ ಸಮಾವೇಶಗೊಂಡಿದೆ. ಕುಶಲ ಕಲೆಗಳ ಸೌಂದರ್ಯ, ಹಸ್ತಕೌಶಲದ ಸೊಬಗಿನ ಅನಾವರಣವಾಗಿದೆ….

ಇಷ್ಟೊಂದು ವೈವಿಧ್ಯ ಒಟ್ಟುಗೂಡಿರು ವುದು ಕುಶಲಕರ್ಮಿಗಳಿಗೆ, ಕುಶಲ ಕಲೆ ಗಳನ್ನು, ಸ್ವಸಹಾಯ ಗುಂಪುಗಳನ್ನು ಪೆÇ್ರೀತ್ಸಾಹಿಸಿ ಅವರಿಗೆ ಬೆನ್ನೆಲುಬಾಗಿ ನಿಂತಿ ರುವ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಒಂದೇ ಸೂರಿನಡಿ ಇವೆಲ್ಲ ವನ್ನೂ ಕಣ್ತುಂಬಿಸಿಕೊಳ್ಳಬಹುದು. ಖರೀದಿ ಯನ್ನೂ ಮಾಡಬಹುದು. ಮನಸ್ಸನ್ನೂ ತಣಿಸಿಕೊಳ್ಳಬಹುದು.

ರಿಂಗ್ ರಸ್ತೆಯ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಡೇ-ನಲ್ಮ್ ಅಭಿಯಾನ ದಡಿಯ ಮಹಿಳಾ ಸ್ವ-ಸಹಾಯ ಗುಂಪು ಗಳು ತಯಾರಿಸಿದ ಉತ್ಪನ್ನಗಳ ರಾಜ್ಯಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭಗೊಂಡಿದ್ದು, ಮಾರ್ಚ್ 8ರವರೆಗೆ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ನಡೆಯುವ ಈ ಕಾರ್ಯ ಕ್ರಮದಲ್ಲಿ ನಗರ ಪ್ರದೇಶಗಳ ಸ್ವ-ಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಸೊಬಗನ್ನು ವೀಕ್ಷಿಸಿ ಆಸ್ವಾದಿಸಿಕೊಳ್ಳಬಹುದು.

ಕರ್ನಾಟಕ ಸರ್ಕಾರದ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕೇಂದ್ರ ಸರ್ಕಾರದಿಂದ ಪುರಸ್ಕೃತವಾದ ದೀನ ದಯಾಳ್ ಅಂತ್ಯೋ ದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಮಹಿಳಾ ಸ್ವ ಸಹಾಯ ಗುಂಪುಗಳನ್ನು ರಚಿಸಿ ಅವರು ಉತ್ಪಾದಿಸಿದ ವಸ್ತುಗಳ ಸಂಗ್ರಹ ಇಲ್ಲಿದೆ. ಈ ಮೂಲಕ ಸ್ವಸಹಾಯ ಸಂಘಗಳನ್ನು, ನಾರಿ ಶಕ್ತಿಯನ್ನು ಆರ್ಥಿಕವಾಗಿ ಇನ್ನಷ್ಟು ಬಲಿಷ್ಠಗೊಳಿಸಲು ಇದು ಸಹಕಾರಿಯಾಗಿದೆ.

