ಚಾಮುಂಡಿಬೆಟ್ಟದ ನಂದಿಗೆ ದ್ರವ್ಯ, ಫಲ, ಪತ್ರೆ, ಪುಷ್ಪಗಳಿಂದ ಮಹಾಭಿಷೇಕ
ಮೈಸೂರು

ಚಾಮುಂಡಿಬೆಟ್ಟದ ನಂದಿಗೆ ದ್ರವ್ಯ, ಫಲ, ಪತ್ರೆ, ಪುಷ್ಪಗಳಿಂದ ಮಹಾಭಿಷೇಕ

November 18, 2019

ಮೈಸೂರು: ಚಾಮುಂಡಿ ಬೆಟ್ಟದ ಬೃಹತ್ ನಂದಿಗೆ ಭಾನುವಾರ 38 ವಿಧದ ದ್ರವ್ಯ, ಫಲ, ಪತ್ರೆ, ಪುಷ್ಪಾದಿಗಳಿಂದ ಮಹಾಭಿಷೇಕ ನೂರಾರು ಭಕ್ತರ ಸಮ್ಮುಖ ದಲ್ಲಿ ನಡೆಯಿತು. ಪ್ರತೀ ವರ್ಷ ಕಾರ್ತಿಕ ಮಾಸದ 3ನೇ ಭಾನುವಾರ ಬೆಟ್ಟದ ಬಳಗ ಚಾರಿಟೆಬಲ್ ಟ್ರಸ್ಟ್ ಬೆಟ್ಟದ ನಂದಿಗೆ ಮಹಾ ಭಿಷೇಕ ನಡೆಸುತ್ತಾ ಬಂದಿದ್ದು, ಇದು 14ನೇ ವರ್ಷದ ಅಭಿಷೇಕವಾಗಿದೆ.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ ಬೃಹತ್ ನಂದಿಗೆ ವಿಷೇಷ ಪೂಜಾ ಕಾರ್ಯ ನೆರವೇ ರಿಸಿದರು. ಸ್ವಾಮಿಗೆ ಸಂಕಲ್ಪ ನೆರವೇರಿಸಿದ ಬಳಿಕ ನಂದಿಗೆ ನಾನಾ ವಿಧದ ಫಲ, ಪುಷ್ಪ, ಪತ್ರೆ, ದ್ರವ್ಯಗಳಿಂದ ಅಭಿಷೇಕ ನೆರವೇರಿಸ ಲಾಯಿತು. ಪಾದ್ಯ, ಅಘ್ರ್ಯ, ಆಚಮನ, ಮಧು ಫಲ, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಬಾಳೆಹಣ್ಣು, ದ್ರಾಕ್ಷಿ, ಬೆಲ್ಲ, ಖರ್ಜೂರ, ಸೌತೆಕಾಯಿ, ಎಲ್ಲಾ ಬಗೆಯ ಹಣ್ಣು, ಕಬ್ಬಿನ ರಸ, ಎಳನೀರು, ತೈಲ, ಗೋದಿಹಿಟ್ಟು, ಕಡಲೆ ಹಿಟ್ಟು, ಹೆಸರಿಟ್ಟು, ದರ್ಬೆ, ಅರಿಶಿನ, ಕುಂಕುಮ, ಸಿಂಧೂರ, ರಕ್ತಚಂದನ, ಭಸ್ಮ (ವಿಭೂತಿ), ಶ್ರೀಗಂಧ, ಪತ್ರೆಗಳು, ಪುಷ್ಪಗಳು, ನಾಣ್ಯ, ಪಂಚಾಮೃತ ಅಭಿಷೇಕಗಳು ನಡೆದವು. ಬಳಿಕ ಅಲಂಕರಿಸಿ, ಅಷ್ಟೋತ್ತರ ನೆರವೇರಿಸಿ ಮಹಾಮಂಗಳಾರತಿಯೊಂದಿಗೆ ಅಭಿಷೇಕ ಪೂಜಾ ಕಾಂiÀರ್iಗಳು ಪೂರ್ಣಗೊಂಡವು.

