ಲಕ್ಷ್ಮೀಕಾಂತನಗರದಲ್ಲಿ ಜಿಲ್ಲಾ ಸಚಿವರಿಂದ  ಅಮರಶಿಲ್ಪಿ ಜಕಣಾಚಾರಿ ವೃತ್ತ ಉದ್ಘಾಟನೆ
ಮೈಸೂರು

ಲಕ್ಷ್ಮೀಕಾಂತನಗರದಲ್ಲಿ ಜಿಲ್ಲಾ ಸಚಿವರಿಂದ ಅಮರಶಿಲ್ಪಿ ಜಕಣಾಚಾರಿ ವೃತ್ತ ಉದ್ಘಾಟನೆ

January 26, 2022

ಮೈಸೂರು,ಜ.25(ಆರ್‍ಕೆಬಿ)-ಮೈಸೂರಿನ ಹೆಬ್ಬಾಳು ಒಂದನೇ ವಾರ್ಡ್ ಲಕ್ಷ್ಮೀ ಕಾಂತನಗರದಲ್ಲಿ ಅಮರಶಿಲ್ಪಿ ಜಕಣಾಚಾರಿ ವೃತ್ತದ ನಾಮಫಲಕವನ್ನು ಜ.28ರಂದು ಬೆಳಗ್ಗೆ 11.30 ಗಂಟೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅನಾವರಣಗೊಳಿಸಲಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳ ವಾರ ಮೈಸೂರು ಜಿಲ್ಲಾ ವಿಶ್ವಕರ್ಮ ಅಮರ ಶಿಲ್ಪಿ ವೇದಿಕೆ ಅಧ್ಯಕ್ಷ ಎಸ್.ನಾಗರಾಜು ಸುದ್ದಿ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಬೇಲೂರು, ಹಳೇಬೀಡು, ಸೋಮನಾಥಪುರ, ಬಾದಾಮಿ, ಐಹೊಳೆ ದೇವಸ್ಥಾನ ಹಾಗೂ ಗೋಪುರಗಳನ್ನು ತಮ್ಮ ಶಿಲ್ಪ ಕಲೆಯ ಚಾಕ ಚಕ್ಯತೆಯ ಕೆತ್ತನೆಯಿಂದ ಅಮರಶಿಲ್ಪಿ ಎಂದು ಖ್ಯಾತರಾದ ಜಕಣಾ ಚಾರಿ ಅವರ ಹೆಸರಿನಲ್ಲಿ ಮೈಸೂರಿನಲ್ಲಿ ವೃತ್ತವೊಂದಕ್ಕೆ ನಾಮಕರಣ ಮಾಡಲು ಮೈಸೂರು ಮಹಾನಗರಪಾಲಿಕೆ ಮಾನ್ಯತೆ ನೀಡಿದೆ. ಹೀಗಾಗಿ ಅಂದು ಸಮಾಜದ ಹಿರಿಯ ನಾಯಕರಾದ ಕೆ.ಪಿ. ನಂಜುಂಡಿ ಹಾಗೂ ರಘು ಆಚಾರ್ ಅವರ ಸಾರಥ್ಯದಲ್ಲಿ ಈ ನಾಮಕರಣ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ, ಪಾಲಿಕೆ ಸದಸ್ಯೆ ಲಕ್ಷ್ಮೀ ಶಿವಣ್ಣ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವೇದಿಕೆ ಗೌರವ ಅಧ್ಯಕ್ಷ ದಕ್ಷಿಣಾ ಮೂರ್ತಿ, ಪದಾಧಿಕಾರಿಗಳಾದ ಎನ್.ಸ್ವಾಮಿ, ಪುಟ್ಟಸೋಮಾಚಾರ್, ವಸಂತ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಕೆ.ಎನ್.ಶಾಂತಮ್ಮ ಉಪಸ್ಥಿತರಿದ್ದರು.

Translate »