ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹ: ಟ್ರೈನಿ ಸ್ಟಾಫ್‍ನರ್ಸ್ ಪ್ರತಿಭಟನೆ
ಮೈಸೂರು

ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹ: ಟ್ರೈನಿ ಸ್ಟಾಫ್‍ನರ್ಸ್ ಪ್ರತಿಭಟನೆ

July 8, 2020

ಮೈಸೂರು, ಜು.7(ಎಂಕೆ)- ಕೆ.ಆರ್. ಆಸ್ಪತ್ರೆಯಲ್ಲಿ ಶಿಷ್ಯವೇತನ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಟ್ರೈನಿ ಸ್ಟಾಫ್‍ನರ್ಸ್‍ಗಳು 2ನೇ ದಿನವೂ ಪ್ರತಿ ಭಟನೆ ಮುಂದುವರಿಸಿದ್ದು, ಶಿಷ್ಯವೇತನ ಹೆಚ್ಚಳ ಮಾಡುವಂತೆ ಹಾಗೂ ವಿಮಾ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದರು.

ಕೆ.ಆರ್.ಆಸ್ಪತ್ರೆ ಎದುರು ಮಂಗಳವಾರ ಬೆಳಿಗ್ಗೆ ಜಮಾವಣೆಗೊಂಡ ಟ್ರೈನಿ ಸ್ಟಾಫ್ ನರ್ಸ್‍ಗಳು, ನಾವು 150 ಮಂದಿ ಕಳೆದ 10 ವರ್ಷಗಳಿಂದ ಶಿಷ್ಯವೇತನ ಆಧಾರದ ಮೇಲೆಯೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ತಿಂಗಳಿಗೆ ಕೇವಲ 10 ಸಾವಿರ ರೂ. ಶಿಷ್ಯವೇತನ ನೀಡಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ನಮಗೆ ಯಾವುದೇ ಜೀವವಿಮೆ ಸೌಲಭ್ಯವನ್ನೂ ಒದಗಿಸಿಲ್ಲ ಎಂದು ಅಳಲು ತೋಡಿಕೊಂಡರು.

ಈ ಸಂಬಂಧ 3-4 ಬಾರಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ನಿರ್ದೇಶಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮನವಿ ನೀಡಿದಾಗೆಲ್ಲಾ ಸಲ್ಲದ ಕಾರಣ ಹೇಳಿ ಸಾಗಹಾಕುತ್ತಾರೆ. ನಮ್ಮ ಬೇಡಿಕೆ ಈಡೇ ರದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟ ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಟ್ರೈನಿ ಸ್ಟಾಫ್‍ನರ್ಸ್‍ಗಳಾದ ರಮೇಶ್ ಕುಮಾರ್, ರಾಣಿ, ಮಹಾಲಕ್ಷ್ಮಿ, ಧನಲಕ್ಷ್ಮಿ, ಉಷಾ, ಸಂತೋಷ್, ರವಿ, ಕವಿತಾ, ನಂದಿನಿ, ಚೈತ್ರ ಮತ್ತಿತರರಿದ್ದರು.

 

 

Translate »