Artistic confluence at the JSS Mysore Urbanhat-1

ಆಕರ್ಷಣೀಯ ಕರಕುಶಲ ವಸ್ತುಗಳು, ಕೈಮಗ್ಗ ವಸ್ತ್ರಗಳು, ಕೈಮಗ್ಗದ ರೇಷ್ಮೆ ಮತ್ತು ಕಾಟನ್ ಸೀರೆಗಳು, ಕೈಮಗ್ಗದ ಹೊದಿಕೆ ಗಳು, ವಿವಿಧ ಲೋಹ, ಜರಿ ಕಸೂತಿಗಳು, ಸಿದ್ಧ ಉಡುಪುಗಳು, ಚರ್ಮ ಮತ್ತು ಮರ ಗಳಿಂದ ಮಾಡಿದ ಆಟಿಕೆ ಮತ್ತು ಬೊಂಬೆಯ ಸಾಮಾನುಗಳು, ಗೃಹಬಳಕೆಯ ವಸ್ತು ಗಳು, ಉತ್ತರ ಕರ್ನಾಟಕದ ರುಚಿಕರವಾದ ತಿಂಡಿ ಪದಾರ್ಥಗಳು, ಕಸೂತಿ ಮಾಡಿದ ಬ್ಯಾಗುಗಳು, ಕೃತಕ ಆಭರಣಗಳು, ತಾಮ್ರ ದಿಂದ ತಯಾರಿಸಿದ ಪಾತ್ರೆಗಳು, ಮುತ್ತಿನ ಮತ್ತು ಏಲಕ್ಕಿ ಹಾರ, ಮಹಿಳೆಯರ ವ್ಯಾನಿಟಿ ಬ್ಯಾಗ್‍ಗಳು, ಸೆಣಬಿನ ಚೀಲಗಳು, ಪಾದ ರಕ್ಷೆಗಳು, ಕಸೂತಿ ಸೀರೆಗಳು, ಆಕರ್ಷ ಣೀಯ ಆಲಂಕಾರಿಕ ವಸ್ತುಗಳು ವಸ್ತು ಪ್ರದರ್ಶನದಲ್ಲಿ ಇವೆ.

ಬಗೆ ಬಗೆ ಆಕರ್ಷಣೆ: ಸಾಮಾನ್ಯವಾಗಿ ವಸ್ತುಪ್ರದರ್ಶನ, ಮೇಳಗಳಲ್ಲಿ ವಿದೇಶಿ ವಸ್ತು ಗಳು, ಬಹುರಾಷ್ಟ್ರೀಯ ಕಂಪನಿಗಳ ವಸ್ತು ಗಳೇ ತುಂಬಿರುತ್ತವೆ. ಆದರೆ, ಈ ನಗರ ಸಮೃದ್ಧಿ ಮೇಳದಲ್ಲಿ ಗ್ರಾಮೀಣ, ನಗರ ಪ್ರದೇಶದ ಮಹಿಳೆಯರೇ ತಯಾರಿಸಿದ ವಸ್ತುಗಳು ಇರುವುದು ವಿಶೇಷ. ಪ್ರತಿ ಉತ್ಪನ್ನ ದಲ್ಲೂ ಮಹಿಳೆಯರ ಶ್ರಮದ ಗುರುತು ಇದೆ.

ವಿವಿಧ ಬಗೆಯ ಹೂದಾನಿಗಳು, ಆಕ ರ್ಷಕವಾದ ಕೃತಕ ಹೂಗಳು, ಆಲಂ ಕಾರಿಕ ವಸ್ತುಗಳು ಮೇಳದಲ್ಲಿವೆ. ಸಿದ್ಧ ಗೊಂಡಿರುವ ಉತ್ಪನ್ನಗಳ ಜತೆಗೆ, ಅವು ಗಳ ಸಿದ್ಧತೆಯ ಪ್ರಗತಿಯನ್ನೂ ವೀಕ್ಷಿಸಲು ಅವಕಾಶವಿದೆ. ಈ ಕಾರಣದಿಂದಲೇ ಈ ಮೇಳ ವಿಶಿಷ್ಟ ಎನಿಸುತ್ತದೆ.

Artistic confluence at the JSS Mysore Urban Haat-2

ಮಹಿಳೆಯರೇ ತಯಾರಿಸಿರುವ ಪಾದ ರಕ್ಷೆಗಳು, ರೇಷ್ಮೆ ಮತ್ತು ಹತ್ತಿಯ ಸೀರೆ ಗಳು, ಸಣ್ಣ ಪರ್ಸ್‍ನಿಂದ ಹಿಡಿದು ದೊಡ್ಡ ಚೀಲದವರೆಗಿನ ಉತ್ಪನ್ನಗಳು ಆಕರ್ಷಕ ವಾಗಿವೆ. ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಉತ್ತಮ ದರ್ಜೆಯ ಉತ್ಪನ್ನಗಳು ಲಭ್ಯವಾ ಗುವುದು ಈ ಮೇಳದ ವೈಶಿಷ್ಟ್ಯ. ಅಲ್ಲದೆ, ಗ್ರಾಹಕರು ನೇರವಾಗಿ ಉತ್ಪಾದಕರ ಜತೆಗೆ ವಿಚಾರಗಳ ವಿನಿಮಯ ಮಾಡಿಕೊಳ್ಳಲೂ ಇದು ನೆರವಾಗುತ್ತಿದೆ.