10 ಮಂದಿ ಮುಖ್ಯ ಪುರೋಹಿತರು ಅಭಿ ಷೇಕ ಕಾರ್ಯದಲ್ಲಿ ಭಾಗವಹಿಸಿದ್ದರು. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ನಡೆಸಲಾಗುವ ಅಭಿಷೇಕಕ್ಕೆ ಉದ್ಯಮಿ ರಫೀಕ್ ಪ್ರತಿ ವರ್ಷದಂತೆ ಈ ವರ್ಷವೂ 150 ಲೀ. ಹಾಲಿನ ಕೊಡುಗೆ ನೀಡಿದ್ದರು. ಅಭಿಷೇಕಕ್ಕೆ ಒಟ್ಟು 4 ಲಕ್ಷ ರೂ. ಖರ್ಚಾಗಿದ್ದು, ಇದರಲ್ಲಿ ದಾನಿಗಳೇ 3 ಲಕ್ಷದಷ್ಟು ನೆರವಾಗಿದ್ದಾ ರೆಂದು ಟ್ರಸ್ಟ್‍ನ ಪದಾಧಿಕಾರಿಗಳು ತಿಳಿಸಿದರು.

ಅಭಿಷೇಕ ಸಂದರ್ಭದಲ್ಲಿ ವಿವಿಧ ವರ್ಣ ಗಳಿಂದ ಆಕರ್ಷಿಸುತ್ತಿದ್ದ ನಂದಿಯನ್ನು ಕಂಡ ಭಕ್ತರು, ನಂದಿ ಹಾಗೂ ಚಾಮುಂಡಿ ದೇವಿಗೆ ಜೈಕಾರ ಹಾಕಿದರು. ಅಭಿಷೇಕದ ವರ್ಣರಂಜಿತ ದೃಶ್ಯವನ್ನು ಭಕ್ತರು ಮೊಬೈಲ್ ಗಳಲ್ಲಿ ಸೆರೆ ಹಿಡಿದರು. ಅನೇಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಮಹಾ ಭಿಷೇಕದ ನಂತರ ಸುಮಾರು 4 ಸಾವಿರ ಜನರಿಗೆ ಬಿಸಿ ಬೇಳೆಬಾತ್, ಮೊಸರನ್ನ, ಸಿಹಿ ಪೊಂಗಲ್, ಲಾಡು ಪ್ರಸಾದ ವಿನಿಯೋಗಿ ಸಲಾಯಿತು. ಮಹಾಭಿಷೇಕದ ನೇತೃತ್ವವನ್ನು ಬೆಟ್ಟದ ಬಳಗ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಎಸ್.ಪ್ರಕಾಶ್, ಕಾರ್ಯದರ್ಶಿ ವಕೀಲ ಎಸ್.ಗೋವಿಂದ್, ಪದಾಧಿಕಾರಿಗಳಾದ ವಿ.ಎನ್.ಸುಂದರ್, ಸುರೇಶ್, ಟ್ರಸ್ಟಿಗಳಾದ ಎಎಸ್‍ಐ ಸುಬ್ಬಣ್ಣ, ಬ್ಯಾಂಕ್ ಶಿವಕುಮಾರ್, ಶಂಕರ್ ಇನ್ನಿತರರು ವಹಿಸಿದ್ದರು. ಕಳೆದ ತಿಂಗಳು ಮಳೆ ಸಂದರ್ಭದಲ್ಲಿ ಬೆಟ್ಟದ ನಂದಿ ರಸ್ತೆ ಕುಸಿದಿರುವ ಹಿನ್ನೆಲೆಯಲ್ಲಿ ಅದು ಇನ್ನೂ ದುರಸ್ತಿಯಾಗಿಲ್ಲ. ಹಾಗಾಗಿ ವ್ಯೂ ಪಾಯಿಂಟ್ ಕಡೆಯಿಂದ ನಂದಿ ರಸ್ತೆಗೆ ಯಾರೂ ಹೋಗ ದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಉತ್ತನಹಳ್ಳಿ ರಸ್ತೆ ಕಡೆಯಿಂದ ಬೆಟ್ಟದ ನಂದಿಗೆ ಜನ ವಾಹನಗಳಲ್ಲಿ ಬರಲು ತೊಂದರೆ ಇರ ಲಿಲ್ಲ. ಪ್ರತೀ ವರ್ಷ ಬೆಟ್ಟದ ನಂದಿ ಅಭಿಷೇಕಕ್ಕೆ ಸಾವಿರಾರು ಮಂದಿ ಸೇರುತ್ತಿದ್ದರು. ಆದರೆ ಈ ಬಾರಿ ಭಕ್ತರ ಸಂಖ್ಯೆ ಕಡಿಮೆ ಇತ್ತು.

Translate »