ಕಫ್ರ್ಯೂ; ಅನಗತ್ಯವಾಗಿ ರಸ್ತೆಗಿಳಿದರೆ ಕ್ರಮ
ಮೈಸೂರು

ಕಫ್ರ್ಯೂ; ಅನಗತ್ಯವಾಗಿ ರಸ್ತೆಗಿಳಿದರೆ ಕ್ರಮ

April 29, 2021

ಕೆ.ಆರ್.ನಗರ, ಏ.28(ಕೆಟಿಆರ್)-ರಾಜ್ಯಾದ್ಯಂತ 14 ದಿನಗಳ ಕಟ್ಟುನಿಟ್ಟಿನ ಕೊರೊನಾ ಕಫ್ರ್ಯೂ ಇರುವುದರಿಂದ ಬೆಳಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ರಸ್ತೆಗಿಳಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಎಚ್ಚರಿಸಲಾಯಿತು.

ಪಟ್ಟಣದಲ್ಲಿಂದು 14 ದಿನದ ಕಫ್ರ್ಯೂ ಮೊದಲ ದಿನವಾದಂದು ಪೊಲಿಸ್ ಸಬ್‍ಇನ್ಸ್‍ಪೆಕ್ಟರ್ ಚೇತನ್ ನೇತೃತ್ವದಲ್ಲಿ ವಾಹನಗಳ ತಪಾಸಣೆ ಮಾಡಲಾಯಿತು. ಪಟ್ಟಣದಲ್ಲಿ 10 ಗಂಟೆಯ ನಂತರ ಕಫ್ರ್ಯೂ ಘೋಷಿಸಿದ್ದರೂ ಅನಗತ್ಯ ಓಡಾಡ ನಡೆಸುವ ವಾಹನಗಳನ್ನು ತಡೆದು ಪರಿಶೀಲಿಸಿ, ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪುನರಾವರ್ತನೆಯಾದರೆ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಬೆಳಗ್ಗೆ 6 ರಿಂದ 10 ಗಂಟೆಯ ಒಳಗೆ ನಿಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಿ. ತದನಂತರ ಅನಗತ್ಯವಾಗಿ ರಸ್ತೆಗೆ ಬರದೆ ಕೊರೊನಾ ಮಹಾಮಾರಿ ಓಡಿಸಲು ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅವಶ್ಯಕ ವಾಹನಗಳಾದ ಸರಕು ಸಾಗಣಿಕೆಗೆ ಯಾವುದೇ ನಿರ್ಬಧವಿಲ್ಲ. ಹಾಗೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಾಗೂ ಆರೋಗ್ಯ ಸಿಬ್ಬಂದಿÀ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲವೆಂದರು. ಒಟ್ಟಿನಲ್ಲಿ ರಾಜ್ಯಾದ್ಯಂತ 14 ದಿನಗಳ ಕಫ್ರ್ಯೂಗೆ ಪಟ್ಟಣದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ

Translate »