ಸಿಂಧನೂರಿನ ಶಿವಶಕ್ತಿ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿರುವ ಮುತ್ತಿನ ಹಾರ, ಏಲಕ್ಕಿ ಹಾರಗಳಂತೂ ಮನ ಸೆಳೆ ಯುತ್ತಿವೆ. ಕೊಳ್ಳೇಗಾಲದ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿರುವ ರೇಷ್ಮೆ ಸೀರೆ ಯಂತೂ ನೀರೆಯರನ್ನು ಆಕರ್ಷಿಸುತ್ತಿದೆ. ಅಲ್ಲದೆ, ರೇಷ್ಮೆ ಗೂಡಿನಿಂದ ಸಿದ್ಧಗೊಂಡಿ ರುವ ಹಾರವಂತೂ ಮೇಳದ ಆಕರ್ಷಣೆ ಗಳಲ್ಲಿ ಪ್ರಮುಖ ಎನಿಸಿಕೊಂಡಿದೆ.

ಬಟ್ಟೆಯಿಂದ ತಯಾರಿಸಿರುವ ಗೊಂಬೆ ಗಳು, ಜೂಲಾ, ಹೆಣೆದು ಮಾಡಿರುವ ಆಲಂ ಕಾರಿಕ ವಸ್ತುಗಳೂ ಮನಸೆಳೆಯುತ್ತಿವೆ. ಸೌಂದರ್ಯ ಸಾಧನಗಳು, ಬಳೆಗಳು, ಅಲಂ ಕರಿಸಿದ ಗೊಂಬೆಗಳೂ ಮೇಳದಲ್ಲಿ ಮನ ಸೆಳೆಯುತ್ತಿವೆ. ರಾಯಚೂರು ಜಿಲ್ಲೆ ಸಿಂಧ ನೂರಿನ ರೇಣುಕಾ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿರುವ ಕೌದಿ ಆಕರ್ಷಕವಾಗಿವೆ.

ಬಿದಿರಿನ ಉತ್ಪನ್ನಗಳ ಆಗರ: ಈ ಬಾರಿಯ ಮೇಳದಲ್ಲಿ ಬಿದಿರಿನಿಂದ ತಯಾರಿಸಿದ ವಿವಿಧ ವಸ್ತುಗಳಿಗೆ ಭಾರಿ ಬೇಡಿಕೆ ವ್ಯಕ್ತವಾ ಗುತ್ತಿದೆ. ಬಿದಿರಿನಿಂದ ಯಾವೆಲ್ಲ ವಸ್ತುಗ ಳನ್ನು ತಯಾರಿಸಲಾಗುತ್ತದೋ ಅವುಗಳ ಸಣ್ಣ ಮಾದರಿಗಳನ್ನು ಪ್ರದರ್ಶಿಸಲಾ ಗುತ್ತಿದೆ. ಬೀಸಣಿಕೆ, ಗಾಳಿ ಗಿರಿಕೆ, ಮಂಕರಿ, ಮೊರ, ಇಡ್ಲಿ ಬಟ್ಟಲುಗಳು ಇವೆ. ಇವು ಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯ ಕ್ಷಿಕೆಯೂ ನಡೆಯುತ್ತಿರುವುದು ವಿಶೇಷ. ಈ ಕಾರಣದಿಂದಲೇ ಹೆಚ್ಚು ಕಲಾಸಕ್ತರು ಇವುಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇವಷ್ಟೇ ಅಲ್ಲದೆ, ಬಿದಿರಿನಿಂದ ತಯಾರಿಸಲಾದ ಆಲಂ ಕಾರಿಕ ವಸ್ತುಗಳೂ ಮನಸೆಳೆಯುತ್ತಿವೆ.

