ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ಡಿ.12ರಂದು ಉಪ ಚುನಾವಣೆ
ಮೈಸೂರು

ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ಡಿ.12ರಂದು ಉಪ ಚುನಾವಣೆ

November 18, 2019

ಬೆಂಗಳೂರು: ಕೇಂದ್ರ ಚುನಾ ವಣಾ ಆಯೋಗ ಕರ್ನಾಟಕದಲ್ಲಿ ಮತ್ತೊಂದು ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಡಿಸೆಂ ಬರ್ 12ರಂದು ಮತದಾನ ನಡೆಯ ಲಿದ್ದು, ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾ ವಣೆ ನಡೆಯಲಿದೆ. ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ. ಡಿಸೆಂ ಬರ್ 12ರಂದು ಕರ್ನಾಟಕ ವಿಧಾನ ಸಭೆಯಿಂದ ರಾಜ್ಯಸಭಾ ಸದಸ್ಯರ ಆಯ್ಕೆಗೆ ಉಪ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಬಿಜೆಪಿ ಸೇರಿ ದರು. ಬಿಜೆಪಿ ಸೇರುವಾಗ ಅವರು ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೂ ರಾಜೀ ನಾಮೆ ನೀಡಿದರು. 2020ರ ಜೂನ್ 30ರ ತನಕ ಅವರ ಅವಧಿ ಇತ್ತು. ಈಗ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.

Translate »