ಬಸ್ ಸಂಚಾರ ಅಸ್ತವ್ಯಸ್ತ; ಗ್ರಾಮೀಣ ಶಿಕ್ಷಕರಿಗೆ ಸಂಕಷ್ಟ
ಮೈಸೂರು

ಬಸ್ ಸಂಚಾರ ಅಸ್ತವ್ಯಸ್ತ; ಗ್ರಾಮೀಣ ಶಿಕ್ಷಕರಿಗೆ ಸಂಕಷ್ಟ

July 8, 2020

ಮೈಸೂರು, ಜು.7(ಎಸ್‍ಪಿಎನ್)- ಗ್ರಾಮೀಣ ಪ್ರದೇಶದಲ್ಲಿ ಜಿಟಿಜಿಟಿ ಮಳೆ. ಮತ್ತೊಂದೆಡೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಪರಿಣಾಮ ಕೆಲ ಹಳ್ಳಿಗಳು ಸ್ವಪ್ರೇರಣೆಯಿಂದ ಲಾಕ್‍ಡೌನ್ ಆಗುತ್ತಿವೆ. ಇದರಿಂದ ಗ್ರಾಮಾಂತರ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರ ಅಸ್ತ ವ್ಯಸ್ತಗೊಂಡಿದೆ. ಇದರ ಬಿಸಿ ಮೈಸೂರು ನಗರದಿಂದ ತಾಲೂಕು, ಹೋಬಳಿ ಕೇಂದ್ರಗಳಿಗೆ ನಿತ್ಯ ಸಂಚರಿಸುವ ಸರ್ಕಾರಿ ಕಚೇರಿಗಳ ಸಿಬ್ಬಂದಿ ಮತ್ತು ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಶಿಕ್ಷಕ ವರ್ಗ ದವರಿಗೆ ತಟ್ಟಿದೆ.

ಮೈಸೂರು ನಗರ ಮತ್ತು ತಾಲೂಕು ಕೇಂದ್ರಗಳಿಂದ ಸರ್ಕಾರಿ ನೌಕರರ, ಶಿಕ್ಷಕ ವರ್ಗದವರು ಜಿಲ್ಲೆಯ ಗಡಿ ಭಾಗದ ಕಚೇರಿ, ಶಾಲೆಗಳಿಗೆ ಜು.6ರವರೆಗೂ ಬಸ್ ನಲ್ಲಿ ಸಂಚರಿಸುತ್ತಿದ್ದರು. ಆದರೆ, ಜು.7ರಿಂದ ಎಲ್ಲಾ ಗ್ರಾಮೀಣ ಮಾರ್ಗದ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದ ರಿಂದ ಕೆಲಸಕ್ಕೆ ಹಾಜರಾಗುವುದೇ ಕಷ್ಟ ವಾಗಿದೆ ಎಂದು ಸರ್ಕಾರಿ ನೌಕರರು ಮತ್ತು ಶಿಕ್ಷಕ ವರ್ಗದವರು `ಮೈಸೂರು ಮಿತ್ರ’ ಬಳಿ ಅಳಲು ತೋಡಿಕೊಂಡಿದ್ದಾರೆ.

ಹಾಜರಿ ವಿನಾಯ್ತಿಗೆ ಮನವಿ: ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಪುರುಷ ಸಿಬ್ಬಂದಿ ತಮ್ಮ ಸ್ವಂತ ವಾಹನಗಳಲ್ಲಿ ನಿತ್ಯ ಹೋಗಿ ಬರುತ್ತಾರೆ. ಆದರೆ, ಮಹಿಳಾ ನೌಕ ರರು ಮತ್ತು ಶಿಕ್ಷಕಿಯರ ಓಡಾಟಕ್ಕೆ ಬಸ್ ಸಂಚಾರ ಇಲ್ಲದ ಕಾರಣ ತೊಂದರೆ ಯಾಗುತ್ತಿದೆ. ಹಾಗಾಗಿ ಬಸ್ ಸಂಚಾರ ಆರಂಭವಾಗುವವರೆಗೆ ಶಿಕ್ಷಕಿಯರ ಹಾಜ ರಾತಿಗೆ ವಿನಾಯ್ತಿ ನೀಡಲಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ: ಜೂನ್ ತಿಂಗಳಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಆ ಭಾಗಕ್ಕೆ ಬಸ್ ಸೇವೆ ಪುನಾರಂಭ ಗೊಂಡಿತ್ತು. ಇತ್ತೀಚೆಗೆ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರಿ ಬಸ್‍ನಲ್ಲಿ ಸಂಚರಿಸುವವರ ಸಂಖ್ಯೆಯೇ ಕಡಿಮೆ ಯಾಗಿದೆ ಎಂದು ಕೆಎಸ್‍ಆರ್‍ಟಿಸಿ ಸಿಬ್ಬಂದಿ ತಿಳಿಸಿದ್ದಾರೆ.

ಕೆಎಸ್‍ಆರ್‍ಟಿಸಿಯ ನಂಜನಗೂಡು ಡಿಪೋದಿಂದ ನಿತ್ಯ ಸಂಚರಿಸುತ್ತಿದ್ದ 70 ರೂಟ್‍ಗಳ ಬಸ್‍ಗಳ ಸೇವೆಯಲ್ಲಿ ವ್ಯತ್ಯಯ ವಾಗಿದೆ. ಹೆಚ್ಚಿನ ಪ್ರಯಾಣಿಕರಿದ್ದರಷ್ಟೇ ಆ ಮಾರ್ಗಗಳಲ್ಲಿ ಬಸ್ ಸೇವೆ ಆರಂಭಿಸು ವುದಾಗಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳು ತ್ತಿದ್ದಾರೆ. ಹಾಗಾಗಿ ಗ್ರಾಮೀಣ ಭಾಗಕ್ಕೆ ಬಸ್ ಸೇವೆ ಲಭ್ಯವಾಗಿಲ್ಲ ಎನ್ನುತ್ತಾರೆ ಶಿಕ್ಷಕಿಯರು ಹೀಗೆ ಸಮಸ್ಯೆಯ ಚಿತ್ರಣ ನೀಡಿದ್ದಾರೆ.

ಹೆಚ್ಚಿನ ಪ್ರಯಾಣಿಕರಿದ್ದರೆ ಬಸ್: ಜಿಲ್ಲೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ 5 ದಿನಗಳಿಂದ ಸರ್ಕಾರಿ ಬಸ್‍ಗಳಲ್ಲಿ ಹೆಚ್ಚಿನ ಪ್ರಯಾಣಿ ಕರು ಸಂಚರಿಸುತ್ತಿಲ್ಲ. ಬಹಳಷ್ಟು ಮಾರ್ಗ ಗಳಲ್ಲಿ ಖಾಲಿ ಬಸ್ ಸಂಚರಿಸಿವೆ. ಹಾಗಾಗಿ, ಪ್ರಯಾಣಿಕರು ಲಭ್ಯವಿರುವ ಮಾರ್ಗ ಗಳಿಗೆ ಮಾತ್ರವೇ ಬಸ್ ಸಂಚಾರ ನಡೆಸು ವಂತೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಮೌಖಿಕ ವಾಗಿ ತಿಳಿಸಲಾಗಿದೆ ಎಂದು ಮೈಸೂರು ಗ್ರಾಮಾಂತರ ಸಂಚಾರ ವಿಭಾಗದ ಅಧಿ ಕಾರಿ ಹೇಮಂತ್‍ಕುಮಾರ್ ತಿಳಿಸಿದ್ದಾರೆ.

Translate »