ಬಗೆ ಬಗೆ ಖಾದ್ಯಗಳು, ಕುರುಕಲು ತಿಂಡಿ ಗಳು, ಫಿನಾಯಿಲ್, ಸೋಪ್ ಪೌಡರ್ ಗಳು, ಗೃಹ ಅಲಂಕಾರ ವಸ್ತುಗಳೂ, ಜೂಟ್ ಮತ್ತು ಉಲ್ಲನ್ ವಸ್ತುಗಳೂ ಮೇಳದಲ್ಲಿವೆ.ಸ್ವಚ್ಛ ಭಾರತಕ್ಕೆ ತನ್ನದೇ ಕೊಡುಗೆ ನೀಡುತ್ತಿರುವ ಭದ್ರಾವತಿಯ ಚೇತನ ಸ್ವಸ ಹಾಯ ಸಂಘದ ಉತ್ಪನ್ನಗಳು ಆಕರ್ಷ ಣೀಯವೂ ಮಾದರಿ ಎನಿಸುವಂತೆಯೂ ಇವೆ.

ಬಟ್ಟೆ ಚೀಲಗಳು, ಪೇಪರ್, ಸೆಣಬಿನ ಚೀಲಗಳನ್ನು ತಯಾರಿಸಿ ಅದಕ್ಕೆ ಕೇಂದ್ರ ಸರ್ಕಾರವು ಆರಂಭಿಸಿರುವ ಸ್ವಚ್ಛಭಾರತದ ಲಾಂಛನವನ್ನೂ ಹಾಕಲಾಗಿದೆ. ಈ ಮೂಲಕ ಪ್ಲಾಸ್ಟಿಕ್ ತ್ಯಜಿಸಿ ಪರಿಸರಕ್ಕೆ ಪೂರಕವಾಗಿ ರುವ ವಸ್ತುಗಳನ್ನು ಬಳಸುವಂತೆ ಜಾಗೃತಿ ಯನ್ನೂ ಮೂಡಿಸಲಾಗುತ್ತಿದೆ.

ಇಳಕಲ್ ಸೀರೆಯ ಪ್ರಾತ್ಯಕ್ಷಿಕೆ: ಮೇಳ ದಲ್ಲಿ ನಾರಿ ಶಕ್ತಿಯ ನೈಜ ಅನಾವರಣ ವಾಗುವುದು ಇಳಕಲ್‍ನ ಪಾರ್ವತೀಪರಮೇ ಶ್ವರ ಸ್ವಸಹಾಯ ಸಂಘದ ಮಳಿಗೆಯಲ್ಲಿ. ಈ ಮಳಿಗೆಯಲ್ಲಿ ಇಳಕಲ್ ಸೀರೆಯ ವೈಭವ ಅನಾವರಣಗೊಂಡಿದೆ. ಅದೇ ರೀತಿ ಸೀರೆ ನೇಯ್ಗೆಗೆ ಕೈಮಗ್ಗವನ್ನೇ ಬಳಸುತ್ತಿರುವುದು ವಿಶೇಷ. ಕುಶಲಕರ್ಮಿ ಶಂಕರಮ್ಮ ಅವರು ಆಸಕ್ತರಿಗೆ ಸೀರೆ ನೇಯ್ಗೆಯ ಮಾಹಿತಿ ಯನ್ನೂ ನೀಡುತ್ತಿದ್ದಾರೆ. ಅವರ ಆಸಕ್ತಿ, ಉತ್ಸಾಹ, ನಿಪುಣತೆ ಕುತೂಹಲ ಮೂಡಿಸುತ್ತದೆ.

ಒಟ್ಟಿನಲ್ಲಿ ಮೇಳವು ಹಲವು ವೈಶಿಷ್ಟ್ಯ ಗಳ ಆಗರವೂ, ಹಲವು ಕೌಶಲಗಳ ಸಮಾಗಮವೂ ಆಗಿದೆ. ಮೇಳಕ್ಕೆ ಪ್ರವೇಶ ಉಚಿತವಾಗಿದ್ದು, ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶ ವಿದೆ. ಜತೆಗೆ ಶುಚಿ, ರುಚಿಯಾದ ಆಹಾರವೂ ಲಭ್ಯವಿದೆ.

Translate »